ಹಾಕಿ ಪಟುಗಳಿಗೆ ಉತ್ತೇಜನ ನೀಡುವ ಅವಶ್ಯವಿದೆ ವಿ.ಎಂ. ಚತುರ

ಮೈಸೂರು.ಏ. 15. ಅ.ರಾ. ಮಟ್ಟದ ಹಾಕಿ ಕ್ರೀಡೆಯಲ್ಲಿ ಭಾರತ ತಂಡದ ಸಾಧಾನೆಯನ್ನು ಮತ್ತೆ ಉತ್ತುಂಗಕ್ಕೆ ಏರಿಸುವ ದಿಸೆಯಲ್ಲಿ ಹಾಕಿ ಪಟುಗಳಿಗೆ ಉತ್ತೇಜನ ನೀಡುವ ಅವಶ್ಯವಿದೆ ಎಂದು ಮಾಜಿ ರಾಷ್ಟ್ರೀಯಹಾಕಿ ಕ್ರೀಡಾ ಪಟು ವಿ.ಎಂ. ಚತುರ ಹೇಳಿದರು.
ಅವರು ಇಂದು ಬೆಳಗ್ಗೆ ಮಾನಸ ಗಂಗೋತ್ರಿಯಲ್ಲಿರುವ ಎಸ್.ಜೆ.ಸಿ.ಇ. ಕ್ಯಾಂಪಸ ನಲ್ಲಿ ಎನ್.ಐ.ಇ ಕಾಲೇಜು ವತಿಯಿಂದ ಆಯೋಜಿಸಿದ್ದ ಮೈಸೂರು ವಲಯ ವಿ.ಟಿ. ವಿ.ವಿ.ಯ ಅಂತರ ಕಾಲೇಜು ಪುರುಷರಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಅವರು ಭಾರತವು 60 ರ ದಶಕದವರೆಗೂ ಅ.ರಾ. ಮಟ್ಟದ ಹಾಕಿ ಪಂದ್ಯಾವಳಿಗಳು ಸೇರಿದಂತೆ ಒಲಂಪಿಕ್ಸ ಪಂದ್ಯಾವಳಿಗಳಲ್ಲಿ ಅಗ್ರಸ್ಧಾನವನ್ನು ಅಲಂಕರಿಸಿ ಸಾರ್ವಭೌಮತ್ವ ಹೊಂದಿತ್ತು ನಂತರದ ವರ್ಷಗಳಲ್ಲಿ ಹಾಕಿ ಪಂದ್ಯಾವಳಿಗಳಲ್ಲಿ ಭಾರತದ ಸಾಧನೆ ಕಳೆಗುಂದಿದೆ ಇದಕ್ಕೆ ಕಾರಣ ಹಾಕಿ ಕ್ರೀಡಾ ಪಟುಗಳಿಗೆ ಉತ್ತೇಜನ ನೀಡದಿರುವುದು ಹಾಗೂ ಹಾಕಿ ಪಂದ್ಯಾವಳಿಗಳಿಗೆ ಹೆಚ್ಚು ಒತ್ತನ್ನು ನೀಡದಿರುವುದೇ ಆಗಿದೆ ಎಂದರು.
1960ರ ದಶಕದಲ್ಲಿ ಭಾರತದ ಹಾಕಿ ತಂಡದಲ್ಲಿ ಧ್ಯಾನಚಂದ್‍ರಂತಹ ಚತುರ ಆಟಗಾರರಿದ್ದರು. ಅವರ ನಂತರ ಕರ್ನಾಟಕದ ಗಣೇಶ್ ಮತ್ತು ಗೋವಿಂದ ಕೆಲವು ವರ್ಷಗಳ ಕಾಲ ಅಂತರ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಕರ್ನಾಟಕದಿಂದ ಯಾವೊಬ್ಬ ಹಾಕಿ ಕ್ರೀಡಾ ಪಟವು ಭಾರತ ತಂಡದಲ್ಲಿ ಸ್ಧಾನಗಳಿಸದಿರುವುದು ವಿಷಾದದ ಸಂಗತಿ. ಇನ್ನು ಮುಂದಾದರೂ ಹಾಕಿ ಕ್ರೀಡಾ ಪಟುಗಳು ಕಠಿಣ ಅಭ್ಯಾಸ ನೆಡೆಸಿ ನಮ್ಮ ದೇಶ ಹಾಕಿ ಕ್ರೀಡೆಯಲ್ಲಿ ಕಳೆದುಕೊಂಡಿರುವ ಗತವೈಭವವನ್ನು ಮತ್ತೆ ಪಡೆಯುವತ್ತ ಮುನ್ನಗ್ಗುವಂತೆ ಕ್ರೀಡಾ ಪಟುಗಳಿಗೆ ಕರೆನೀಡಿದರು.
ಇಂದಿನ ಪಂದ್ಯಾವಳಿಯಲ್ಲಿ ವಿ.ಟಿ. ವಿ.ವಿ. ವ್ಯಾಪ್ತಿಗೊಳಪಡುವ ಮೈಸೂರು ವಲಯದ ಮೈಸೂರು ಮಂಡ್ಯ, ಮಂಗಳೂರು, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳ
ಇಂಜಿನಿಯರಿಂಗ್ ಕಾಲೇಜುಗಳ 20ಕ್ಕೂ ತಂಡಗಳು ಪಾಲ್ಗೊಂಡಿದ್ದವು
ಕಾರ್ಯಕ್ರಮದಲ್ಲಿ ಎನ್.ಐ.ಇ. ಗ್ರೂಪ್ ಆಫ್ ಇನ್ಸ್ ಟಿಟ್ಯೂಷನ್ಸ್‍ನ ಗೌರವ ಕಾರ್ಯದರ್ಶಿ ಜಿ.ಎಸ್. ರಾಮಚಂದ್ರ, ದೈಹಿಕ ಶಿಕ್ಷಣ ನಿರ್ದೇಶಕ ಸುದಿನ ಹೆಚ್.ಸಿ. ಹಾಗೂ ಪ್ರಾಂಶುಪಾಲರಾದ ಡಾ|| ಅರ್ಚನಾ ಎನ್. ವಿ. ಉಪಸ್ಧಿತರಿದ್ದರು.

Leave a Comment