ಹಾಡುಹಗಲೇ ಬೀಗ ಮುರಿದು ನಗನಾಣ್ಯ ಕಳ್ಳತನ

ಕಲಬುರಗಿ ಜ 11:ಇಲ್ಲಿನ ಆನಂದನಗರದ ಮನೆಯೊಂದಕ್ಕೆ ಹಾಡುಹಗಲೇ ನುಗ್ಗಿದ ಕಳ್ಳರು ಮನೆಯ ಬೀಗ ಮುರಿದು ಒಟ್ಟು 2.50 ಲಕ್ಷ ರೂ ಮೌಲ್ಯದ ನಗದು ಹಣ ಮತ್ತು ಚಿನ್ನವನ್ನು ದೋಚಿದ್ದಾರೆ.
ಆನಂದನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಡಾ.ರಾಧಿಕಾ ಶಹಾ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕೆಲಸದ ನಿಮಿತ್ತ ಡಾ. ರಾಧಿಕಾ ಅವರು ಸೇಡಂ ಪಟ್ಟಣಕ್ಕೆ ಹೋದಾಗ ಈ ಘಟನೆ ಜರುಗಿದೆ.
ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಸ್ಟೇಷನ್ ಬಜಾರ್ ಪಿಐ ಗಂಗಾಧರ ಮಠಪತಿ ಮತ್ತು ಸಿಬ್ಬಂದಿಯವರು, ಶ್ವಾನದಳದ ತಂಡದವರು ಭೇಟಿ ನೀಡಿ ಪರಿಶೀಲಿಸಿದರು…..

Leave a Comment