ಹಳ್ಳಿ ಸೊಗಡಿನ ವೀರಾಧಿವೀರ

ಗಾಯತ್ರಿ ಚಿತ್ರ ನಿರ್ದೇಶನ ಮಾಡಿದ್ದ ಸತ್ಯ ಸಾಮ್ರಾಟ್ ಮತ್ತೊಮ್ಮೆವೀರಾಧಿವೀರ” ಚಿತ್ರದ ಮೂಲಕ ಮತ್ತೊಮ್ಮೆ ಸದ್ದು ಮಾಡಲು ಮುಂದಾಗಿದ್ದಾರೆ.ಈ ಬಾರಿ ಮಂಡ್ಯದ ಹಳ್ಳಿ ಸೊಗಡಿನ ಕಥೆಹೆ ಕಳ್ಳತನ ಸೇರಿದಂತೆ ವಿವಿಧ ವಿಷಯಗಳ ಸ್ಪರ್ಶದ ಲೇಪ ಹಚ್ಚಿದ್ದಾರೆ.

ಚಿತ್ರವನ್ನು ಮಂಗಳೂರು, ಸಕಲೇಶಪುರ, ಮೇಲುಕೋಟೆ ಸೇರಿದಂತೆ ವಿವಧ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು,ಚಿತ್ರದಲ್ಲಿ ವಿಷ್ಣುವರ್ಧನ್ ಅಭಿಮಾನಕ್ಕಾಗಿ ವೀರಾಧಿವೀರ ಎಂದು ಹೆಸರಿಟ್ಟಿದ್ದಾರೆ.

ಚಿತ್ರದಲ್ಲಿ ನಿರ್ದೇಶಕ, ನಾಯಕ ವಿಷ್ಣುವರ್ಧನ್ ಅಭಿಮಾನಿಯಾದರೆ ನಾಯಕಿ ದರ್ಶನ್ ಅಭಿಮಾನಿ.ಹಾಗಾಗಿ ವೀರಾಧಿವೀರ ಚಿತ್ರ. ಅಭಿಮಾನಿಗಳ ಚಿತ್ರ. ಕಳೆದವಾರ ಚಿತ್ರ ಸಿಡಿ ಬಿಡುಗಡೆ ಸಮಾರಂಭವಿತ್ತು.ಲಹರಿ ವೇಲು ಕಂಪನಿ ಆಡಿಯೋ ಬಿಡುಗಡೆ ಮಾಡಿದೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ಸತ್ಯ ಸಾಮ್ರಾಟ್,ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ನಾಯಕನ ಪಾತ್ರ ಬರಲಿದೆ. ಮಂಡ್ಯದ ಹಳ್ಳಿಯ ಸೊಗಡಿನ ಕತೆ. ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ನಾಯಕ ಜೀವನ ಸಾಗಿಸುತ್ತಾನೆ. ಈತನ ಬಾಳಿನಲ್ಲಿ ನಾಯಕಿಯ ಪ್ರವೇಶವಾದಾಗ ನಡೆಯುವ ಘಟನೆಯನ್ನಾಧರಿಸಿ ಚಿತ್ರ ಮಾಡಲಾಗಿದೆ. ಚಿತ್ರದಲ್ಲಿ ನಾಯಕನ ಪಾತ್ರ ಎರಡು ಶೇಡ್‌ನಲ್ಲಿ ಕಾಣಸಿಕೊಳ್ಳಲಿದ್ದು ಅದರಲ್ಲಿ ಒಂದು ಅಘೋರಿಯ ಪಾತ್ರ ಎಂದರು.

ನಾಯಕ ಸ್ಮೈಲ್ ಶಿವು,ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಮುಂಚೆ ಹಲವು ಚಿತ್ರಗಳಿಗೆ ಸ್ಟಿಲ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೊದಲ ಬಾರಿಗೆ ನಾಯಕನಾಗಿರುವುದರಿಂದ ತಮ್ಮ ಸಾಮರ್ಥ್ಯಕ್ಕೂ ಮಿಗಿಲಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ವಿವರ ನೀಡಿದರು.

ನಾಯಕಿ ಅಶ್ವಿನಿ,ಚಿಕ್ಕಮಗಳೂರಿನ ಹುಡುಗಿ, ನಿಜ ಜೀವನದಲ್ಲಿ ದರ್ಶನ್ ಅಭಿಮಾನಿ,ಹಳ್ಳಿ ಹುಡುಗಿ ಜೊತೆಗೆ ಬಜಾರಿ ಪಾತ್ರ ಎಂದರು.

ವಿಜಯಾನಂದ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಜೊತೆಗೆ ಖಳ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಕಥೆ ಸಿಕ್ಕಿದೆ.ಜೊತೆಗೆ ಪಾತ್ರವೂ ಕೂಡ ಎಂದು ವಿವರ ನೀಡಿದರು.

Leave a Comment