ಹಾಸ್ಟೇಲ್ ಅವ್ಯವಹಾರ ತನಿಖೆಗೆ ಆಗ್ರಹ

 

ಕಲಬುರಗಿ ನ 8: ಜಿಲ್ಲೆಯ  ಹಾಸ್ಟೇಲ್‍ಗಳು ಅವ್ಯವಸ್ಥೆಯ ಆಗರವಾಗಿದ್ದು , ಇಲ್ಲಿ ಬಹುತೇಕ ಕಡೆ ಹಣದ ದುರುಪಯೋಗ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.

ಕಳೆದ 10 ವರ್ಷಗಳಲ್ಲಿ ಇಲ್ಲಿ ಆಗಿರುವ ಅವ್ಯವಹಾರ ಕುರಿತು  ಸಿಓಡಿ ತನಿಖೆ ನಡೆಸುವಂತೆ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ನಾಳೆ ( ನ. 9) ನಗರಕ್ಕೆ ಆಗಮಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಈ ಕುರಿತು ಸಮಿತಿ  ಮನವಿ ಸಲ್ಲಿಸಲಿದೆ ಎಂದರು.

ಜಿಲ್ಲೆಯಲ್ಲಿ 63 ಮೆಟ್ರಿಕ್ ಪೂರ್ವ,39 ಮೆಟ್ರಿಕ್ ನಂತರದ ಹಾಸ್ಟೇಲ್‍ಗಳಿದ್ದು 8975 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.ಸಮಾಜ ಕಲ್ಯಾಣ ಇಲಾಖೆಯಲ್ಲಿ 114 ಹೊರಗುತ್ತಿಗೆ ಸಿಬ್ಬಂದಿ ಇದ್ದು ಅವರಿಗೆ ಕಳೆದ ಜುಲೈ ನಿಂದ ವೇತನ ಬಂದಿಲ್ಲ.ಪರಿಶಿಷ್ಟ ಪಂಗಡದ 288 ವಿದ್ಯಾರ್ಥಿಗಳ 68.07 ಲಕ್ಷ ರೂ ವಿದ್ಯಾರ್ಥಿ ವೇತನ ಮಂಜೂರಿ ಆಗಿಲ್ಲ ಎಂದರು.        ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಬಡದಾಳ,ಮಲ್ಲಿಕಾರ್ಜುನ ಕ್ರಾಂತಿ,ಮಲ್ಲಿಕಾರ್ಜುನ ಖನ್ನಾ,ಸೂರ್ಯಕಾಂತ ಆಜಾದಪುರ ಸೇರಿದಂತೆ ಇತರರಿದ್ದರು.

Leave a Comment