ಹಿಂಗಾರು ಮಳೆ ಕೊರತೆ

ಬೆಂಗಳೂರು.ಸೆ.೧೦-ರಾಜ್ಯದ ೧೬ ಜಿಲ್ಲೆಗಳು ಅಕ್ಟೋಬರ್‌ನಿಂದ ಆರಂಭವಾಗುವ ಹಿಂಗಾರು ಮಳೆ ಕೊರತೆ ಅನುಭವಿಸಲಿವೆ ಎಂದು ಹವಮಾನ ಇಲಾಖೆ ತಿಳಿಸಿದೆ.
ರಾಜ್ಯದ ೧೩ ಜಿಲ್ಲೆಗಳಲ್ಲಿ ಸಮರ್ಪಕ ಮುಂಗಾರು ಮಳೆ ಬೀಳದೆ ಕಳೆದ ಜೂನ್‌ನಿಂದ ಬರವನ್ನು ಎದುರಿಸುತ್ತಿವೆ, ಇದೀಗ ಅಕ್ಟೋಬರ್‌ನಲ್ಲಿ ಆರಂಭವಾಗುವ ಹಿಂಗಾರು ಮಳೆಯೂ ಕೈಕೊಡುವ ಸಾಧ್ಯತೆ ಇದೆ. ರೈತರು ಹಿಂಗಾರು ಬೆಳೆಯನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮಲೆನಾಡು ಜಿಲ್ಲೆಗಳು, ಕರಾವಳಿಯ ಜಿಲ್ಲೆಗಳು ಹೊರತುಪಡಿಸಿ ಉತ್ತರ ಹಾಗೂ ದಕ್ಷಿಣ ಒಳನಾಡಿನ ೧೬ ಜಿಲ್ಲೆಗಳು ಮುಂಗಾರು ಕೊರತೆಯನ್ನು ಎದುರಿಸುತ್ತಿವೆ.ಅಕ್ಟೋಬರ್ ನಿಂದ ಆರಂಭವಾಗುವ ಹಿಂಗಾರು ಮಳೆ ಸಹ ಈ ಜಿಲ್ಲೆಗಳಲ್ಲಿ ಕೊರತೆಯಾಗಲಿದೆ. ಎನ್ನಲಾಗಿದೆ.
ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಚಿಕ್ಕಮಗಳೂರು, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಳೆಯೇ ಆಗಿಲ್ಲ ಎಂದು ತಿಳಿಸಿದ್ದಾರೆ. ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಬಯಲುಸೀಮೆ ಜಿಲ್ಲೆಗಳಾದ ಮಂಡ್ಯ, ಚಿಕ್ಕಬಳ್ಳಾಪುರ, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾವೇರಿ, ಗದಗ, ವಿಜಯಪುರದಲ್ಲಿ ಬರ ಪರಿಸ್ಥಿತಿ ಇದೆ.
ರಾಜ್ಯದಲ್ಲಿ ಮು ಂಗಾರು ಶೇ.೭೦ರಿಂದ ೮೦ರಷ್ಟು ವಾಡಿಕೆ ಮಳೆಯಾಗಿದೆ. ಶೇ.೨೦ರಷ್ಟು ಮಾತ್ರ ಹಿಂಗಾರು ಅವಧಿಯಲ್ಲಿ ಆಗಲಿದೆ. ಸೆಪ್ಟೆಂಬರ್ ಆರಂಭದಿಂದ ಈವರೆಗೆ ರಾಜ್ಯದಲ್ಲಿ ೩೪ಮಿ.ಮೀ ಮಾತ್ರ ಮಳೆಯಾಗಿದೆ. ಶೇ.೭೭ರಷ್ಟು ಮಳೆ ಕೊರತೆ ಉಂಟಾಗಿದೆ. ಇನ್ನು ಸೆಪ್ಟೆಂಬರ್ ೧೫ರರವರೆಗೂ ಮಳೆಯಾಗುವ ಲಕ್ಷಣಗಳಿಲ್ಲ ಎಂದು ತಿಳಿದುಬಂದಿದೆ.

 

Leave a Comment