ಹಾರರ್ ವರ್ಣಮಯ

 ಚಂದನವನದಲ್ಲಿ ಒಂದರಿಂದ ಒಂದರಂತೆ ಬರುತ್ತಿರುವ ಹಾರರ್ ಚಿತ್ರಗಳಿಗಳಿಗೆ ’ವರ್ಣಮಯ’ ಎಂಬ ಸಿನಿಮಾವು ಒಂದು. ಇದು ಹೇಳಿ ಕೇಳಿ ನಿರ್ದೇಶಕ ರವೀಂದ್ರವಂಶಿ ಹೂರತುಪಡಿಸಿ ಹೊಸಬರ ಚಿತ್ರ. ಬಹುತೇಕ ಇಂತಹ ಸಿನಿಮಾಗಳು ಹೀಗೆ ಬಂದು ಗೆಲುವು ಕಾಣುತ್ತಿದೆ.ಈಗ ಅಂಥದೇ ಸಿನಿಮಾ ಇದಾಗಿದೆ.

varnamaya_127

ಕತೆಯಲ್ಲಿ ಅಂತರರಾಷ್ಟ್ರೀಯ ಚಿತ್ರಕಾರನ ಜೀವನದಲ್ಲಿ ನಡೆದ ಕತೆಯಾಗಿದ್ದರಿಂದ ಶೀರ್ಷಿಕೆ ಪೂರಕವಾಗಿದೆ.ಹಾರರ್ ಅಂದ ಮಾತ್ರಕ್ಕೆ ರಕ್ತದೋಕುಳಿ, ದೆವ್ವ, ಭೂತಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಇದೆಲ್ಲವು ಇರದೆ ಪುಟ್ಟ ಮಕ್ಕಳಿಂದ ವಯೋವೃದ್ದರು ನೋಡವಂತ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಭ್ರಮೆ, ದೆವ್ವ ಇದೆಯಾ ಎಂಬುದನ್ನು ನೋಡುಗರ ತೀರ್ಮಾನಕ್ಕೆ ನಿರ್ದೇಶಕರು ಬಿಟ್ಟಿದ್ದಾರೆ.ಮೂವರು ನಾಯಕಿಯರು ಮತ್ತು ಒಬ್ಬ ನಾಯಕ ಇರುವುದು  ಸಹಜವಾಗಿ ಕುತೂಹಲ ಹುಟ್ಟಿಸಿದೆ.

varnamaya_144

ಸೈಕಿಯಾಟ್ರಿಕ್ ವೈದ್ಯಯಾಗಿ ಶಕ್ತಿ,ಸುನಿತಾ ಪತ್ರಕರ್ತೆ ಹಾಗೂ ನಾಯಕನ ಹೆಂಡತಿ ಮತ್ತು ಹೆದರಿಸಿದ ದೆವ್ವ ಆಗಿ ದೀಪಿಕಾ ಇವರೊಂದಿಗೆ ನಾಯಕನಾಗಿ ರಾಜ್ ನಟಿಸಿದ್ದಾರೆ.  ನಿರ್ದೇಶಕರು ರಚಿಸಿರುವ ಎರಡು ಹಾಡುಗಳಿಗೆ ವಿನೋಧ್ ಮತ್ತು ಸುಧಾಂಶು ಸಂಗೀತ ಸಂಯೋಜಿಸಿದ್ದಾರೆ. ಹಿನ್ನಲೆ ಸಂಗೀತ ಶ್ರೀಗುರು, ಛಾಯಗ್ರಹಣ ಜೀವನ್‌ಗೌಡ, ಸಂಕಲನ ಸಿ.ರವಿಚಂದ್ರನ್ ನಿರ್ವಹಿಸಿದ್ದಾರೆ. ಟಿಸಿಎಸ್ ಕಂಪನಿಯಲ್ಲಿ ಅಧಿಕಾರಿಯಾಗಿರುವ ದೀಪ್ತಿದಾಮೋದರ್  ಬಣ್ಣದ ಲೋಕದ ಮೋಹಕ್ಕೆ ಒಳಗಾಗಿ ನಿರ್ಮಾಣ ಮಾಡಿರುವ ಚಿತ್ರವು  ಇದೇ ೨೩ರಂದು ಬಿಡುಗಡೆಯಾಗಲಿದೆ.

Leave a Comment