ಹಿಂದು ಅಸಹಿಷ್ಣುತೆ ಎಂದಲ್ಲ- ನಾಯ್ಡು

ಚಿಕಾಗೊ, ಸೆ. ೧೦- `ಹಿಂದು ಎಂಬ ಪದ ಅಸ್ಪೃಶ್ಯತೆ` ಮತ್ತು `ಅಸಹಿಷ್ಣುತೆ` ಎಂದು ಬಿಂಬಿಸಲು ಕೆಲವು ಜನ ಹೊರಟಿದ್ದಾರೆ. ಸ್ವಾಮಿ ವಿವೇಕಾನಂದ ಅಂಥವರ ಬೋಧನೆಗಳ ಮೂಲಕ ಇಂತಹ ಅರಿವು ಗೆಟ್ಟವರ ಅಭಿಪ್ರಾಯಗಳನ್ನು ಬದಲಿಸಬೇಕಾಗಿದೆ` ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದ್ದಾರೆ.

ಭಾರತ ವಿಶ್ವ ಸಹಿಷ್ಣುತೆಯನ್ನು ರೂಢಿಸಿಕೊಂಡಿದ್ದು ಎಲ್ಲಾ ಧರ್ಮಗಳನ್ನು ಸತ್ಯವೆಂದು ಒಪ್ಪಿಕೊಳ್ಳುತ್ತದೆ ಎಂದು ಇಲ್ಲಿ ನಡೆದಿರುವ ಎರಡನೇ ವಿಶ್ವ ಹಿಂದೂ ಕಾಂಗ್ರೆಸ್‌ನ ಸಮಾರೋಪ ಅಧಿವೇಶನದ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಹೇಳಿದರು.

60ಕ್ಕೂ ಹೆಚ್ಚು ದೇಶಗಳ 250 ಭಾಷಣಕಾರರು ಹಾಗೂ 2500 ಮಂದಿ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

1893ರ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣದ 125ನೇ ವರ್ಷಾಚರಣೆಯ ಸಂದರ್ಭದಲ್ಲಿ ಈ ಸಮ್ಮೇಳನವನ್ನು ಏರ್ಪಡಿಸಲಾಗಿದೆ.

ಹಿಂದೂ ಧರ್ಮ ಕುರಿತಂತೆ ಬಹಳಷ್ಟು ಅಪಪ್ರಚಾರ ನಡೆದಿದೆ ಎಂದೂ ನಾಯ್ಡು ವಿಷಾದಿಸಿದ್ದಾರೆ.

ಜಗತ್ತಿಗೊಂದು ಅಧಿಕೃತ, ಅಧಿಕಾರಯುತ ದೃಷ್ಟಿಕೋನ ದೊರೆಯುವಂತೆ ಹಿಂದೂಧರ್ಮವನ್ನು ಪ್ರತಿಪಾದಿಸಬೇಕಾಗಿದೆ. ನಿಖರ ಹಾಗೂ ಅಧಿಕೃತ ನಿಲುವಿನಿಂದ ಹಿಂದೂಧರ್ಮದ ಬಗ್ಗೆ ತಪ್ಪು ಅಭಿಪ್ರಾಯಗಳು ಹರಡುವುದೂ ತಪ್ಪುತ್ತದೆ ಎಂದೂ ನಾಯ್ಡು ಹೇಳಿದರು.

Leave a Comment