ಹಾಯರ್‍ನಿಂದ ಎರಡನೇ ಕೈಗಾರಿಕಾ ಪಾರ್ಕ್

ಹುಬ್ಬಳ್ಳಿ,ಸೆ 11- ಗೃಹಸಾಧನಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‍ನ ಜಾಗತಿಕ ನಾಯಕ ಮತ್ತು ಪ್ರಮುಖ ಸಾಧನಗಳಲ್ಲಿ ಸತತ 9 ವರ್ಷಗಳು* ವಿಶ್ವದ ನಂಬರ್ 1 ಬ್ರಾಂಡ್ ಆಗಿರುವ ಹಾಯರ್  ಉತ್ತರ ಪ್ರದೇಶ ಸರ್ಕಾರದೊಂದಿಗೆ ಗ್ರೇಟರ್ ನೊಯಿಡಾದಲ್ಲಿ ತನ್ನ ಎರಡನೆಯ ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ಒಡಂಬಡಿಕೆಗೆ ಸಹಿ ಹಾಕಿತು. ಈ ಬೆಳವಣಿಗೆಯೊಂದಿಗೆ ಹಾಯರ್ ಕೇಂದ್ರ ಸರ್ಕಾರದ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವ `ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಿತು.
ಈ ಒಡಂಬಡಿಕೆಯನ್ನು ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಹಾಗೂ ಉತ್ತರ ಪ್ರದೇಶದ ಗಣ್ಯರ ಉಪಸ್ಥಿತಿಯಲ್ಲಿ ಹಾಯರ್ ಗ್ರೂಪ್‍ನ ವಿ.ಪಿ. ಹಾಗೂ ಹಾಯರ್ ಅಪ್ಲಯನ್ಸಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂಗ್ ಯುಜುನ್ ಸಹಿ ಹಾಕಿದರು; ಹಾಯರ್ ಅಪ್ಲಯನ್ಸಸ್ ಇಂಡಿಯಾದ ಅಧ್ಯಕ್ಷ ಶ್ರೀ ಎರಿಕ್ ಬ್ರಗಾಂಝಾ ಮತ್ತು ಹಾಯರ್ ಅಪ್ಲಯನ್ಸಸ್ ಇಂಡಿಯಾದ ಡೈರೆಕ್ಟರ್ ಎಸ್‍ಸಿಎಂ  ಸನ್ ಉಪಸ್ಥಿತರಿದ್ದರು. ಉತ್ತರ ಪ್ರದೇಶ ಸರ್ಕಾರದ ಕೈಗಾರಿಕಾಭಿವೃದ್ಧಿ ಸಚಿವ  ಸತೀಶ್ ಮಹಾನಾ; ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ  ಅನುಪ್‍ಚಂದ್ರ ಪಾಡೆ; ಐಟಿ ಹಾಗೂ ಎಲೆಕ್ಟ್ರಾನಿಕ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಅಲೋಕ್ ಸಿನ್ಹಾ, ಮೂಲಸೌಕರ್ಯ ಹಾಗೂ ಕೈಗಾರಿಕಾ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ  ರಾಜೇಶ್ ಕುಮಾರ್ ಸಿಂಗ್ ಈ ಒಡಂಬಡಿಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಈ ಒಡಂಬಡಿಕೆಯ ಅನ್ವಯ ಹಾಯರ್ ತನ್ನ ಕೈಗಾರಿಕಾ ಪಾರ್ಕ್ ಅನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಎರಡು ಹಂತಗಳಲ್ಲಿ 3069 ಕೋಟಿ ರೂ. ಹೂಡಿಕೆಯಲ್ಲಿ ಸ್ಥಾಪನೆ ಮಾಡಲಿದೆ. ಈ ಬೆಳವಣಿಗೆಯೊಂದಿಗೆ ಕಂಪನಿ 4000 ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇದ್ದು 10,000 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ವಿಸ್ತರಣೆ ವೆಂಡರ್‍ಗಳು ಮತ್ತು ಒಇಎಂಗಳಿಗೆ ಅವಕಾಶವಾಗಿದ್ದು ಹೆಚ್ಚಿನ ಸ್ಥಳೀಯ ಉತ್ಪಾದನೆಯೊಂದಿಗೆ ಉತ್ಪನ್ನಗಳ ಆಮದು ಕಡಿಮೆ ಮಾಡುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಾಯರ್ ಇಂಡಿಯಾದ ಅಧ್ಯಕ್ಷ  ಎರಿಕ್ ಬ್ರಗಾಂಝಾ, “ಕೇಂದ್ರ ಸರ್ಕಾರದ `ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ನಮ್ಮ ಬದ್ಧತೆಗೆ ಅನುಗುಣವಾಗಿ ನಾವು ದೇಶದ ಎರಡನೆಯ ಕೈಗಾರಿಕಾ ಪಾರ್ಕ್ ಪ್ರಕಟಿಸಲು ಬಹಳ ಸಂತೋಷ ಹೊಂದಿದ್ದೇವೆ. ಉತ್ತರ ಪ್ರದೇಶ ಸರ್ಕಾರ ನೀಡಿದ ಬೆಂಬಲಕ್ಕೆ ನಾವು ಕೃತಜ್ಞರಾಗಿದ್ದು ಈ ಮೈಲಿಗಲ್ಲು ಸಾಧಿಸುವಲ್ಲಿ ಇದು ಪ್ರಮುಖವಾಗಿದೆ. ಈ ಹೊಸ ಘಟಕ ನಮ್ಮ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಲು ಮಾತ್ರವಲ್ಲದೆ ಸ್ಥಳೀಯ ಬೇಡಿಕೆ ಹೆಚ್ಚಿಸುವುದಲ್ಲದೆ ರಾಜ್ಯದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲಿದೆ. ಈ ಒಡಂಬಡಿಕೆ ನಮಗೆ ದೇಶಕ್ಕೆ ನಮ್ಮ ವ್ಯಾಪ್ತಿ ಮತ್ತು ಬದ್ಧತೆಯನ್ನು ಸದೃಢಗೊಳಿಸಲಿದೆ” ಎಂದರು.
ಹಾಯರ್ ಗ್ರೂಪ್‍ನ ಗ್ಲೋಬಲ್ ಅಪ್ಲಯನ್ಸಸ್ ವಿ.ಪಿ. ಹಾಗೂ ಹಾಯರ್ ಅಪ್ಲಯನ್ಸಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂಗ್ ಯುಜುನ್, “ಭಾರತ ಹಾಯರ್ ಗ್ರೂಪ್‍ಗೆ ಅತ್ಯಂತ ಚಲನಶೀಲ ಮತ್ತು ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ದೇಶದಲ್ಲಿ ನಮ್ಮ ಹೂಡಿಕೆ ಅದಕ್ಕೆ ಸಾಕ್ಷಿಯಾಗಿದೆ. ಹೊಸ ಉತ್ಪಾದನಾ ಘಟಕ ಪ್ರಾರಂಭಿಸುವುದು ನಮಗೆ ದೇಶದಲ್ಲಿ ಉತ್ತಮ ಹಾಜರಿ ರೂಪಿಸಲು ನೆರವಾಗುವುದಲ್ಲದೆ ನಮ್ಮ ಭಾರತೀಯ ಗ್ರಾಹಕರಿಗೆ ಅವರ ವಿಸ್ತರಿಸುತ್ತಿರುವ ಜೀವನಶೈಲಿಗೆ ಪೂರಕವಾಗಿ ಹೆಚ್ಚು ಆವಿಷ್ಕರಿಸಲು ಸನ್ನದ್ಧರಾಗಿಸುತ್ತದೆ. ಉತ್ತರ ಪ್ರದೇಶ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿಯಲ್ಲಿ ಭಾಗವಹಿಸಲು ಬೆಂಬಲ ನೀಡಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ. ಈ ಕ್ರಮವು ಹಾಯರ್‍ಗೆ ಒಂದು ಬ್ರಾಂಡ್ ಆಗಿ ಮಾತ್ರವಲ್ಲದೆ ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯತ್ತ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ನಮ್ಮದು” ಎಂದರು.
ಹಾಯರ್ ಇಂಡಿಯಾ 2007ರಲ್ಲಿ ರೆಫ್ರಿಜಿರೇಟರ್‍ಗಳ ಉತ್ಪಾದನೆಯನ್ನು ಪುಣೆಯ ರಂಜನ್‍ಗಾಂವ್‍ನ ಕಾರ್ಖಾನೆಯಲ್ಲಿ ಪ್ರಾರಂಭಿಸಿತು. ಅದು ನಂತರ ಭಾರತದ ಮೊದಲ ಕೈಗಾರಿಕಾ ಪಾರ್ಕ್ ಆಗಿ ಅಭಿವೃದ್ಧಿಯಾಯಿತು. ನವೆಂಬರ್ 2017ರಲ್ಲಿ ಉದ್ಘಾಟನೆಯಾದ ಇದರ ವಾರ್ಷಿಕ ಸಾಮಥ್ರ್ಯ 1.8 ಮಿಲಿಯನ್ ರೆಫ್ರಿಜಿರೇಟರ್ ಯೂನಿಟ್‍ಗಳು ಮತ್ತು .5 ಮಿಲಿಯನ್ ಯೂನಿಟ್‍ಗಳು ವಾಷಿಂಗ್ ಮೆಷಿನ್, ಏರ್ ಕಂಡೀಷನರ್‍ಗಳು, ಎಲ್‍ಇಡಿ ಟೀವಿಗಳು ಮತ್ತು ವಾಟರ್ ಹೀಟರ್‍ಗಳನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ.

Leave a Comment