ಹಸಿರಿನ ಹಬ್ಬದ ಸಂಭ್ರಮದಲ್ಲಿ ಜಿಎಂಐಟಿ ವಿದ್ಯಾರ್ಥಿಗಳು

ದಾವಣಗೆರೆ.ಆ.12; ಅರಣ್ಯ ನಾಶದ ಪರಿಣಾಮ, ಅಳಿವಿನ ಅಂಚಿನಲ್ಲಿರುವ ವನ್ಯಜೀವಿ, ಸಂಕುಲದ ಕುರಿತು, ತಮ್ಮದೇ ಆದ ವಿಷೇಶ ಶೈಲಿಯಲ್ಲಿ ವಿದ್ಯಾರ್ಥಿಗಳು ಅರಿವು ಮೂಡಿಸಿದರು. ನಗರದ ಜಿಎಂಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎನ್‍ಎಸ್‍ಎಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವನಮಹೋತ್ಸವ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋಬಯೋಲಜಿ ವಿಭಾಗದ ಮುಖ್ಯಸ್ಥ ಡಾ. ಶಿಶುಪಾಲ ಎಸ್, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರು. “ಹಸಿರೇ ಉಸಿರು”, “ಕಾಡಿದ್ದರೆ ನಾಡು” ಎಂಬ ಮಾತುಗಳು ಅನುಷ್ಠಾನಕ್ಕೆ ಬರಬೇಕು ಆಗ ಮಾತ್ರ ನಷಿಸಿ ಹೋಗುತ್ತಿರುವ ವನ್ಯ ಸಂಪತ್ತುನ್ನು ಕಾಪಡಬಹುದು. ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ತಾವೆ ಸೆರೆ ಹಿಡಿದ ಅತಿ ವಿಶೇಷವಾದ ಪ್ರಾಣಿ ಪಕ್ಷಿಗಳ ಛಾಯಗ್ರಹಣದ ಮೂಲಕ ನಮ್ಮ ಪರಿಸರದಲ್ಲಿನ ಪರಿಸ್ಥಿತಿಯ ಅತಿ ಸರಳ ಮತ್ತು ಸುಂದರ ಶೈಲಿಯಲ್ಲಿ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿ ವಿದ್ಯಾರ್ಥಿಗಳಲ್ಲಿನ ಪರಿಸರ ಪ್ರೇಮವನ್ನು ಬಡಿದ್ದೇಬಿಸಿದರು. ಪರಿಸರ ರಕ್ಷಣೆಯಲ್ಲಿ ಪ್ರತಿಯೊಬ್ಬರ ಕೊಡುಗೆ ತುಂಬಾ ಅವಶ್ಯ ಎಂದು ತಮ್ಮ ಮನೆಯಲ್ಲಿ ಸ್ವಯಂ ನೂರಾರು ಗಿಡಗಳನ್ನು ನೆಡುವ ಮೂಲಕ ಅವರ ಪರಿಸರ ಪ್ರೀತಿಯನ್ನು ಮೆರಿದಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಪ್ರಕಾಶ್ ರವರು ವನಮಹೋತ್ಸವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು “ನೀವು ನಮ್ಮನ್ನು ಬೆಳಿಸಿದರೆ, ನಾವು ನಿಮ್ಮನ್ನು ರಕ್ಷಿಸುತ್ತೆವೆ ಎಂಬ ಪ್ರಕೃತಿಯ ಮಾತು ಮತ್ತು ಪ್ರಕೃತಿ ಭೂಮಿಯ ಆಭರಣಗಳು ಅವುಗಳನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬರದು, ಮಾಲಿನ್ಯ ಮುಕ್ತ ದೇಶದತ್ತ ಸಾಗೋಣ ಪರಿಸರ ಪ್ರೇಮವನ್ನು ಕಾರ್ಯಗತ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ವೈ.ಯು. ಸುಭಾಶ್‍ಚಂದ್ರ, ಮತ್ತು ವಿವಿಧ ವಿಭಾಗದ ಮುಖ್ಯಸ್ಥರುಗಳು, ಎನ್.ಎಸ್.ಎಸ್ ಘಟಕದ ಮುಖ್ಯ ಕಾರ್ಯ ಸಂಯೋಜಕರಾದ ಶ್ರೀ ಓಂಕಾರಪ್ಪ ಹೆಚ್.ಎಸ್, ಎಂ.ಬಿ.ಎ ವಿಭಾಗದ ನಿರ್ದೇಶಕರಾದ ಡಾ.ಬಕ್ಕಪ್ಪನವರು, ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಓಂಕಾರಪ್ಪನವರು, ಹಾಗೂ ಪ್ರಾಧ್ಯಾಪಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕು.ಹರ್ಷಿತಾ ತಾಪ್ಸೆ ನೆರೆವೇರಿಸಿದರು. ಶ್ರೀ ಶರತ್ ಪ್ರಾರ್ಥನೆಯನ್ನು ಮತ್ತು ಕು. ಅನುಪಶ್ರೀ ವಂದಿಸಿದರು.

Leave a Comment