ಹಾಡುಹಗಲೇ ವೃದ್ಧನ   ಬರ್ಬರ  ಹತ್ಯೆ

ಬೆಂಗಳೂರು.ಫೆ.14. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡುಹಗಲೇ ವೃದ್ದನೊಬ್ಬನನ್ನು ಬರ್ಭರವಾಗಿ ಹತ್ಯೆಗೈಯ್ಯಲಾಗಿದೆ. ಮೇಲ್ನೋಟಕ್ಕೆ ಆಸ್ತಿ ವಿಚಾರದ ಹಿನ್ನೆಲೆಯಲ್ಲಿ ಸಂಬಂಧಿಕರಿಂದಲೇ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

ತಲಘಟ್ಟಪುರ ಬಳಿಯ ಗುಬ್ಬಲಾಳ ರಸ್ತೆಯಲ್ಲಿ ಇಂದು ಮಧ್ಯಾಹ್ನ ವೃದ್ಧ 77 ವರ್ಷದ ಮಾಧವ್ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಕೆಲಸದ ನಿಮಿತ್ತ ಮಾಧವ್ ಅವರನ್ನು ಮನೆಯಿಂದ ಹೊರಹೋಗಿದ್ದ ವೇಳೆ, ಹಿಂಬದಿಯಿಂದ ಬಂದಿರುವ ದುಷ್ಕರ್ಮಿಗಳು ಮಾಧವ್ ಅವರ ಕುತ್ತಿಗೆಗೆ ಚಾಕು ಇರಿದು ಭೀಕರವಾಗಿ ಹತ್ಯೆಗೈದಿದ್ದಾರೆ.

ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಸ್ಥಳೀಯರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ…

Leave a Comment