ಹಿಂದೂಗಳ ಪ್ರಬಲ ವಾದದಿಂದ ಗೆಲುವು

ನವದೆಹಲಿ, ನ. ೧೦: ಅಯೋಧ್ಯೆಯ ವಿವಾದಿತ ರಾಮ ಜನ್ಮ ಭೂಮಿಯ ಮೇಲೆ ತಮ್ಮ ಹಕ್ಕು ಪ್ರತಿಪಾದನೆ ಮಾಡುವ ವಿಷಯವಾಗಿ ಸುಪ್ರೀಂ ಕೋರ್ಟಿನಲ್ಲಿ ಹಿಂದೂಗಳು ಪ್ರಬಲವಾದ ಸಾಕ್ಷ್ಯಾಧಾರ ಮಂಡಿಸಿ, ಅಷ್ಟೇ ಪ್ರಬಲವಾಗಿ ತಮ್ಮ ವಾದ ಮಂಡನೆ ಮಾಡಿದ್ದರಿಂದಲೇ ಅವರು ಗೆಲುವು ಸಾಧಿಸಲು ಸುಲಭವಾಯಿತು; ಈ ವಿಷಯದಲ್ಲಿ ಮುಸ್ಲೀಮ್ ವಕ್ಫ್ ಮಂಡಳಿ ವಿಫಲವಾದ ಕಾರಣ ಅವರಿಗೆ ಬಾಬ್ರಿ ಮಸೀದಿ ದಕ್ಕಲಿಲ್ಲ ಎನ್ನಲಾಗಿದೆ.
ಬಾಬರಿ ಮಸೀದಿ ಗುಮ್ಮಟದ ಕೆಳಗೆ ಒಳಗಿನ ಗರ್ಭ ಗುಡಿಯೇ ಶ್ರೀರಾಮನ ನಿಜವಾದ ಜನ್ಮಸ್ಥಾನ; ಅಲ್ಲಿ ನಿರಂತರವಾಗಿ ಶ್ರೀರಾಮನ ಪೂಜಾದಿಗಳು ನಡೆದುಕೊಂಡು ಬಂದಿವೆ ಎಂಬ ಸಂಗತಿಯನ್ನು ಹಿಂದು ಸಂಘಟನೆಗಳು ಸಾಬೀತುಪಡಿಸಿದವು. ವಿವಾದಿತ ಜಾಗವನ್ನು ೩ ಭಾಗಗಳಾಗಿ ವಿಂಗಡಿಸಿ ಹಂಚಿಕೆ ಮಾಡಿದ್ದ ಈ ಹಿಂದಿನ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ‘ದೋಷಪೂರಿತ’ ಎಂದು ಸುಪ್ರೀಂ ಕೋರ್ಟ್ ಹೇಳಿತಾದರೂ ಹಿಂದೂಗಳು ಮಂಡಿಸಿದ ಸಾಕ್ಷ್ಯಾಧಾರಗಳ ಗುಣಮಟ್ಟ ಅತ್ಯುತ್ತಮವಾಗಿವೆ ಎಂಬ ಸಂಗತಿಯೇ ಪಂಚಪೀಠದ ಐವರೂ ನ್ಯಾಯಮೂರ್ತಿಗಳನ್ನು ಪ್ರಭಾವಿಸಿದವು. ಬಾಬರಿ ಮಸೀದಿಯ ಬಳಕೆಯನ್ನು ಮುಸ್ಲೀಮರು ೧೮೫೭ರಲ್ಲೇ ಕೈಬಿಟ್ಟಿದ್ದರು ಎಂಬ ಹಿಂದೂಗಳ ವಾದವನ್ನು ಆ ಕಾಲದಲ್ಲೇ ನ್ಯಾಯಾಲಯ ಪುರಸ್ಕರಿಸುತ್ತಿತ್ತೋ ಏನೋ! ಆದರೆ ಕೂದಲೆಳೆ ಅಂತರದಲ್ಲಿ ಆಗ ಮುಸ್ಲೀಮರು ಈ ಅಪಾಯದಿಂದ ಪಾರಾಗಿದ್ದರು. ಆದರೂ ಇದೀಗ ಹಿಂದೂಗಳ ಈ ವಾದವನ್ನು ಸುಪ್ರೀಂ ಕೋರ್ಟ್ ಅಲ್ಲಗಳೆದಿದೆ.

Leave a Comment