ಹವಾಮಾನ ವೈಪರಿತ್ಯ ಆಗಸದಲ್ಲಿ ಅರ್ಧ ಗಂಟೆ ಸುತ್ತಿದ ವಿಮಾನ

ಹುಬ್ಬಳ್ಳಿ, ಅ 16- ಹವಾಮಾನ ವೈಪರಿತ್ಯದಿಂದಾಗಿ ವಿಮಾನವೊಂದು ಅರ್ಧ ಗಂಟೆಯ ಕಾಲ ಆಗಸದಲ್ಲೇ ಸುತ್ತು ಹೊಡೆದು ಪ್ರಯಾಣಿಕರು ಕಕ್ಕಾಬಿಕ್ಕಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬೆಂಗಳೂರಿನಿಂದ 6.45ಕ್ಕೆ ಹೊರಟಿದ್ದ ಇಂಡಿಗೋ ವಿಮಾನ 7.45ಕ್ಕೆ ಹುಬ್ಬಳ್ಳಿ ತಲುಪಬೇಕಿತ್ತು. ಆದರೆ ಮೋಡ ಕವಿದ ವಾತಾವರಣ ಉಂಟಾಗಿದ್ದ ಹಿನ್ನೆಲೆಯಲ್ಲಿ ಲ್ಯಾಂಡ್ ಆಗಲು ಸಾಧ್ಯ ವಾಗಲಿಲ್ಲ. ಇದರಿಂದ 60ಕ್ಕೂ ಹೆಚ್ಚು ಪ್ರಯಾಣಿಕರು ಕಂಗಾಲಾಗಿದ್ದರು. ಆದರೆ ಪೈಲಟ್ ಚಾಕಚಕ್ಯತೆಯಿಂದ ಅನಾಹುತ ತಪ್ಪಿದೆ. ಬಳಿಕ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಡಿಂಗ್ ಮಾಡಲಾಯಿತು. ಇದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು.

Leave a Comment