ಹಸಿವು ಮತ್ತು ಅರಿವು ಆಡಿಯೋ ಅನಾವರಣ

ನೃತ್ಯ ನಿರ್ದೇಶಕ ಎಂ.ಆರ್. ಕಪಿಲ್ ನಿರ್ದೇಶನದ ’ಹಸಿವು ಮತ್ತು ಅರಿವು’ ಚಿತ್ರದ ಹಾಡುಗಳ ದ್ವನಿ ಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಈ ಹಿಂದೆ ಹಳ್ಳಿ ಸೂಗಡು ಎಂಬ ಹೆಸರಿನಲ್ಲಿ ಸಾಹಿತಿ ಡಾ||ದೊಡ್ಡರಂಗೇಗೌಡರ ಬಯೋಪಿಕ್ ಆಧಾರಿತ ಚಿತ್ರವನ್ನು ನಿರ್ದೇಶಿಸಿದ್ದ ಕಪಿಲ್, ಈ ಬಾರಿ ದೇಶ ಹಾಗು ಪ್ರಪಂಚವನ್ನು ಕಾಡುತ್ತಿರುವ ಗಂಭೀರಸಮಸ್ಯೆ ಇಟ್ಟುಕೊಂಡು ಸಿನಿಮಾ ನಿರ್ದೇಶನ ಮಾಡಿದಾರೆ.

ಜಗದೀಶ್ ಸಾರಥ್ಯದಲ್ಲಿ ಆರಂಭ ಗೊಂಡಿರುವ ಸಿನಿಮ್ಯಾಜ಼ಿಕ್ ಮೂಲಕ ಹೊರ ಬರುತ್ತಿರುವ ಮೊದಲ ಮ್ಯೂಸಿಕ್ ಆಲ್ಬಂ ಇದಾಗಿದೆ. ಶೋಭಾವತಿ  ಕಪಿಲ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಸಮಾಜ ಸೇವಕ ಎಸ್.ನಾಗರಾಜ್ ಅನೇಕಲ್ ಸಹಕಾರವಿದೆ. ಜಿ.ರಾಘವೇಂದ್ರ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಉದಯಲೇಖಾ ಸಾಹಿತ್ಯದಲ್ಲಿ ಮೂಡಿ ಬಂದಿರುವ ಅನ್ನದ ಹಸಿವು ಅನ್ನದ ಅರಿವು ಎಂಬ ಟೈಟಲ್ ಸಾಂಗ್ ಮಾತ್ರ ಇದೆ. ಗಾಯಕ ಬದ್ರಿಪ್ರಸಾದ್  ಹಾಡಿಗೆ ದನಿಯಾಗಿದ್ದಾರೆ. ಭುವನೇಶ್ವರಿ ಬಲರಾಮ  ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಹಿರಿಯ ನಟ ಸುಚೇಂದ್ರ ಪ್ರಸಾದ್ ಹಾಗು ಎಸ್.ನಾಗರಾಜ್ ಸೇರಿ ಈ ಚಿತ್ರದ ಹಾಡಿನ ದ್ವನಿಸುರುಳಿಯನ್ನು ಲೋಕಾರ್ಪಣೆ ಮಾಡಿ, ಹಸಿವು ಎನ್ನುವುದು ಒಂದು ಸಾಮಾಜಿಕ ಸಮಸ್ಯೆಯಾಗಿದ್ದು ಉಳ್ಳವರು ಅನ್ನವನ್ನು ಎಂದು ವ್ಯರ್ಥಮಾಡಬೇಡಿ. ಹಸಿದವರಿಗೆ ನೀಡಿ ಅವರ ಹಸಿವಿನ ದಾಹ ತೀರಿಸಿ ಎಂದರು.

jayapradhaಮರಳಿ ಬಂದರು ಸುವರ್ಣ ಸುಂದರಿ ಜಯಪ್ರದಾ

ಸುವರ್ಣ ಸುಂದರಿ’.ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿರೋ ಬಾರೀ ಬಜೆಟ್ಟಿನ ಚಿತ್ರದ ಮೂಲಕ ಬಹುಭಾಷಾ ತಾರೆ ಜಯಪ್ರದಾ ಕನ್ನಡಕ್ಕೆ ಮತ್ತೆ ಮರಳಿದ್ದಾರೆ!

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ  ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಬಾಹುಬಲಿ ಚಿತ್ರ ದ ರೀತಿ, ಕನ್ನಡದ ಸೀಮಿತ ಮಾರುಕಟ್ಟೆಯಿರೋ ಚಿತ್ರರಂಗದಲ್ಲಿ ಅಂಥಾ ಅದ್ದೂರಿ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬಂಥಾ ವಾತಾವರಣವಿತ್ತು. ಆದರೆ ಸುವರ್ಣ ಸುಂದರಿ ಚಿತ್ರ ಅದನ್ನು ಸುಳ್ಳು ಮಾಡಿದೆ ಎಂಬುದು ಚಿತ್ರತಂಡದ ಖಚಿತ ಅಭಿಪ್ರಾಯ. ಯಾಕೆಂದರೆ ಈ ಚಿತ್ರದಲ್ಲಿಯೂ ಶೇಖಡಾ ನಲವತ್ತರಷ್ಟು ಭಾಗ ಅದ್ಭುತವಾದ ಗ್ರಾಫಿಕ್ಸ್‌ನಿಂದ ತುಂಬಿದೆ. ಎಲ್ಲಿಯೂ ಅಸಹಜ ಅನ್ನಿಸದಂತೆ ಇದನ್ನು ಕ್ರಿಯೇಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗಿದೆ.

Leave a Comment