ಹಸಿರು ಭಾನುವಾರ ಸಸಿ ನೆಡುವ ಅಭಿಯಾನಕ್ಕೆ ಚಾಲನೆ

ಮೈಸೂರು. ಸೆ.22- ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ್ ರವರ 60ನೇ ವರ್ಷದ ಜನ್ಮ ದಿನೋತ್ಸವದ ಅಂಗವಾಗಿ ಹಸಿರುಲೋಕ ಮೈಸೂರು ವತಿಯಿಂದ ಕೃಷ್ಣಮೂರ್ತಿಪುರಂನಲ್ಲಿರುವ ಮೈಸೂರು ಅನಂತಸ್ವಾಮಿ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ “ಹಸಿರು ಭಾನುವಾರ” ಸಸಿ ನೆಡುವ ಅಭಿಯಾನಕ್ಕೆ ಲಕ್ಷ-ವೃಕ್ಷ ಸಂಚಾಲಕರಾದ ಹೆಚ್.ವಿ ರಾಜೀವ್ ರವರು ಬೇವಿನ ಸಸಿ ನೆಡುವ ಮೂಲಕ ಚಾಲನೆ ನೀಡಿದರು, ಹಸಿರುಲೋಕ ಯುವಕರ ಸದಸ್ಯರು ಪ್ರತಿವಾರ ಹಸಿರುಭಾನುವಾರ ಪರಿಸರ ರಕ್ಷಣೆಯೊಂದಿಗೆ ಸಸಿ ನೆಡುವ ಅಭಿಯಾನದ ಬಗ್ಗೆ ಯುವಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು,
ನಂತರ ಹೆಚ್.ವಿ ರಾಜೀವ್ ರವರು ಮಾತನಾಡಿ ದೇಶದಲ್ಲಿ ಯುವಕರು ವಿದ್ಯಾವಂತರಾಗಬೇಕು ಮತ್ತು ಸಸಿಗಳು ಮರಗಳಾಗಿ ಬೆಳೆದು ನಿಂತರೇ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಇದರ ಸಂದೇಶವನಿಟ್ಟುಕೊಂಡು ಯುವಕರ ತಂಡದೊಂದಿಗೆ ಪ್ರತಿಭಾನುವಾರ ಸಸಿ ನೆಡುವ ಮೂಲಕ ಹಸಿರುಭಾನುವಾರ ಸ್ಥಾಪಿಸಿದವರು ಕೇಂದ್ರದ ಮಾಜಿ ಸಚಿವರಾದ ಅನಂತಕುಮಾರ್ ರವರು, ಆರ್ಥಿಕವಾಗಿ ಹಿಂದುಳದ ಮಕ್ಕಳಿಗೆ ಅಕ್ಷರ-ಅನ್ನ-ಆರೋಗ್ಯ ಪ್ರತಿಯೊಬ್ಬ ಮಗುವಿಗೂ ಅವಶ್ಯಕವಿದ್ದ ಸಂಧರ್ಭದಲ್ಲಿ ಅದಮ್ಯಚೇತನದ ಮೂಲಕ ಲಕ್ಷಾಂತರ ಮಕ್ಕಳಿಗೆ ಅನ್ನದಾಸೋಹ, ಅಕ್ಷರಭ್ಯಾಸ ಕಲಿಕಾ ಕೇಂದ್ರಗಳು ಸ್ಥಾಪನೆ ಮತ್ತು ಹೃದ್ರೋಗ ಚಿಕಿತ್ಸೆಗಾಗಿ ಅತಿಕಡಿಮೆ ಬೆಲಯಲ್ಲಿ ವೈದ್ಯಕೀಯ ಸಲಕರಣೆಗಳನ್ನು ತಂದ ಕೀರ್ತಿ ಅನಂತಕುಮಾರ್ ರವರಿಗೆ ಸಲ್ಲುತ್ತದೆ, ರಸಗೊಬ್ಬರ ಸಚಿವರಾಗಿದ ಸಂಧರ್ಭದಲ್ಲಿ ರೈತರಿಗೆ ರಾಸಾಯನಿಕ ರಹಿತ ಬೇವು ಲೇಪಿತ ರಸಗೊಬ್ಬರ ವಿತರಣೆ ಯೋಜನೆ ದೇಶದಲ್ಲಿ ಜಾರಿಗೆ ತಂದರು, ಕಳೆದ ಆರೇಳು ವರ್ಷಗಳಿಂದ ಹಸಿರುಭಾನುವಾರ ಯೋಜನೆ ಬೆಂಗಳೂರಿನಲ್ಲಿ ಸಹಸ್ರಾರು ಸ್ವಯಂಪ್ರೇರಿತರು ಲಕ್ಷಾಂತರ ಗಿಡಗಳನ್ನು ನೆಟ್ಟು ಹಸಿರು ಬೆಂಗಳೂರು ಮಾಡಲು ಶ್ರಮಿಸಿದ್ದಾರೆ, ಇತ್ತೀಚಿನ ದಿಗಳಲ್ಲಿ ನಾವು ಜೀವಿಸುವುದಕ್ಕೆ ಮೆನೆಕಟ್ಟಿಕೊಳ್ಳುತ್ತೇವೆ ಆದರೆ ಸಣ್ಣಪಕ್ಷಿ ಪ್ರಾಣಿಗಳ ಬದುಕು ಮರ ಗಿಡಗಳಲ್ಲೇ ಹಾಗಾಗಿ ಸಸಿಗಳನ್ನು ಬೆಳಸಬೇಕಾಗಿದೆ, ಮತ್ತು ಮೈಸೂರು ನಗರವನ್ನು ಹಸಿರು ವಲಯವನ್ನಾಗಿ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಣೆ ರಕ್ಷಣೆ ಪರಿಸರ ಮನೋಭಾವ ಬೆಳಸಿಕೊಳ್ಳಬೇಕು, ಇಂದಿನ ದಿನಗಳಲ್ಲಿ ಮಾಲಿನ್ಯ ಮುಕ್ತ ಮತ್ತು ತಾಪಮಾನ ನಿಯಂತ್ರಣಕ್ಕಾಹಿ ಪರಿಶುದ್ಧ ಗಾಳಿ ನೆರಳು ಅವಶ್ಯಕ ಹಾಗಾಗಿ ನಮ್ಮ ಮನೆಗಳ ಮುಂದೆ ಸಸಿಗಳನ್ನು ನೆಡಬೇಕು ಮನೆಯ ಸುತ್ತಮುತ್ತ ಅಥವಾ ಮೇಲ್ಚಾವಣಿಯ ತಾರಸಿಯಲ್ಲಿ ಕುಂಡಗಳಲ್ಲಿ ಗಿಡಗಳನ್ನು ಇಟ್ಟರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಾಹುದು ಎಂದರು
ಹಸಿರುಭಾನುವಾರ ಸಸಿ ನೆಡುವ ಅಭಿಯಾನದಲ್ಲಿ ಲಕ್ಷ-ವೃಕ್ಷ ಸಂಚಾಲಕ ಹೆಚ್.ವಿ ರಾಜೀವ್, ಮಾಜಿನಗರಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ, ಹಸಿರುಲೋಕ ಅಭಿಯಾನದ ಸದಸ್ಯ ರಾದ ಶ್ರೀನಿಧಿ ರಾವ್, ವಿಕ್ರಂ ಅಯ್ಯಂಗಾರ್, ಎಂ.ಆರ್ ಬಾಲಕೃಷ್ಣ, ಹೆಚ್.ವಿ ಭಾಸ್ಕರ್, ಅಭಿಲಾಶ್, ಗಣೇಶ್, ಸಂತೋಷ್, ಜಯಸಿಂಹ, ಸುಕೃತಿ ಶ್ರೀಧರ್, ಸುಬ್ರಹ್ಮಣ್ಯ, ರಂಗನಾಥ್, ಸುಚೀಂದ್ರ, ಚಕ್ರಪಾಣಿ, ಅರಣ್ ಟಿಎಸ್, ನಾಗೇಶ್, ಅರವಿಂದ್ ಮುಂತಾದವರು ಇದ್ದರು

Leave a Comment