ಹಾಲಿವುಡ್‌ನಲ್ಲಿ ಪ್ರಿಯಾಂಕ ಹಾಟ್ ’ಬೇವಾಜ್’ನಲ್ಲಿ ಬೆಚ್ಚಿ ಬೀಳಿಸಿದ ಬಾಲಿವುಡ್ ಬೆಡಗಿ

ಬಾಲಿವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡು ಗಾಯಕಿ,ನಿರ್ಮಾಪಕಿಯೂ ಆಗಿ ಯಶಸ್ಸು ಕಂಡ ಮಾದಕ ಚೆಲುವೆ ಪ್ರಿಯಾಂಕ ಚೋಪ್ರಾ ತಮ್ಮ ನಟನೆಯಿಂದಲೇ ಎಲ್ಲರನ್ನು ಮಂತ್ರ ಮುಗ್ಧಗೊಳಿಸಿದವರು.

ಬಾಲಿವುಡ್ ಬೆಗಡಿ ಪ್ರಿಯಾಂಕ ಚೋಪ್ರಾ ಹಾಲಿವುಡ್‌ನಲ್ಲಿ ಚೊಚ್ಚಲ ಬಾರಿಗೆ ಕಾಣಿಸಿಕೊಂಡಿರವ ’ಬೇವಾಜ್’ ಮುಂದಿನ ಮೇ ತಿಂಗಳಲ್ಲಿ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ. ಚಿತ್ರದ ಎರಡನೇ ಟ್ರೈಲರ್‌ನಲ್ಲಿ ಪಿಗಿ ಕಾಣಿಸಿಕೊಂಡಿರುವ ಹಾಟ್ ಸನ್ನಿವೇಶಗಳಿಗೆ ಅಭಿಮಾನಿಗಳು ದಂಗಾಗಿದ್ದಾರೆ.

ಬಾಲಿವುಡ್‌ನಲ್ಲಿ ಕಂಡ ಯಶಸ್ಸು ಮತ್ತು ಭುವನ ಸುಂದರಿಯಾಗಿದ್ದ ಪ್ರಿಯಾಂಕ ಚೋಪ್ರಾ ಅವರನ್ನು ಸಹಜವಾಗಿಯೇ ಹಾಲಿವುಡ್ ಚಿತ್ರರಂಗದತ್ತ ಸೆಳೆಯುವಂತೆ ಮಾಡಿದೆ. ಅಮೇರಿಕಾದ ಕಿರುತೆರೆಯಲ್ಲಿ ಕಾಣಿಸಿಕೊಂಡು ಅಲ್ಲಿ ಎಲ್ಲರ ಮನ ಗೆದ್ದ ಬಾಲಿವುಡ್‌ನ ಪಿಗ್ಗಿಗೆ ಹಾಲಿವುಡ್ ಕರೆದು ಮತ್ತೊಂದು ಅವಕಾಶ ನೀಡಿತು. ಅದುವೇ “ಬೇವಾಜ್” ಚಿತ್ರ.
ಬೇವಾಜ್‌ನಲ್ಲಿ ಪ್ರಿಯಾಂಕ ಚೋಪ್ರಾ ಹಾಟ್ ಹಾಟ್ ಕಾಣಿಸಿಕೊಂಡು ಹಾಲಿವುಡ್ ನಟಿಯರೇ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಪ್ರಿಯಾಂಕ ಚೋಪ್ರಾ ಅವರ ಮಾದಕ ಮೈಮಾಟಕ್ಕೆ ಹಾಲಿವುಡ್‌ನ ನಿರ್ಮಾಪಕರು ಮತ್ತು ನಿರ್ದೇಶಕರು ಮಾರುಹೋಗಿದ್ದಾರೆ.
ಚೊಚ್ಚಲ ಹಾಲಿವುಡ್ ಚಿತ್ರ ’ಬೇವಾಜ್’ನ ಟ್ರೈಲರ್‌ನಲ್ಲಿ ಪ್ರಿಯಾಂಕ ಚೋಪ್ರಾ ಕಾಣಿಸಿಕೊಂಡಿರುವ ರೀತಿ ಕಂಡು ಆಕೆಯ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಪಿಗ್ಗಿಯ ಹಾಟ್ ಹಾಟ್ ಸನ್ನಿವೇಶಗಳು.
’ಬೇವಾಚ್’ ಚಿತ್ರದ ಮೊದಲ ಟ್ರೇಲರ್ ನೋಡಿ ನಿರಾಸೆಗೊಂಡಿದ್ದ ಅಭಿಮಾನಿಗಳು ಎರಡನೇ ಟ್ರೈಲರ್ ನೋಡಿ ಸಂತಸದ ಹೊನಲ್ಲಿ ತೇಲಾಡಿದ್ದಾರೆ. ಎರಡನೇ ಟ್ರೈಲರ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ನಾನಾ ಅವತಾರಗಳಲ್ಲಿ ಅಭಿಮಾನಿಗಳು ನೋಡಿ ಎಂಜಾಯ್ ಮಾಡಿದ್ದಾರೆ.
ಬಿಕಿನಿ ಬೆಡಗಿಯರು ಸೇರಿದಂತೆ ಹಾಲಿವುಡ್‌ನ ಬಿಚ್ಚಮ್ಮ ನಟಿಯರೂ ನಾಚಿ ನೀರಾಗುವಂತೆ ಪ್ರಿಯಾಂಕಾ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.ನಟ ಡ್ವೇನ್ ಜಾನ್ಸನ್ ಹಾಗೂ ಹ್ಯಾಂಡ್ ಸಮ್ ಹಂಕ್ ಜ್ಯಾಕ್ ಎಫ್ರೊನ್ ಜತೆಗೂಡಿ ಸಾಹಸಮಯ ದೃಶ್ಯಗಳಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಜೊತೆಗೆ ಅಲೆಕ್ಸಾಂಡ್ರಾ ಹಾಗೂ ಕೆಲ್ಲಿ ಕೂಡ ಅಭಿನಯಿಸಿದ್ದಾರೆ. ಈ ಸಿನೆಮಾದಲ್ಲಿ ಪ್ರಿಯಾಂಕಾರದ್ದು ಮಾಯಗಾತಿಯ ಪಾತ್ರ. ಮುಂಬರುವ ಮೇ ತಿಂಗಳಲ್ಲಿ ಚಿತ್ರ ದೇಶ ವಿದೇಶಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.ಪ್ರಿಯಾಂಕಾ ಚೋಪ್ರಾ ಅಭಿನಯದ ಮೊದಲ ಹಾಲಿವುಡ್ ಚಿತ್ರ ’ಬೇವಾಚ್’ ರಿಲೀಸ್ ಆಗುವುದನ್ನು ಅವರ ಅಭಿಮಾನಿಗಳು ಆತುರದಿಂದ ಎದುರು ನೋಡುತ್ತಿದ್ದಾರೆ.
ಅದಕ್ಕೆ ಕಾರಣ ಚಿತ್ರ ಬಿಡುಗಡೆಗೆ ಇನ್ನೂ ನಾಲ್ಕೈದು ತಿಂಗಳು ಬಾಕಿ ಇರುವುದರಿಂದ ಪ್ರಿಯಾಂಕ ಚೋಪ್ರಾ ಇನ್ನು ಎಮತಹ ಸನ್ನಿವೇಶಗಳಲ್ಲಿ ನಟಿಸಿರಬಹುದೆನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Leave a Comment