ಹಾರರ್ ಥ್ರಿಲ್ಲರ್ ಉದ್ದಿಶ್ಯ

ಅಮೆರಿಕಾದಲ್ಲಿ ಕೈತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಹೇಮಂತ್ ಉದ್ದಿಶ್ಯ ಚಿತ್ರದ ಮೂಲಕ ನಟ, ನಿರ್ಮಾಪಕ ಹಾಗು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಬರುವುದಕ್ಕೂ ಮುನ್ನ ಅಮೆರಿಕಾದಲ್ಲಿ ಕಿರುತೆರೆಯಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅದರ ಲಾಭ ಪಡೆದು ಈಗ ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.
ಜೊತೆಗೆ ಹಾಲಿವುಡ್ ಲೇಖಕಿ ರಾಬರ್ಟ ಗ್ರಿಫನ್ ಅವರ ಕಥೆಯನ್ನು ಉದ್ದಿಶ್ಯ ಹೆಸರಲ್ಲಿ ಚಿತ್ರ ಮಾಡಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಮೈಸೂರಿನ ಮೃಗಾಲಯದಿಂದ ಆರಂಭವಾಗ ಕಥೆ ಮತ್ತೆಲ್ಲಿಗೂ ಹೋಗಲಿದೆ ಎಂದು ಹೇಳಿಕೊಂಡರು ಹೇಮಂತ್. ಹೊಸ ಕಲಾವಿದರನ್ನೇ ಇಟ್ಟುಕೊಂಡು ೩೫ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಹಾರರ್ ಸನ್ನಿವೇಶ ಇರುವುದರಿಂದ ಸೆನ್ಸಾರ್ ಮಂಡಳಿ ಯಾವುದೇ ಸನ್ನಿವೇಶಕ್ಕೆ ಕತ್ತರಿ ಹಾಕದೆ ಎ ಪ್ರಮಾಣ ಪತ್ರ ನೀಡಿದೆ. ಯು/ಎ ಕೊಡಬಹುದಾಗಿತ್ತು ಆದರೂ ಸೆನ್ಸಾರ್ ಮಂಡಳಿಯ ನಿರ್ಧಾರ ಸ್ವಾಗತಿಸುವುದಾಗಿ ಹೇಳಿಕೊಂಡರು.
ಮೃಗಾಲಯದಲ್ಲಿ ಪ್ರಾಣಿಗಳು ಸತ್ತು ಹೋಗಲಿವೆ ಅದರ ತನಿಖೆಯ ಬೆನ್ನತ್ತಿ ಹೋದಾಗ ಹಲವು ವಿಷಯಗಳು ಅನಾವರಣವಾಗಲಿದೆ ಚಿತ್ರದಲ್ಲಿ ತಾವು ತನಿಖಾಧಿಕಾರಿ ಪಾತ್ರ ಮಾಡಿದ್ದೇನೆ. ಚಿತ್ರವನ್ನು ಮೈಸೂರು,ಬಳ್ಳಾರಿ, ಮಂಗಳೂರು ಮತ್ತು ಮಡಿಕೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ವಿವರ ನೀಡಿದರು.
ನಟಿ ಅರ್ಚನಾ ಗಾಯಕ್‌ವಾಡ್, ಕಳೆದ ಹನ್ನೆರಡು ವರ್ಷದಿಂದ ಕಿರುತೆರೆಯಲ್ಲಿದ್ದೇನೆ. ಇದೇ ಮೊದಲ ಬಾರಿಗೆ ಉತ್ತಮ ಪಾತ್ರ ಸಿಕ್ಕಿದೆ.ಅಭಿನಯಕ್ಕೂ ಅವಕಾಶವಿದೆ ಎಂದರು. ಇನ್ನುಳಿದ ನಾಯಕಿಯರಾದ ಅಕ್ಷತಾ ಶ್ರೀಧರ್, ಇಚ್ಚಾ, ಪ್ರಣಮ್ಯ ನಿರ್ದೇಶಕರಿಗೆ ಧನ್ಯವಾದ ಹೇಳಿದರು,
ಬಿಜೆಪಿ ವಕ್ತಾದ ಅಶ್ವಥನಾರಾಯಣ, ನಿರ್ದೇಶಕರು ನನ್ನ ಅಳಿಯ ಹೀಗಾಗಿ ಚಿತ್ರದಲ್ಲಿ ಪಾತ್ರ ಮಾಡಿದ್ದೇನೆ. ಇನ್ನು ಪಾತ್ರ ಹೇಗೆ ಬಂದಿದೆ ಎನ್ನುವುದನ್ನು ಜನರು ಹೇಳಬೇಕು ಎಂದರು. ಚಿತ್ರಕ್ಕೆ ಸೋಲೋಮನ್ ಸಂಗೀತವಿದೆ.

Leave a Comment