ಹಳೆ ವೈಷಮ್ಯಕ್ಕೆ ಕೊಲೆ ಯತ್ನ

ತಿಪಟೂರು, ಡಿ. ೬- ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ಹಳೇ ವೈಷಮ್ಯಕ್ಕೆ ಯುವಕನೋರ್ವನ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ತಾಲ್ಲೂಕಿನ ಈಡೇನಹಳ್ಳಿ ಗ್ರಾಮದ ಯತೀಶ್ (22) ಎಂಬುವರೇ ಹಲ್ಲೆಗೊಳಗಾಗಿರುವ ಯುವಕ. ರಾಜೇಶ್ (19) ಹಾಗೂ ಹಲ್ಲೆಗೊಳಗಾಗಿರುವ ಯುವಕ ಸ್ನೇಹಿತರಾಗಿದ್ದು, ಸ್ವಲ್ಪ ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಯತೀಶ್ ತನ್ನ ಹೆಂಡತಿಯ ಊರಿಗೆ ತೆರಳಿದ್ದಾಗ, ರಾಜೇಶ್ ಅದನ್ನು ಗಮನಿಸಿ ಆತನ ಮೇಲೆ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ತಿವಿದು ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದಾನೆ. ತಕ್ಷಣ ಗಾಯಾಳು ಯತೀಶ್‌ನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಸಂಬಂಧ ನೊಣವಿನಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment