ಹಾರ್ಟ್‍ಫುಲ್‍ನೆಸ್ ಉಚಿತ ಧ್ಯಾನ ಶಿಬಿರ 16 ರಿಂದ

 

ಕಲಬುರಗಿ ಆ 14: ಹಾರ್ಟ್‍ಫುಲ್‍ನೆಸ್ ಹಾಗೂ ಶ್ರೀ ರಾಮಚಂದ್ರ ಮಿಷನ್ ಸಹಯೋಗದಲ್ಲಿ ನಗರದ ಹೊಸ ಜೇವರಗಿ ರಸ್ತೆ ನೀಲಾಂಬಿಕಾ ಕಲ್ಯಾಣಮಂಟಪದಲ್ಲಿ ( ಮುಕ್ತಾ ಚಿತ್ರಮಂದಿರದ ಎದುರಿಗೆ) ಆಗಸ್ಟ್ 16 ರಿಂದ 18 ರವರೆಗೆ  ಮೂರು ದಿನಗಳ ಉಚಿತ ಧ್ಯಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ವಲಯ ಪ್ರಭಾರಿ ಡಾ.ಗಜೇಂದ್ರಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ದಿನ ಸಂಜೆ 6 ಗಂಟೆಯಿಂದ 7.30 ರವರೆಗೆ ಶಿಬಿರ ನಡೆಯಲಿದೆ.16 ರಂದು ಸಂಜೆ 6 ಗಂಟೆಗೆ ಜಿಲ್ಲಾಧಿಕಾರಿ ಆರ್ ವೆಂಕಟೇಶಕುಮಾರ ಅವರು ಶಿಬಿರಕ್ಕೆ ಚಾಲನೆ ನೀಡುವರು. ಜೆಸ್ಕಾಂ. ಎಂ.ಡಿ ಡಾ. ಆರ್ ರಾಗಪ್ರಿಯಾ ಅವರು ವಿಶೇಷ ಅತಿಥಿಗಳಾಗಿ ಆಗಮಿಸುವರು.ಮೊದಲನೆಯ ದಿನ  ಬ್ರೈಟರ್ ಮೈಂಡ್ಸ್ ಡೆಮೊ ನಡೆಯಲಿದ್ದು ಹಾರ್ಟ್‍ಫುಲ್‍ನೆಸ್ ವಿಶ್ರಾಂತಿ ವಿಧಾನ ,ನಿರ್ದೇಶಿತ ಧ್ಯಾನ ಹೇಳಿಕೊಡಲಾಗುವದು.17 ರಂದು ಹಾರ್ಟ್‍ಫುಲ್‍ನೆಸ್ ನಿರ್ದೇಶಿತ ಶುದ್ಧೀಕರಣ ನಡೆಯಲಿದೆ. ಎಸ್.ಎ ಖಾಜಿ ಅವರಿಂದ  ಹಿಂದುಸ್ತಾನಿ ಕೊಳಲುವಾದನವಿದೆ . 18 ರಂದು ಹಾರ್ಟ್‍ಫುಲ್‍ನೆಸ್ ಆಂತರ್ಯದೊಂದಿಗೆ ಸಂಪರ್ಕದ ಬಗ್ಗೆ ಹೇಳಿಕೊಡಲಾಗುವದು. ಉಮಾ ಶರ್ಮಾರಿಂದ ಭಕ್ತಿ ಸಂಗೀತ ಕಾರ್ಯಕ್ರಮವಿದೆ. ಮೂರು ದಿನಗಳ ಈ ಶಿಬಿರದಲ್ಲಿ 1500 ರಿಂದ 2000 ಜನ ಭಾಗವಹಿಸುವ ನಿರೀಕ್ಷೆ ಇದೆ. ಮಾಹಿತಿಗೆ (ಟೋಲ್ ಫ್ರೀ ಸಂಖ್ಯೆ  1 800 103 7726 ಅಥವಾ 9448333831 ಸಂಖ್ಯೆಯನ್ನು ಸಂಪರ್ಕಿಸಲು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸುದರ್ಶನ ಮಲ್ಹಾರಾವ, ಡಾ.ಶ್ರೀಪಾದ ಕಮಲಾಪುರಕರ್, ಮುರಳೀಧರ ಕರಲಗೀಕರ್ ಮತ್ತು ಮಹೇಶ ದೇಶಪಾಂಡೆ ಉಪಸ್ಥಿರಿದ್ದರು..

Leave a Comment