ಹಾವು ಕಚ್ಚಿ ರೈತ ಸಾವು

ಕಲಘಟಗಿ   ಸೆ 14 – ಹೊಲದಲ್ಲಿ  ನೀರು  ಹಾಯಿಸುವ ಸಂದರ್ಭದಲ್ಲಿ  ಹಾವು ಕಚ್ಚಿದ ಪರಿಣಾಮ  ರೈತನೊರ್ವ   ಮೃತಪಟ್ಟಿದ್ದಾನೆ.
ಕಲಘಟಗಿ ತಾಲೂಕಿನ   ಮಲ್ಲಕನಕೊಪ್ಪ ಗ್ರಾಮದ ರೈತ   ಬೈಲಪ್ಪ ಹೂಲಿಗೆಪ್ಪ ಒಡ್ಡರ  (55) ಎಂಬುವರೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಬೈಲಪ್ಪ ತನ್ನ ಹೊಲದಲ್ಲಿ  ನೀರು ಹಾಯಿಸುವ  ಸಂದರ್ಭದಲ್ಲಿ ಹಾವು ಕಚ್ಚಿದ್ದು, ಅವನನ್ನು  ತರ್ಲಘಟ್ಟ ಗ್ರಾಮಕ್ಕೆ ಗೌಂಟಿ ಔಷಧ ಕೊಡಿಸಲು ಕರೆದೊಯ್ಯಲಾಗಿತ್ತು. ನಂತರ   ಕುಂದಗೊಳ ತಾಲೂಕಾಸ್ಪತ್ರೆಯಲ್ಲಿ  ಹೆಚ್ಚಿನ  ಚಿಕಿತ್ಸೆಗಾಗಿ ದಾಖಲು ಮಾಡಿದಾಗ  ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

Leave a Comment