ಹಾವು ಕಚ್ಚಿ ಬಾಲಕ ಸಾವು

ಚಿತ್ತಾಪುರ,ಸೆ.9-ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟ ಘಟನೆ ತಡರಾತ್ರಿ ನಡೆದಿದೆ. ವಿಶ್ವನಾಥ ತಂದೆ ಈರಣ್ಣ ಬುಡಗ ಜಂಗಮ ಮೃತಪಟ್ಟ ಬಾಲಕ.

ಹೊಲದಲ್ಲಿ ಕಿತ್ತು ಹಾಕಿದ್ದ ಕಸ ಎತ್ತಿ ಹಾಕುವಾಗ ಹಾವು ಕಚ್ಚಿದೆ.

ಅಲೆಮಾರಿ ಸಮುದಾಯಕ್ಕೆ ಸೇರಿದ ಬಾಲಕ ಗ್ರಾಮದಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ. ಬಾಲಕನಿಗೆ ಹಾವು ಕಚ್ಚಿದ್ದು ಪಾಲಕರ ಗಮನಕ್ಕೆ ಬಂದಿಲ್ಲ. ಬಾಲಕ ವಾಂತಿ ಮಾಡಿಕೊಂಡಾಗ ಅನುಮಾನಗೊಂಡು ಪ್ರಥಮ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

 

Leave a Comment