ಹಾರರ್ 19

ಕನ್ನಡದಲ್ಲಿ ಇತ್ತೀಚೆಗೆ ಹಾರರ್ ಮತ್ತು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರಗಳು ಬರುತ್ತಿವೆ. ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ’೧೯” ಚಿತ್ರ.

ಈ ಹಿಂದೆ ಚಿತ್ರರಂಗದಲ್ಲಿ ನಾಯಕನಾಗಲು ಬಂದ ಮೋಹನ್ ಗೌಡ ಎಲ್ಲಿಯೂ ಅವಕಾಶ ಸಿಗದೆ ಕೈಯಲ್ಲಿದ್ದ ಹಣವನ್ನು ಕಳೆದುಕೊಂಡಿದ್ದರು. ಇದೀಗ ೧೯ ಚಿತ್ರದ ಮೂಲಕ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ.

film-harrar-19_122a

ಈ ಚಿತ್ರದ ಬಗ್ಗೆ ಮಾಹಿತಿ ನೀಡಿದ ಮೋಹನ್, ೧೮,೧೯ ಮತ್ತು ೨೦ರ ಮೂರು ದಿನಗಳ ಕಾಲ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದೆ.ಇದೊಂದು ಹಾರರ್ ಮತ್ತು ಥ್ರಿಲ್ಲರ್ ಕಥೆಯನ್ನು ಚಿತ್ರ ಒಳಗೊಂಡಿದೆ.ಜನವರಿಯಲ್ಲಿ ದೊಡ್ಡ ಬಜೆಟ್ ಚಿತ್ರ ಆರಂಬಿಸುವ ಉದ್ದೇಶವಿದೆ.

ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ. ಹೊಸ ನಿರ್ದೇಶಕ ಎಂದು ಚಿತ್ರರಂಗದಲ್ಲಿರುವ ೮ ಮಂದಿ ಛಾಯಾಗ್ರಾಹಕರು ಕೆಲಸ ಮಾಡಲು ಹಿಂಜರಿದರು ಇದೇ ಕಾರಣಕ್ಕಾಗಿ ಮುಂಬೈನ ತಂತ್ರಜ್ಞರನ್ನು ಕರೆಸಿ ಚಿತ್ರೀಕರಣ ಮಾಡಲಾಗಿದೆ.ತಮಿಳಿನಲ್ಲಿ ಚಿತ್ರ ಡಬ್ ಆಗುವ ಬಗ್ಗೆ ಮಾತುಕತೆ ನಡೆದಿದೆ ಎಂದು ವಿವರ ನೀಡಿದರು.

film-harrar-19_122b

ಚಿತ್ರದಲ್ಲಿ ಕೃಷ್ಣ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.ಪ್ರತೀಶ್ ಪೊನ್ನಯ್ಯ, ಶರಣ್ಯ ನಾಯಕ್,ದಿವ್ಯಾ ರಾವ್ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ವೇಳೆ ಮಾತಿಗಿಳಿದ ಕೃಷ್ಣ ಕುಮಾರ್, ನಿರ್ದೇಶಕರು ನನ್ನ ಸ್ನೇಹಿತರು, ಚಿತ್ರದಲ್ಲಿ ಹೇಳಿದ ಹಾಗೆ ಮಾಡು ಎಂದರು ಅವರು ಹೇಳಿದ ಹಾಗೆ ನಟಿಸಿದ್ದೇನೆ.ಚಿತ್ರದಲ್ಲಿ ಲವ್, ಸೆಂಟಿಮೆಂಟ್ ಆಕ್ಷನ್ ಎಲ್ಲವೂ ಇದೆ. ಮೊದಲು ಒಂದು ಹಾಡು ಮಾಡೋಣ ಅಂದುಕೊಂಡೆವು ಅದು ಮೂರು ಆ ನಂತರ ಐದು ಹಾಡುಗಳಾಯಿತು. ಚಿತ್ರದಲ್ಲಿ ಶ್ರೇಯಾ ಘೋಷಾಲ್ ಹಾಡು ಹಾಡಿದ್ದು ಹಾಡು ಎಲ್ಲಾ ಹಾಡುಗಳಿಗಿಂತ ಚೆನ್ನಾಗಿ ಬಂದಿದೆ ಎಂದರು.

Leave a Comment