ಹಿಂದು ಮುಸ್ಲೀಂ ಭಾವೈಕ್ಯತೆಯ ಪೀರಲು ದೇವರ ಉತ್ಸವ

ಹಿರಿಯೂರು.ಸೆ.11: ಹಿರಿಯೂರಿನ ಚಿಕ್ಕಪೇಟೆಯಲ್ಲಿ ಇರುವ ಪೀರಲು ದೇವರ ದೇವಸ್ಥಾನದಲ್ಲಿ ಮೊಹರಂ ಅಂಗವಾಗಿ ಪ್ರತೀದಿನ ಪೀರಲು ದೇವರಿಗೆ ಪೂಜೆ ನಡೆಯಿತು. ಆವರಣದಲ್ಲಿ ಅಗ್ನಿಕುಂಡ ಇದ್ದು ದೊಡ್ಡ ಕೆಂಡದ ದಿವಸ ಹಿಂದು ಮುಸ್ಲಿಂ ಎನ್ನದೇ ಎಲ್ಲರೂ ಭಾವೈಕ್ಯತೆಯಿಂದ ಸಾವಿರಾರು ಸಂಖ್ಯೆಯಲ್ಲಿ  ಭಕ್ತರು ಸೌದೆ ಉಪ್ಪು ಕರ್ಪೂರ ಮೆಣಸು ಊದಿನಕಡ್ಡಿ  ತಂದು ಅಗ್ನಿಕುಂಡದಲ್ಲಿ ಹಾಕುವ ದೃಶ್ಯ ಕಂಡುಬಂತು. ಇಮಾಮ್ ಬಾಡಾ ಆಶುಖಾನ್ ನೇಕ್ ಬೀಬಿ ದರ್ಗಾ ಕಮಿಟಿಯ ಅಧ್ಯಕ್ಷರಾದ ಹೆಚ್.ಆರ್. ಅಬ್ದುಲ್ ಅಜೀಜ್ ಹಾಗೂ ಪದಾಧಿಕಾರಿಗಳು ನೇತೃತ್ವ ವಹಿಸಿ ಪೂಜಾಕಾರ್ಯಕ್ರಮ ಯಶಸ್ವಿಗೊಳಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಪೀರಲು ದೇವರುಗಳ ಮೆರವಣಿಗೆ ನಡೆಸಿದರು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

Leave a Comment