ಹಾರರ್ ಮೋಹಿನಿ ಮತ್ತೊಂದು ಥ್ರಿಲ್ಲರ್ ಕಥಾನಕ

ಕಿರುತೆರೆಯಲ್ಲಿ ಇತ್ತೀಚೆಗೆ ಹೊಸ ಹೊಸ ಮಾದರಿಯ ವಿಷಯಗಳನ್ನು ನಿರ್ದೇಶಕರು ಕೈಗೆತ್ತಿಕೊಳ್ಳುತ್ತಿದ್ದಾರೆ. ಆ ಮೂಲಕ ಪ್ರೇಕ್ಷಕರಿಗೆ ರಂಜನೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇದೀಗ ಮತ್ತೊಂದು ಹಾರರ್ ಕಥೆ ಆರಂಭವಾಗುತ್ತಿದೆ. ಅದುವೇ ’ಯಾರೇ ನೀ ಮೋಹಿನಿ”.
ಮಹಾದೇವಿ, ಬ್ರಹ್ಮಗಂಟು ಸೇರಿದಂತೆ ವಿಭಿನ್ನ ಶೈಲಿಯ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಶೃತಿ ನಾಯ್ಡು ’ಯಾರೇ ನೀ ಮೋಹಿನಿ’ಯ ನಿರ್ಮಾಣ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇವರ ಜೊತೆ ಜನಪ್ರಿಯ ನಟ ನಟಿಯರು, ನುರಿತ ತಂತ್ರಜ್ಞರ ತಂಡವೇ ಕೈ ಜೋಡಿಸಿದೆ.ಹೊಸ ಟೆಕ್ನಾಲಜಿಯ ಗ್ರಾಫಿಕ್ಸ್ ತಂತ್ರಜ್ಞಾನದೊಂದಿಗೆ ಮೂಡಿಬರುತ್ತಿರುತ್ತಿದೆ.
ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಮುತ್ತುರಾಜ, ರೈಸ್ ಮಿಲ್ ಒಂದನ್ನ ನಡೆಸುತ್ತಾ ಆ ಊರಿಗೇ ಒಬ್ಬ ಮಾದರಿ ಉದ್ಯಮಿ.ಆತನ ಜೀವನದಲ್ಲಿ ಸತಿಯಾಗಿ ಬರುವ ಚಿತ್ರಾ ಬಹಳ ದಿನಗಳ ಕಾಲ ಆತನ ಜೊತೆ ಇರುವುದಿಲ್ಲ. ಮದುವೆಯಾದ ಕೆಲವೇ ವರ್ಷಗಳಲ್ಲಿ ಮುತ್ತು ಹೆಂಡತಿಯನ್ನು ಕಳೆದುಕೊಂಡು ಒಂಟಿಯಾಗುತ್ತಾನೆ. ಮುತ್ತುವಿನ ಮಲತಾಯಿ ನೀಲಾಂಬರಿ ಮೇಲ್ನೋಟಕ್ಕೆ ಆತನ ಮೇಲೆ ಕಾಳಜಿ ತೋರಿಸಿದರೂ ಮನದಲ್ಲಿ ಆತನ ಸಕಲ ಆಸ್ತಿಯನ್ನು ತನ್ನದಾಗಿಸಿಕೊಳ್ಳಬೇಕೆಂಬ ದುರಾಸೆಯ ಸಂಚು ರೂಪಿಸುತ್ತಾಳೇ.
ಈ ಸಂದರ್ಭದಲ್ಲಿ ಚಿಕ್ಕಂದಿನಿಂದಲೂ ತನ್ನ ಮಾವನ ಮೇಲೆ ಜೀವವನ್ನೇ ಇಟ್ಟುಕೊಂಡ ಬೆಳ್ಳಿಯ ಆಗಮನ. ಮುತ್ತುವಿನ ಹೆಂಡತಿ ಚಿತ್ರಾಳ ಆತ್ಮ ನೀಲಾಂಬರಿಯ ಸಂಚನ್ನರಿತು ಮೋಹಿನಿಯ ರೂಪದಲ್ಲಿ ಬಂದು ಗಂಡನನ್ನು ನೀಲಾಂಬರಿಯಿಂದ ಕಾಪಾಡುತ್ತಾಳೆ. ನಂತರ ತನ್ನ ಗಂಡ ಮುತ್ತುಗೆ ಬೆಳ್ಳಿಯೇ ಸರಿಯಾದ ಹೆಂಡತಿ ಎಂದು ನಿರ್ಧರಿಸಿ ಅವರ ಜೋಡಿಗೆ ರಕ್ಷಾ ಕವಚವಾಗಿ ನಿಲ್ಲುತ್ತಾಳೆ. ಮುಂದೇನು ಎನ್ನುವುದು ನೀ ಮೋಹಿನಿ ಧಾರಾವಾಹಿಯ ಕಥಹಂದರ.
ಜೀ ವಾಹಿನಿ ವೀಕ್ಷಕರಿಗೆ ಹೊಸದೊಂದು ಹಾರರ್-ಥ್ರಿಲ್ಲರ್ ಅನುಭವವನ್ನು ನೀಡಲಿದೆ. ಇದೇ ೧೮ ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೭-೩೦ರಿಂದ ೮ರವರೆಗೆ ಪ್ರಸಾರವಾಗಲಿದೆ. ಕಳೆದ ಹತ್ತು ವರ್ಷಗಳಿಂದಲೂ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದೆ.

ಬಾಕ್ಸ್
ಕಿರುತೆರೆಯಲ್ಲಿ ಹೊಸ ಹೊಸ ಬಗೆಯ ಕಥಾ ವಸ್ತುಗಳು ಪ್ರೇಕ್ಷಕರ ಮನೆ ಮನೆಗಳಿಗೆ ತಲುಪಿತ್ತಿದೆ. ಇದೀಗ ಮತ್ತೊಂದು ಹಾರರ್ ಯಾರೇ ನೀ ಮೋಹಿನಿ ಪ್ರೇಕ್ಷಕರನ್ನು ಕಾಡಲು ಬರಲು ಸಜ್ಜಾಗಿದೆ. ಯಾಕೆ ಏನು ಎನ್ನುವುದು ಸದ್ಯಕ್ಕಿರುವ ಕುತೂಹಲ.

Leave a Comment