ಹವಾಮಾನ ಬದಲಾವಣೆ: ಹಿಮಕರಡಿ ಸಂತತಿ ಸಂಕಷ್ಟದಲ್ಲಿ

ಆರ್ಟಿಕ್ ಧ್ರುವ ಪ್ರದೇಶದ ಮಂಜಿನ ಮೇಲೆ ಹವಾಮಾನ ಬದಲಾವಣೆ ತೀವ್ರ ಪರಿಣಾಮ ಬೀರಿದ್ದು, ಇದರಿಂದ ಅಲ್ಲಿಯ ಹಿಮಕರಡಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಹವಾಮಾನ  ಬದಲಾವಣೆಯ  ಪ್ರತಿಕೂಲ ಪರಿಣಾಮದಿಂದ ಆರ್ಟಿಕ್ ಧ್ರುವ ಪ್ರದೇಶದ  ಹಿಮಕರಡಿಗಳು  ಆಹಾರದ ಕೊರತೆಯನ್ನು  ಎದುರಿಸುತ್ತಿದ್ದು, ಇದು ಅವುಗಳ  ಸಂತತಿ  ಇಳಿಕೆಗೆ   ಕಾರಣವಾಗಿದೆ ಎಂದು  ಅಧ್ಯಯನ ವರದಿಯೊಂದು ಹೇಳಿದೆ.

ಹವಾಮಾನ ಬದಲಾವಣೆ ಹಿಮಕರಡಿಗಳ ಆಹಾರ ಲಭ್ಯತೆ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಅವು ಆಹಾರ ಕೊರತೆಯನ್ನು ಎದುರಿಸುತ್ತಿವೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಹಿಮಕರಡಿಗಳ ಮೇಲೆ ಅಧ್ಯಯನ ನಡೆಸುತ್ತಿರುವ ಕ್ಯಾಲಿಪೋರ್ನಿಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಅಧ್ಯಯನ ತಂಡದ ಈ ವರದಿ ನ್ಯೂ ಸೈನ್ಸ್‌ನ ಇತ್ತೀಚಿನ ಸಂಖ್ಯೆಯಲ್ಲಿ ಪ್ರಕಟವಾಗಿದೆ.

ಆರ್ಟಿಕ್ ಧ್ರುವ ಪ್ರದೇಶದಲ್ಲಿಯ ಪ್ರತಿಕೂಲ ಹವಾಮಾನದಲ್ಲಿಯೂ ಹಿಮಕರಡಿಗಳು ಜೀವನ ನಿರ್ವಹಿಸಲು ಅವಕ್ಕೆ ಪ್ರಮುಖ ಆಸರೆಯಾಗಿರುವುದು ಅವುಗಳ ಪೌಷ್ಠಿಕ ಮಾಸಾಂಹಾರ. ಸೀಲ್‌ಗಳು ಇವುಗಳ ಮುಖ್ಯ ಆಹಾರ ಈಗ ಇವುಗಳ ಲಭ್ಯತೆಯಲ್ಲಿ ಕೊರತೆಯಾಗಿದ್ದು, ಇದು ಹಿಮಕರಡಿಗಳ ಜೀವನ ವಿಧಾನ ಮತ್ತು ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಅಡ್ಡ ಪರಿಣಾಮ ಬೀರಿದೆ. ಹೀಗಾಗಿ, ಅವುಗಳ ಸಂತತಿ ಬೆಳವಣಿಗೆಯ ಗತಿ ಶೇ. ೪೦ರಷ್ಟು ಕುಸಿದಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಆಂಟೋನಿ ತಗಾನೊ ಹೇಳಿದ್ದಾರೆ.

ಆರ್ಟಿಕ್ ಧ್ರುವ ಪ್ರದೇಶದ ಹಿಮಕರಡಿಗಳ ಮೇಲೆ ಅಧ್ಯಯನ ನಡೆಸುತ್ತಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಅಧ್ಯಯನ ತಂಡ ಈ ಕುರಿತಂತೆ ನೀಡಿರುವ ವರದಿ ಸೈನ್ಸ್ ನಿಯತಕಾಲಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಅಂಟಾರ್ಟಿಕಾದ ಹಿಮದ ಮೇಲೆ ಬದಲಾಗುತ್ತಿರುವ ಹವಾಮಾನದ ಪರಿಣಾಮವಾಗಿ ಅವುಗಳ ಆಹಾರ ಪದ್ಧತಿ ಮತ್ತು ಜೀವನ ವಿಧಾನದ ಮೇಲೆ ಬೀರುತ್ತಿರುವುದರಿಂದ ಅವು ಬದುಕುಳಿಯುವ ಮತ್ತು ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಶೇ. ೪೦ರಷ್ಟು ಕಳೆದುಕೊಂಡಿವೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಆಂಟೋನಿತಗಾನೋ ಹೇಳಿದ್ದಾರೆ. ಹಿಮಕರಡಿಗಳಿಗೆ ತೊಡಿಸಿರುವ ರೇಡಿಯೋ ಕಾಲಱ್ಸ್‌ಗಳಲ್ಲಿ ದಾಖಲಾಗಿರುವ ಅಂಶಗಳ ಅಧ್ಯಯನದ ಆಧಾರದಲ್ಲಿ ಅವುಗಳ ಜೀವನ ವಿಧದಲ್ಲಾದ ಬದಲಾವಣೆ, ಆಹಾರದ ಕೊರತೆಯಿಂದ ಅವು ಆಹಾರ ಹುಡುಕಾಟದಲ್ಲಿ ಅನ್ಯ ಪ್ರದೇಶಗಳಿಗೆ ಹೋಗುವ ಅನಿವಾರ್ಯತೆ ಇತ್ಯಾದಿ ಕುರಿತ ಪ್ರಮುಖ ಅವುಗಳ ಪ್ರಕ್ರಿಯೆಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆ ಹಾಕಲಾಗಿದೆ.

ಹಿಮಕರಡಿಗಳು ಸಾಮಾನ್ಯವಾಗಿ ಏಪ್ರಿಲ್‌ನಿಂದ ಜುಲೈ ತಿಂಗಳವರೆಗಿನ ಬೇಸಿಗೆಯ ದಿನಗಳಲ್ಲಿ ಆಹಾರವನ್ನು ಹುಡುಕುತ್ತವೆ. ಸಿಗುವ ಪೌಷ್ಠಿಕ ಮಾಂಸಾಹಾರದಿಂದ ಅವು ತಮ್ಮ ದೇಹದಲ್ಲಿ ಕೊಬ್ಬಿನಾಂಶವನ್ನು ಹೆಚ್ಚಿಸಿಕೊಂಡು, ಚಳಿಗಾಲದಲ್ಲಿ ಅದರ ಸಹಾಯದಿಂದ ಬದುಕು ನಡೆಸುತ್ತವೆ.
ಬೇಸಿಗೆಯಲ್ಲಿ ಹಿಮಗಡ್ಡೆಗಳು ಹೆಚ್ಚಿನ ಪ್ರಮಾಣದಲ್ಲಿ ಕರಗುವ ಪರಿಣಾಮ ಅವುಗಳ ಪ್ರಮುಖ ಆಹಾರವಾದ ಸೀಲ್‌ಗಳ ಬೇಟೆಗೆ ತೊಂದರೆಯಾಗಿದೆ.

ಪ್ರತಿಕೂಲ ಸ್ಥಿತಿ

ಆರ್ಟಿಕ್ ಧ್ರುವ ಪ್ರದೇಶದಲ್ಲಿಯ ಪ್ರತಿಕೂಲ ಪರಿಸರದಲ್ಲಿಯೂ ಅವು ಬದುಕಿ ಉಳಿಯಲು ಪ್ರಮುಖ ಸಾಧನವಾಗಿರುವುದು ಅವುಗಳು ತಿನ್ನುವ ಆಹಾರ, ಅದರಿಂದಾಗಿ ದೇಹದಲ್ಲಿಯ ಕೊಬ್ಬಿನಾಂಶ ಸಂಗ್ರಹ ಮತ್ತು ಅವುಗಳ ಮೈ ಮೇಲಿನ ತುಪ್ಪಳ, ಜೊತೆಗೆ ಹಿಮ ಸಾಗರ ನೀರಿನ ಒಳಗೂ ಸರಾಗವಾಗಿ ನೋಡಬಲ್ಲ ಕಣ್ಣಿನ ರಚನೆ, ಜೊತೆಗೆ ಅವುಗಳ ಪಾದಗಳ ರಚನೆಯೂ ಅವು ಹಿಮ ಬಂಡೆಗಳ ಮೇಲೆ ಜಾರದೆ ನಡೆಯಬಲ್ಲ ಸಾಮರ್ಥ್ಯ ನೀಡಿದೆ. ಹಾಗೆಯೇ ಇದಕ್ಕಿರುವ ವಾಸನಾ ಸಾಮರ್ಥ್ಯವು ಆಹಾರ ಹುಡುಕಲು ಅದಕ್ಕೆ ಸಹಾಯವಾಗಿದೆ. ೩೨ ಕಿ.ಮೀ ದೂರದಲ್ಲಿ ಸೀಲ್ ಇರುವುದನ್ನು ವಾಸನೆಯಿಂದ ಗುರುತಿಸಬಲ್ಲವು.

ಸೀಲ್‌ಗಳು ಇರುವುದು ಗುರುತಿಸಿದ ನಂತರ ಅವುಗಳ ಬೇಟೆಗಾಗಿ ವಾರಗಟ್ಟಲೆ ಕಾಯುತ್ತವೆ. ಬೇಟೆ ತನ್ನ ಗುರಿಯ ಸೀಮಿತ ಪ್ರದೇಶಕ್ಕೆ ಬರುವವರೆಗೂ ಕಾದು, ಅವುಗಳ ಮೇಲೆರಗಿ ಹಿಡಿಯುವುದು ಇದಕ್ಕೆ ಕರಗತ.

ಚಳಿಗಾಲ

ಚಳಿಗಾಲ ಆರಂಭವಾಗುತ್ತಿದ್ದಂತೆ ಹಿಮದಲ್ಲಿ ದೊಡ್ಡ ರಂಧ್ರ ಕೊರೆದು ಅದರಲ್ಲಿ ಸೇರಿಕೊಳ್ಳುತ್ತವೆ. ಈ ಬಿಲದ ಮೇಲೆ ಭಾರಿ ಪ್ರಮಾಣದಲ್ಲಿ ಮಂಜಿನ ಶೇಖರಣೆಯಾಗುತ್ತದೆ.

ಭಾರಿ ಗಾತ್ರದಲ್ಲಿ ಶೇಖರಣೆಗೊಂಡ ಮಂಜು, ಬಿಲದಲ್ಲಿರುವ ಇವುಗಳನ್ನು ಹೊರಗಿನ ಚಳಿಯಿಂದ ರಕ್ಷಿಸುತ್ತದೆ. ಚಳಿಗಾಲ ಪೂರ್ತಿ ಬಿಲದಲ್ಲಿಯೇ ಇರುವ ಹಿಮಕರಡಿಗಳು ತಮ್ಮ ಸಂತಾನೋತ್ಪತ್ತಿಯು ಇದೇ ಅವಧಿಯಲ್ಲಿ ನಡೆಯುತ್ತದೆ.

ಹಾಲು ಉಣಿಸುತ್ತ ಮೂರು ತಿಂಗಳವರೆಗೆ ಬಿಲದಲ್ಲಿಯೇ ಮರಿಗಳ ರಕ್ಷಣೆ ಮಾಡುವ ಹಿಮಕರಡಿಗಳು, ನಂತರದಲ್ಲಿ ಮರಿಗಳೇ ಅವುಗಳ ಆಹಾರ ಹುಡುಕಿಕೊಳ್ಳುವ ಸಾಮರ್ಥ್ಯಗಳಿಸಿಕೊಳ್ಳುತ್ತವೆ.

– ಉತ್ತನೂರು ವೆಂಕಟೇಶ್

Leave a Comment