ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು

ಚಾಮರಾಜನಗರ, ಅ. 18- ಅಖಂಡ ಹಿಂದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಆರ್‍ಎಸ್‍ಎಸ್‍ನ ಮೈಸೂರು ವಿಭಾಗದ ಸಂಚಾಲಕ ವೆಂಕಟರಾಮ್ ಇಲವಾಲ ತಿಳಿಸಿದರು.
ತಾಲೂಕಿನ ಸಂತೇಮಹರಳ್ಳಿ ಶ್ರೀ ಮಹದೇಶ್ವರ ದೇವಸ್ಥಾನ ಮುಂಭಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಗುರುವಾರ ಸಾಯಂಕಾಲ ನಡೆದ ಪ್ರಾಥಮಿಕ ಶಿಕ್ಷಾವರ್ಗ ಶಿಬಿರದ ಸಮರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಧ್ಯೇಯೋದ್ದೇಶಗಳ ಬಗ್ಗೆ ಹೇಳುತ್ತಾ, ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಅಕ್ರಮಣವಾಗುತ್ತಿದ್ದು, ಕೌಟುಂಬಿಕ ವ್ಯವಸ್ಥೆಯನ್ನು ಹಾಳು ಮಾಡುವಂತಹ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತಗೊಂಡು ಆತಂಕ ಸೃಷ್ಟಿ ಮಾಡುತ್ತಿವೆ. ಹಿಂದೂ ಕುಟುಂಬ ಎಂದರೆ ಮೂರು ತಲೆಮಾರಿನ ಜನರು ಒಟ್ಟಿಗೆ ವಾಸಿಸಬೇಕು. ಅವರ ಅನುಭವ ಮತ್ತು ಕಲಿಕೆ ಕುಟುಂಬದಿಂದಲೇ ನಡೆಯಬೇಕಾಗಿದೆ. ನಮ್ಮ ಸಂಸ್ಕೃತಿಯನ್ನು ಹಾಳುಗೆಡುವಂತಹ ಸಂಬಂಧಗಳ ನಾಶಿಸಿ ಹೋಗುವಂತಹ ಸ್ಥಿತಿ ಟಿವಿ ಹಾಗು ಮೊಬೈಲ್ ತಂದೊಡ್ಡಿದೆ. ಟಿವಿಯಲ್ಲಿ ಬರುವಂತಹ ಕಾರ್ಯಕ್ರಮಗಳು ನಮಗೆ ಅರಿವಿಲ್ಲದೇ ನಮ್ಮ ಭಾವನೆಯನ್ನು ಇತರಡೆಗೆ ಆಕರ್ಷಿಸುತ್ತಿದೆ. ಕುಟುಂಬಗಳು ವಿಭಜನೆಯಾಗುತ್ತಿವೆ. ಸಂಬಂಧಗಳಿಗೆ ಅರ್ಥವಿಲ್ಲದಂತಾಗಿದೆ. ಮೊಬೈಲ್ ಬಳಕೆ ಸಂಬಂಧಗಳಿಗೆ ಅರ್ಥವಿಲ್ಲದಂತೆ ಮಾಡಿದೆ. ಇಂಥ ಸಂಸ್ಕೃತಿಯ ವಿರುದ್ದ ಹೆಚ್ಚು ಜಾಗೃತರಾಗಬೇಕಾಗಿದೆ.
ನಾಡ ಹಬ್ಬ ದಸರಾ ಆಚರಣೆ ದುಷ್ಠರ ಸಂಹಾರ, ಶಿಷ್ಟರ ರಕ್ಷಣೆಯ ಸಂಕೇತವಾಗಿದೆ. ನಾಡದೇವತೆ ಚಾಮುಂಡೇಶ್ವರಿಯನ್ನು ನವ ಅವತಾರದಲ್ಲಿ ಪೂಜೆಸುವ ಪರಂಪರೆಯನ್ನು ನಾವು ಹೊಂದಿದ್ದೇವೆ. ಇದರ ವಿರುದ್ದವಾಗಿ ವಿಕೃತ ಮನಸ್ಥಿತಿಯುಳ್ಳವರು ನಾಡ ದೇವತೆಗೆ ಅಪಮಾನ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಲು ಮಹಿಷಿ ದಸರಾ ಆಚರಣೆಗೆ ಮುಂದಾಗಿರುವುದು ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆಯ ಅಕ್ರಮಣವಾಗಿದೆ. ಇಂಥ ಶಕ್ತಿಗಳ ವಿರುದ್ದ ಹಿಂದುಗಳು ಒಗ್ಗಟ್ಟಿನಿಂದ ವಿರೋಧಿಸಬೇಕಾಗಿದೆ. ವೈಚಾರಿಕತೆಯನ್ನು ಉಳಿಸಭೇಕಾಗಿದೆ ಎಂದರು.
ಹಿಂದೂ ಧರ್ಮವನ್ನು ಜಾತಿ ವ್ಯವಸ್ಥೆಯಡಿಯಲ್ಲಿ ಹೊಡೆಯುವ ಪ್ರಯತ್ನ ಹಿಂದಿನಿಂದಲು ನಡೆಯುತ್ತಿದೆ ಬಂದಿದೆ. ವೈವಿದ್ಯತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಇದು ಸಾಧ್ಯವಿಲ್ಲ. ಜಾತಿ ವ್ಯವಸ್ಥೆ, ಅಸೃಸ್ಪತೆ ವಿರುದ್ದ ಆರ್‍ಎಸ್‍ಎಸ್ ನಿರಂತರ ಹೋರಾಟ ಮಾಡುತ್ತಿದೆ. ನಾವೆಲ್ಲರು ಹಿಂದುಗಳು ಎಂಬ ಭಾವನೆಯೊಂದಿಗೆ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಗೊಲ್ಲರಹಟ್ಟಿಯಲ್ಲಿ ಸಂಸದರು ದಲಿತರು ಎಂಬ ಕಾರಣಕ್ಕೆ ಅವರನ್ನು ಊರಿಗೆ ಬಿಟ್ಟು ಕೊಡಲಿಲ್ಲ. ವಿಚಾರ ತಿಳಿದು ಆರ್‍ಎಸ್‍ಎಸ್‍ನ ಸ್ವಯಂ ಸೇವಕರು ಅಲ್ಲಿಗೆ ತೆರಳಿ ಅಲ್ಲಿನವರ ಮನಸ್ಸು ಬದಲಾಯಿಸಿ, ಒಂದೇ ವಾರದಲ್ಲಿ ಸಂಸದರಿಗೆ ಅಹ್ವಾನ ನೀಡಿ, ಪುಷ್ಪವೃಷ್ಠಿಯೊಂದಿಗೆ ಅವರನ್ನು ಗ್ರಾಮಕ್ಕೆ ಬರಮಾಡಿಕೊಳ್ಳುವಂತೆ ಮಾಡಿದೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಮತಾಂತರ ಹೆಚ್ಚಾಗಿ ನಡೆಯುತ್ತಿದೆ. ಅನ್ಯ ಧರ್ಮಿಯರು ಹಿಂದೂಗಳನ್ನು ವ್ಯಾಪಾರ ಸರಕಾಗಿ ಮಾಡಿಕೊಂಡಿದ್ದಾರೆ. ಅಸೆ ಅಮಿಷಗಳನ್ನು ತೋರಿಸಿ, ಅವರನ್ನು ಮಾರಾಟ ಮಾಡುತ್ತಿದೆ. ಇದರ ವಿರುದ್ದ ನಮ್ಮ ಸ್ವಯಂ ಸೇವಕರು ಧ್ವನಿಯತ್ತಬೇಕು. ಅಲ್ಲಿನ ಜನರ ಸಂಕಷ್ಠಗಳಿಗೆ ಸ್ಪಂದಿಸಿ, ಅವರಿಗೆ ಸರ್ಕಾರದ ಸವಲತ್ತುಗಳು ದೊರೆಯುವಂತೆ ಮಾಡಬೇಕು. ಮುಗ್ಧ ಜನರನ್ನು ಮತಾಂತರಕ್ಕೆ ಪ್ರಚೋದಿಸುವವರ ವಿರುದ್ದ ಹೋರಾಟ ನಡೆಸಬೇಕಾಗಿದೆ ಎಂದು ವೆಂಕಟರಾಮ್ ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯದರ್ಶಿ ಎನ್‍ರಿಎಚ್ ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲರು ಭಾರತಾಂಬೆಯ ಮಕ್ಕಳು. ಮೊದಲು ಜನ್ಮ ನೀಡಿದ ತಾಯಿಗೆ ಋಣಿಯಾಗಿರಬೇಕು. ಹಿಂದೂ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಪ್ರಬಲವಾಗವಾಗುತ್ತಿದೆ. ಯುವಶಕ್ತಿಯಲ್ಲಿ ಶಿಸ್ತು, ಸಂಯಮ ಹಾಗು ದೇಶಭಕ್ತಿಯನ್ನು ಮೂಡಿಸಿ, ಅವರನ್ನು ದೇಶದ ಅಸ್ತಿಯನ್ನಾಗಿ ಮಾಡುತ್ತಿದೆ. ಇಂಥ ಶಿಬಿರಗಳು ದೇಶದ ರಕ್ಷಣೆ ಹಾಗೂ ಅಭಿವೃದ್ದಿಗೆ ಪೂರಕವಾಗಿದೆ. ಸಂತೇಮರಹಳ್ಳಿಯಲ್ಲಿ 10 ದಿನಗಳು ನಡೆದ ಕಾರ್ಯಾಗಾರ ಬಹಳ ಅರ್ಥಪೂರ್ಣವಾಗಿತ್ತು. ಮಧ್ಯಾಹ್ನ ನಡೆದ ಪಥ ಸಂಚಲನ ದೇಶ ಭಕ್ತಿಯನ್ನು ಇಮ್ಮಡಿಗೊಳಿಸಿತು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶನ ಮಾಡಿದರು. ಸಮಾರಂಭಕ್ಕು ಮುನ್ನಾ ಪ್ರಮುಖ ಬೀದಿಗಳಲ್ಲಿ ಘನಾವೇಶಧಾರಿಗಳ ಪಥ ಸಂಚಲನ ನಡೆಯಿತು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಬಿ. ಆನಂದ್ ಹಾಗೂ ಪ್ರಮುಖರು ಭಾಗವಹಿಸಿದ್ದರು.

Leave a Comment