ಹಿಂದುಳಿದವರಿಗೆ ಮೋಸ ಮಾಡಿದ ಮುಖ್ಯಮಂತ್ರಿ

ಕೆ.ಎಸ್ ಈಶ್ವರಪ್ಪ ಅಸಮಾಧಾನ
ದಾವಣಗೆರೆ, ಮಾ. 14- ಹಿಂದುಳಿದ ವರ್ಗಗಳನ್ನು ಉದ್ದಾರ ಮಾಡುತ್ತೇನೆಂದು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದವರಿಗೆ ಮೋಸ ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಅಕ್ಕಮಹಾದೇವಿ ಕಲ್ಯಾಣ ಮಂದಿರದಲ್ಲಿಂದು ಬಿಜೆಪಿ ಹಿಂದುಳಿದ ವರ್ಗಗಳ ಉತ್ತರ ವಿಧಾನಸಭಾ ಕ್ಷೇತ್ರದ ಸಮಾವೇಶದಲ್ಲಿ ಮಾತನಾಡಿದ ಅವರು ಐದು ವರ್ಷಗಳಿಂದ ನೋಡುತ್ತಿದ್ದೇವೆ ಮುಖ್ಯಮಂತ್ರಿಗಳು ಹಿಂದುಳಿದವರ ಹಾಗೂ ದಲಿತರ ಯಾವುದೇ ಅಭಿವೃದ್ದಿಗೆ ಆದ್ಯತೆ ನೀಡಿಲ್ಲ. ಇನ್ನು ಜೆಡಿಎಸ್ ಗೆ ಹಾಗೂ ದೇವೇಗೌಡ ಅವರಿಗೆ ಟೋಪಿ ಹಾಕಿದ್ದಾರೆ. ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣನವರಿಗೆ ನಮಸ್ಕಾರ ಮಾಡುವುದಿರಲಿ ನಂದಗಡಕ್ಕೂ ಕಾಲಿಟ್ಟಿಲ್ಲ. ಕಾಗಿನೆಲೆ ಹೆಸರ ಮೇಲೆ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಕನಕದಾಸರು ಹೇಳಿರುವ ಕುಲ ಕುಲ ಎಂದು ಹೊಡೆದಾಡಬೇಡಿ ಎಂಬಂತೆ ನಡೆದುಕೊಳ್ಳದೆ ಕುಲಕ್ಕೆ, ಧರ್ಮಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಾಧು ಸಂತರ ಮಠಗಳನ್ನು ಮರೆತಿದ್ದಾರೆ. ಹಲವಾರು ಮಠಗಳಿಗೆ ಅನುದಾನ ನೀಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. 39 ಮಠ ಮಾನ್ಯಗಳಿಗೆ 1 ರಿಂದ 2 ಕೋಟಿ ಕೊಟ್ಟಿದ್ದೇವೆ. ಜನ ನಮ್ಮೊಂದಿಗಿದ್ದಾರೆ ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಹೆಚ್.ಎಸ್.ನಾಗರಾಜ್, ಧನಂಜಯ ಕಡ್ಲೆಬಾಳು, ಬಸವರಾಜನಾಯ್ಕ್, ಜಯಮ್ಮ ಮತ್ತಿತರರಿದ್ದರು.

Leave a Comment