ಹಾರರ್ ಕಾಮಿಡಿಗೆ ಅರ್ಧ ಶತಕದ ಸಂಭ್ರಮ

ಕನ್ನಡದಲ್ಲಿ ಹೊಸ ಪ್ರತಿಭೆಗಳ ಚಿತ್ರಗಳು ಅದರಲ್ಲಿಯೂ ಹಾರರ್ ಥ್ರಿಲ್ಲರ್ ಚಿತ್ರಗಳು ಯಶಸ್ವಿಯಾಗುತ್ತವೆ ಎನ್ನುವ ಪರಿಪಾಠ ಚಿತ್ರರಂಗದಲ್ಲಿ ಮುಂದುವರಿದಿದೆ. ಪ್ರತಿಭಾವಂತ ನಿರ್ದೇಶಕ ಶ್ರೀನಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಹಾರರ್,ಥ್ರಿಲ್ಲರ್ ಸಿನಿಮಾ ಕೆಲವು ದಿನಗಳ ನಂತರ ಚಿತ್ರ ಕನ್ನಡದಲ್ಲಿ ಯಶಸ್ವಿ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಅಷ್ಟೇ ಅಲ್ಲ ಚಿತ್ರ ಈ ಮುಂದಿನವಾರ ಅರ್ಧ ಶತಕ ಬಾರಿಸಲಿದೆ.

ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಸರಿ ಸುಮಾರು ಡಬ್ಬಲ್ ಸೆಂಚುರಿ ತನಕ ಚಿತ್ರಗಳು ಬಿಡುಗಡೆಯಾಗಿವೆ.ಅದರಲ್ಲಿ ಬೆರಳಣಿಕೆಯ ಚಿತ್ರಗಳನ್ನು ಹೊರತು ಪಡಿಸಿ ಎಲ್ಲಾ ಚಿತ್ರಗಳು ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗಿದೆ.

ಅಲ್ಲದೆ ಬಿಡುಗಡೆಯಾಗಿರುವ ಚಿತ್ರಗಳ ಪೈಕಿ ಐವತ್ತು ದಿನ ಪೂರೈಸಿದ ಟಗರು,ರ್‍ಯಾಂಬೋ-೨,ಗುಲ್ಟು,ಅಮ್ಮಾ ಐ ಲವ್ ಯೂ ಬಳಿಕ ಕೆಲವು ದಿನಗಳು ಸೇರಿಕೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿ ಉಳಿದಿದೆ. ಮೊದಲ ಚಿತ್ರದಲ್ಲಿಯೇ ಯಶಸ್ಸು ನೀಡಿದ ಶ್ರೀನಿ ಅವರಿಗೆ ಹಲವು ಚಿತ್ರಗಳ ಹುಡುಕಿಕೊಂಡು ಬಂದಿದೆ. ಅದರಲ್ಲಿ ಮೂರ್ನಾಲ್ಕು ಚಿತ್ರಗಳ ಮಾತುಕತೆಯೂ ನಡೆಯುತ್ತಿದೆ. ಸದ್ಯದಲ್ಲಿಯೇ ಹೊಸ ಚಿತ್ರ ಸೆಟ್ಟೇರವ ಎಲ್ಲಾ ಸಾಧ್ಯತೆಗಳಿವೆ.

ಈ ವಿಷಯವನ್ನು ಸ್ವತಃ ಶ್ರೀನಿ ಹೇಳಿಕೊಂಡಿದ್ದಾರೆ. ಮೊದಲ ಚಿತ್ರದ ಯಶಸ್ಸು ಸಹಜವಾಗಿ ಖುಷಿ ತಂದಿದೆ. ಅಲ್ಲದೆ ನಿರ್ಮಾಪಕರಾದ ಮುತ್ತುರಾಜ್, ವಸಂತ್ ಕುಮಾರ್ ಹಾಗು ಚಂದ್ರ ಕುಮಾರ್ ಅವರೂ ಕೂಡ ಖುಷಿಯಲ್ಲಿದ್ದಾರೆ. ಚಿತ್ರಕ್ಕೆ ಹಾಕಿದ ಬಂಡವಾಳ ವಾಪಸ್ ಬಂದಿದೆ. ಜೊತೆಗೆ ಮುಂದಿನವಾರ ಚಿತ್ರ ಐವತ್ತು ದಿನ ಪೈರೈಸಿ ಹದಿನೈದಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮುನ್ನೆಡೆಯುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳನ್ನು ಅದರಲ್ಲಿಯೂ ಉತ್ತಮ ಚಿತ್ರಗಳಿಗೆ ಪ್ರೇಕ್ಷಕ ಬೆಂಬಲ ನೀಡುತ್ತಾನೆ ಎನ್ನವುದು ಮತ್ತೊಮ್ಮೆ ಸಾಬೀತಾಗಿದೆ. ಮೊದಲ ಚಿತ್ರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ಚಿತ್ರಗಳನ್ನು ಜವಬ್ದಾರಿಯಿಂದ ಮತ್ತು ಎಚ್ಚರಿಕೆಯಿಂದ ಹೆಜ್ಜೆ ಇಡಲಾಗುವುದು ಎನ್ನುತ್ತಾರೆ ಶ್ರೀನಿ. ಚಿತ್ರದಲ್ಲಿ ಶುಭಾ ಪೂಂಜಾ, ಮಜಾ ಟಾಕೀಸ್ ಪವನ್,ದ್ರವ್ಯ ಶೆಟ್ಟಿ,ಸೋನು ಪಾಟೀಲ್,ಲೋಕೇಶ್ ಮತ್ತಿತರಿದ್ದು ಹಿಂದಿ ಮತ್ತು ತೆಲುಗಿಗೆ ಡಬ್ಬಿಂಗ್ ರೇಟ್ಸ್ ಮಾತುಕತೆಯಾಗಿರುವುದ ಚಿತ್ರತಂಡಕ್ಕೆ ಮತ್ತಷ್ಟು ಸಂತಸ ಹೆಚ್ಚು ಮಾಡಿದೆ.

Leave a Comment