ಹವಾ ಸೃಷ್ಟಿಸಿರುವ ಅವನೇ ಶ್ರೀಮನ್ನಾರಾಯಣ

ಬೆಂಗಳೂರು, ಡಿ. ೨೭- ರಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ `ಅವನೇ ಶ್ರೀಮನ್ನಾರಾಯಣ’ ಚಿತ್ರ ರಾಜ್ಯದಲ್ಲಿ 450ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಇಂದು ತೆರೆಗೆ ಬಂದಿದ್ದು, ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ ಹವಾ ಸೃಷ್ಟಿಸಿದೆ.
ಮೂರು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ ಚಿತ್ರ ತೆರೆಗೆ ಬರುತ್ತಿರುವುದರಿಂದ ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿ ಸ್ವೀಕರಿಸಿದ್ದು, ಬೆಳಿಗ್ಗೆಯಿಂದಲೇ ಎಲ್ಲ ಕೇಂದ್ರಗಳಲ್ಲಿ ಧೂಳೆಬ್ಬಿಸಿದೆ.
ಅದರಲ್ಲೂ ಹ್ಯಾಂಡ್ ಅಪ್ ಹಾಡಿನ ಮೂಲಕ ಬಿಡುಗಡೆಗೂ ಮುನ್ನ ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಕಾತುರ ಹೆಚ್ಚುವಂತೆ ಮಾಡಿದ್ದರು. ಸಾಮಾಜಿಕ ಜಾಲ ತಾಣಗಳಲ್ಲೂ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಐದು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದ್ದ ಅವನೇ ಶ್ರೀಮನ್ನಾರಾಯಣ ಇಂದು ಕನ್ನಡದಲ್ಲಿ ಮಾತ್ರ ತೆರೆಗೆ ಬಂದಿದ್ದು, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮುಂದಿನ ವಾರದಿಂದ ಹಂತ ಹಂತವಾಗಿ ತೆರೆಗೆ ಬರಲಿದೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಪ್ರಕಾಶ್ ಗೌಡ ನಿರ್ಮಿಸಿರುವ ಬಹುಕೋಟಿ ವೆಚ್ಚದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ಶಾನ್ವಿರ್ ಶ್ರೀವಾತ್ಸವ ಜೋಡಿಯಲ್ಲಿ ಕಾಣಿಸಿಕೊಂಡಿದ್ದು, ಸಚಿನ್ ನಿರ್ದೇಶನವಿದೆ.
ಮೊದಲ ದಿನವೇ ಅಬ್ಬರಿಸಿರುವ ಅವನೇ ಶ್ರೀ ಮನ್ನಾರಾಯಣ, ಮುಂದಿನ ದಿನಗಳಲ್ಲಿ ಹೇಗೆ ಮೋಡಿ ಮಾಡಲಿದೆ ಎಂಬುದು ಕಾದು ನೋಡಬೇಕಾಗಿದೆ.

Leave a Comment