ಹಾರರ್ ಥ್ರಿಲ್ಲರ್ ನಿಷ್ಕರ್ಷ

ನಿರ್ದೇಶಕ ಸಿ.ಎಂ ವಿಜಯ್ ಎರಡನೇ ಚಿತ್ರ ಕೈಗೆತ್ತಿಕೊಂಡಿದ್ದಾರೆ. ನಿರ್ದೇಶಿಸಿರುವ ಮೊದಲ ಚಿತ್ರ ’ಉಸಿರೇ ಉಸಿರೇ ’ ಇನ್ನೂ ಬಿಡುಗಡೆಯಾಗಬೇಕಾಗಿದೆ. ಹಾರರ್ ಥ್ರಿಲ್ಲರ್ ಕಥೆಯನ್ನು ಮುಂದಿಟ್ಟುಕೊಂಡು ಮಲ್ಟಿ ಟಾಕ್ಸ್‌ನಲ್ಲಿ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ. ಕ್ಲೈಮಾಕ್ಸ್ ಅನ್ನು ತೀರಾ ವಿಭಿನ್ನವಾಗಿ ತೆರೆಯ ಮೇಲೆ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.

ಕಳೆದವಾರ ಚಿತ್ರದ ಮಹೂರ್ತವಿತ್ತು. ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಸೇರಿದಂತೆ ಹಲವು ಗಣ್ಯರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು.

ಬಳಿಕ ಚಿತ್ರತಂಡ ಮಾತಿಗೆ ಕುಳಿತುಕೊಂಡಿತು. ಮೊದಲು ಮಾತು ಆರಂಭಿಸಿದ ನಿರ್ದೇಶಕ ವಿಜಯ್, ಸಿನಿಮಾ ನೋಡಿ ಹೊರ ಬರುವ ಪ್ರತಿಯೊಬ್ಬ ಪ್ರೇಕ್ಷಕ ಕೂಡ ದೇಶ ಈ ರೀತಿ ಇದ್ದರೆ ಹೀಗಿದ್ದರೆ ಚೆನ್ನಾ ಎನ್ನುವ ಅಭಿಪ್ರಾಯ ಮೂಡುತ್ತದೆ. ನಿಷ್ಕರ್ಷ ಎನ್ನುವುದು ಸಂಸ್ಕೃತ ಪದ. ೨೦೧೬ರಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಚಿತ್ರ ಮಾಡಲಾಗಿದೆ. ಚಿತ್ರದಲ್ಲಿ ಹೆಣ್ಣು ಮಕ್ಕಳನ್ನು ಹಗುರವಾಗಿ ನೋಡಬೇಡಿ ಎನ್ನುವುದನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.ಮೈಸೂರು ಮತ್ತು ರಾಜಸ್ತಾನದಲ್ಲಿ ಚಿತ್ರೀಕರಣ ನಡೆಸಿ ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಉದ್ದೇಶವಿದೆ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು.

ನಾಯಕ ಅನಿಕೇತನ್‌ಗೆ ಮೊದಲ ಸಿನಿಮಾ. ಮಗನ ಸಿನಿಮಾ ಪ್ರೀತಿಯನ್ನು ಕಂಡ ಅಪ್ಪ ಎನ್.ಸಿ ಮಹೇಶ್ ಮಗನ್ನು ಚಿತ್ರರಂಗಕ್ಕೆ ನಾಯಕನಾಗಿ ಪರಿಚಯಿಸಿದ್ದಾರೆ. ಒಳ್ಳೆಯ ಪಾತ್ರ ಸಿಕ್ಕಿದೆ. ಈ ಚಿತ್ರ ಹೆಸರು ತಂದುಕೊಡಲಿದೆ. ಪಾತ್ರಕ್ಕೆ ತಕ್ಕಂತೆ ಸಿದ್ದವಾಗಿದ್ದೇನೆ ಎಂದರು.

ನಟಿ ದಿವ್ಯ ಉರುಡುಗ, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡರು.
ಪ್ರಶಾಂತ್ ವರ್ಧನ್, ವಿವೇಕ್ ಚಕ್ರವರ್ತಿ ತಮ್ಮ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

Leave a Comment