ಹಸುವಿನ ಮಾಲಿಕನಿಗೆ ದಂಡಕ್ಕೆ ಒತ್ತಾಯ

ನಗರದ ಆರ್ಪಿ ರಸ್ತೆಯಲ್ಲಿ ಮಿತಿಮೀರಿದ ಹಸುಗಳ ಕಾಟ
ನಂಜನಗೂಡು. ಅ.16- ನಗರದ ಆರ್ಪಿ ರಸ್ತೆಯಲ್ಲಿ ಮನೆಯ ಮಾಲೀಕರು ಬಿಟ್ಟಿರುವ ಹಸುಗಳು ಅಡ್ಡಾದಿಡ್ಡಿ ಓಡಾಡಿ ಬಹಳ ತೊಂದರೆ ನೀಡುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮನೆಯ ಮಾಲೀಕರು ಸಾಕಿರುವ ಹಸುಗಳನ್ನು ಹಾಲು ಕರೆದುಕೊಂಡು ಬೆಳ್ಳಂಬೆಳಗ್ಗೆ ರಸ್ತೆಗೆ ಬಿಡುತ್ತಾರೆ. ಹಸುಗಳು ಅಂಗಡಿಗಳ ಮುಂದೆ ಹಾಕಿರುವ ಪದಾರ್ಥಗಳು ರಸ್ತೆಯಲ್ಲಿರುವ ಬಾಳೆಹಣ್ಣಿನ ಸಿಪ್ಪೆ ಗಳು ಈ ರೀತಿ ಸಿಗುವ ಪದಾರ್ಥಗಳನ್ನು ತಿನ್ನಲು ಒಂದನ್ನೊಂದು ಗುದ್ದಾಡಿ ಕೊಂಡು ಸ್ಕೂಟರುಗಳ ಮೇಲೆ ಮಕ್ಕಳ ಮೇಲೆ ವಾಹನಗಳ ಮೇಲೆ ಅಂಗಡಿಗಳ ಸೋಕೇಶ್ ಗಳ ಮೇಲೆ ಬೀಳುತ್ತವೆ ಇದರಿಂದ ತೊಂದರೆ ಆಗಿದೆ ಹಸುವಿನ ಮಾಲೀಕರು ಖರೀದಿ ಮಾಡಿ ತಂದಿದ್ದ ಹಸುಗಳನ್ನು ಮನೆಯಲ್ಲೇ ಕಟ್ಟಿಕೊಂಡು ಸಾಕಬೇಕು ಇದನ್ನು ಬಿಟ್ಟು ಬೆಳ್ಳಂಬೆಳಗ್ಗೆ ಹಾಲನ್ನು ಕರೆದುಕೊಂಡು ಬೀದಿಗೆ ಬಿಡುತ್ತಾರೆ ಇದರಿಂದ ತೊಂದರೆಯಾಗಿದೆ.
ಆದ್ದರಿಂದ ನಗರಸಭೆ ಅಧಿಕಾರಿಗಳು ಇಂತಹ ಮನೆಯ ಮಾಲೀಕರ ಹಸುಗಳಿಗೆ ಕಡಿವಾಣ ಹಾಕಬೇಕು ಜೊತೆಗೆ ಮಾಲೀಕನಿಗೆ ದಂಡ ವಿಧಿಸಬೇಕು ಇದರಿಂದ ಎಚ್ಚೆತ್ತುಕೊಂಡು ಮನೆಯ ಮಾಲಿಕ ರಸ್ತೆಗೆ ಬಿಡದೆ ಮನೆಯಲ್ಲೇ ಸಾಕುತ್ತಾನೆ ಎಂಬುದು ಸಾರ್ವಜನಿಕರ ಪ್ರಶ್ನೆ ಮುಂದಾದರೂ ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮಗಳು ಗೊಳ್ಳಬೇಕು ಇಲ್ಲದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

Leave a Comment