ಹಿಂದೂ ನಾಯಕನಿಗೆ ಹಲ್ಲೆ: ಇಬ್ಬರ ಸೆರೆ

ಮಂಗಳೂರು, ಜೂ. ೧೯- ಗಾಯಾಳುವನ್ನು ಸಾಗಿಸುತ್ತಿದ್ದ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೇಕಾಬಿಟ್ಟಿ ಆಟೋರಿಕ್ಷಾ ಚಲಾಯಿಸುತ್ತಿದ್ದವನನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಆಟೋರಿಕ್ಷಾ ಚಾಲಕ ತನ್ನ ಎಂಟು ಮಂದಿ ಸಹಚರರೊಂದಿಗೆ ಹಲ್ಲೆ ನಡೆಸಿದ ಘಟನೆ ನಿನ್ನೆ ಸಂಜೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಸಮೀಪ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಮದನಿ ನಗರದ ನಾಸಿರ್ ಮತ್ತು ಹಸೈನಾರ್ ನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುತ್ತಾರಿನ ಹರ್ಷ ಫೈನಾನ್ಸ್ ಮಾಲಕ, ಹಿಂದೂಜಾಗರಣ ವೇದಿಕೆ ಮುಖಂಡ ಹರೀಶ್ (೪೧) ಹಲ್ಲೆಗೊಳಗಾದವರು. ನಿನ್ನೆ ಸಂಜೆ ಕಾರಿನಲ್ಲಿ ದೇರಳಕಟ್ಟೆಯ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ.

ಇಂದಿರಾ ಎಂಬವರ ತಲೆಗೆ ತೆಂಗಿನ ಕಾಯಿ ಬಿದ್ದು ಗಂಭೀರ ಗಾಯಗೊಂಡಿದ್ದು, ತನ್ನ ಕಾರಿನಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಈ ವೇಳೆ ಆಟೋರಿಕ್ಷಾ ಚಾಲಕನೊಬ್ಬ ಬೇಕಾಬಿಟ್ಟಿ ಚಲಾಯಿಸಿದ್ದುದರಿಂದ ಚಾಲಕನನ್ನು ಹರೀಶ್ ಅವರು ತರಾಟೆಗೆ ತೆಗೆದುಕೊಂಡಿದ್ದರು. ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದ ಹರೀಶ್ ಅವರನ್ನು ಕಾಯುತ್ತಿದ್ದ ಆಟೋರಿಕ್ಷಾ ಎಂಟು ಮಂದಿ ಸಹಚರೊಂದಿಗೆ ಕೈಗಳಿಂದ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Comment