ಹಾರರ್ ಪುಟ

ಆ ಕರಾಳ ರಾತ್ರಿ ಯಶಸ್ವಿಯಾದ ಬೆನ್ನಲ್ಲೆ ’ಪುಟ ೧೦೯’ ಎನ್ನುವ  ಥ್ರಿಲ್ಲರ್‌ನಿಂದ ಕೂಡಿರುವ ಚಿತ್ರವನ್ನು ಪೂರ್ಣಗೊಳಿಸಲಾಗಿದೆ.’ಪುಟ ೧೦೯’ ಸಿನಿಮಾದಲ್ಲಿ ಹಲವು ವಿಶೇಷತೆಗಳು ಇರಲಿದೆ.  ಮೊದಲೆನಯದಾಗಿ ಸುದೀಪ್ ಚಿತ್ರ ವೀಕ್ಷಿಸಿ ಇದನ್ನು ತೆಲುಗು, ತಮಿಳು ಭಾಷೆಯಲ್ಲಿ ನಿರ್ಮಾಣ ಮಾಡಲು ಆಸಕ್ತಿ ತೋರಿಸಿರುವುದು ಇವರೊಂದಿಗೆ ಜಾಕ್ ಮಂಜು ಸೇರಿಕೊಂಡಿದ್ದಾರೆ.

puta-109_151

ಚಿತ್ರದ ಅವಧಿ ೯೦ ನಿಮಿಷ. ಒಟ್ಟು ೨೫ ಸನ್ನಿವೇಶಗಳು. ಅದರಲ್ಲಿ  ೨೪ ಸನ್ನಿವೇಶವು  ೨೮ ನಿಮಿಷದಲ್ಲಿ ಕಾಣಿಸಿಕೊಂಡರೆ, ೧ ಸನ್ನಿವೇಶ   ೬೨ ನಿಮಿಷಗಳು  ತೆಗೆದುಕೊಳ್ಳುತ್ತದೆ.  ಎರಡು ಪಾತ್ರಧಾರಿಗಳು  ಮಾತನಾಡುತ್ತಾರೆ. ಹಾಗಂತ ನೋಡುಗರಿಗೆ ಬೋರ್ ಆಗದಂತೆ ಹಲವು ಷಾಟ್‌ಗಳನ್ನು ವಿಭಾಗಿಸಲಾಗಿದೆ.

ಎರಡು ಹಾಡುಗಳಿಗೆ ಸಂಗೀತ ಒದಗಿಸಿರುವ ಗಣೇಶ್‌ನಾರಾಯಣ್ ಹಿನ್ನಲೆ ಸಂಗೀತಕ್ಕೆ ೫೪ ದಿವಸ ತೆಗೆದುಕೊಂಡಿದ್ದರೂ,  ಅಂತಿಮ ಹಂತಕ್ಕೆ ತಂದಿಲ್ಲ.  ಏನೇ ಆದರೂ ಸೆನ್ಸಾರ್‌ಗೆ ಹೋಗುವ ಮುನ್ನ  ಕೆಲಸ ಪೂರೈಸುವುದಾಗಿ ಭರವಸೆ  ನೀಡಿದ್ದಾರೆ.

ನಿರ್ದೇಶಕ, ನಿರ್ಮಾಪಕ ದಯಾಳ್‌ಪದ್ಮನಾಭನ್ ಹೇಳುವಂತೆ ಕರಾಳ ರಾತ್ರಿ ಚಿತ್ರ ಮಾಡುವ ಸಲುವಾಗಿ ಲೋಕೇಶನ್  ನೋಡಲು ಮೂಡಿಗೆರೆಗೆ ಹೋದಾಗ, ಅಲ್ಲಿ  ಒಂದು ಬಂಗಲೆ ನೋಡಲಾಯಿತು.  ಈ ಸ್ಥಳವು ಆರ್.ಅರವಿಂದ್ ಬರೆದ ಕತೆಗೆ ಸೂಕ್ತವಾಗಿದೆ ಎಂದು ಸಂಭಾಷಣೆಗಾರ ನವೀನ್‌ಕೃಷ್ಣ ಅವರೊಂದಿಗೆ ಒಂದು ಸಣ್ಣದಾಗಿ ಚರ್ಚೆ ನಡೆಸಿದ್ದಾರೆ.

puta-109_142

ಮುಂದೆ ಬೆಂಗಳೂರು ತಲುಪುವಷ್ಟರಲ್ಲಿ ಚಿತ್ರಕತೆ ಸಿದ್ದವಾಗಿದೆ. ಕೊನೆಗೆ ಹೊಸ ರೀತಿಯ ಪ್ರಯೋಗವೆಂದು  ೧೦ ದಿವಸದಲ್ಲಿ ಚಿತ್ರೀಕರಣ  ಮುಗಿಸಲಾಗಿದೆ. ದೂಡ್ಡ  ಸನ್ನಿವೇಶದಲ್ಲಿ  ಇನ್ಸ್‌ಪೆಕ್ಟರ್ ಆಗಿ ಜೆಕೆ. ಮತ್ತು ನವೀನ್‌ಕೃಷ್ಣ  ಕಾಣಿಸಿಕೊಳ್ಳುವ ದೃಶ್ಯಗಳು ಹೈಲೈಟ್ ಆಗಲಿದೆ ಅಂತಾರೆ.  ಕೊಲೆ ಹೇಗೆ  ನಡೆಯುತ್ತದೆ. ಅದನ್ನು ಯಾವ ರೂಪದಲ್ಲಿ  ತನಿಖೆ ಮಾಡಲಾಗುತ್ತದೆ.

ಪುಟ ೧೦೯  ಮಿಸ್ಸಿಂಗ್ ಆಗಿದ್ದರಿಂದ  ಕತೆ  ತಿರುವು  ಪಡೆದುಕೊಳ್ಳುತ್ತದೆ.  ನಾಯಕಿ ವೈಷ್ಣವಿಮೆನನ್, ಸಂಖಲನ ಕ್ರೇಜಿಮೈಂಡ್ಸ್ ಅವರದಾಗಿದೆ.  ಫಣೀಶ್‌ರಾಜ್‌ಗೆ ಸಂಸ್ಕ್ರತದಲ್ಲಿ ಹಾಡು ಬರೆದಿರುವುದು  ಛಾಲೆಂಜ್ ಆಗಿದೆಯಂತೆ.  ಅವಿನಾಶ್  ಸಹನಿರ್ಮಾಪಕರಾಗಿರುವ ಚಿತ್ರವನ್ನು  ಸೆಪ್ಟಂಬರ್ ೫ರಂದು ಬಿಡುಗಡೆ ಮಾಡಲು ಸಿದ್ದತೆಗಳನ್ನು  ಮಾಡಿಕೊಳ್ಳುತ್ತಿದ್ದಾರೆ.

Leave a Comment