ಹಳೆ ಪಿಂಚಣಿ ಪದ್ಧತಿ ಮರುಜಾರಿಗೆ ಪ್ರಯತ್ನ:ನಾರಾ ಪ್ರತಾಪರೆಡ್ಡಿ

ಕಲಬುರಗಿ ಮಾ 14: ರಾಜ್ಯ ಸರಕಾರಿ ನೌಕರರ ಹಿತಾಸಕ್ತಿ ಕಾಪಾಡಲು ಹಳೆಯ ಪಿಂಚಣಿ ಪದ್ಧತಿ ಮರುಜಾರಿಗೊಳಿಸಲು ಜೆಡಿಎಸ್ ಬದ್ಧವಾಗಿದೆ.ಮುಂಬರುವ ರಾಜ್ಯದ  ಶಿಕ್ಷಕರ ಪದವೀಧರರ 6 ಕ್ಷೇತ್ರಗಳಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ   ಜನತಾದಳ (ಜಾತ್ಯತೀತ ) ಪಕ್ಷವು  ಇದನ್ನು  ಪ್ರನಾಳಿಕೆಯ  ಒಂದು ಪ್ರಮುಖ ಅಂಶವಾಗಿ ಪ್ರಕಟಿಸಿದೆ ಎಂದು ಪಕ್ಷದ   ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ನಾರಾ ಪ್ರತಾಪರೆಡ್ಡಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೈಕ ಭಾಗದ ಜಿಲ್ಲೆಗಳಿಗೆ ಪ್ರತ್ಯೇಕ ಪದವೃಂದ ಮತ್ತು ನೇಮಕಾತಿ ನಿಯಮಾವಳಿ ರೂಪಿಸುವದು,ಹಿರಿಯ ಸಚಿವರ ಅಧ್ಯಕ್ಷತೆಯಲ್ಲಿ 371(ಜೆ) ಅನುಷ್ಠಾನ ಸಮಿತಿ ರಚನೆ, ಹೈಕಪ್ರದೇಶಾಭಿವೃಧ್ಧಿ ಮಂಡಳಿಗೆ ಬಂದ ಅನುದಾನದ ಸಮರ್ಪಕ ಬಳಕೆ,ಕಲಬುರಗಿಯಲ್ಲಿ ಕರ್ನಾಟಕರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಸ್ಥಾಪನೆ ಮತ್ತು 371(ಜೆ) ಅನುಷ್ಠಾನ ಸಮಿತಿ ಕಚೇರಿಯನ್ನು ಕಲಬುರಗಿಗೆ ಸ್ಥಳಾಂತರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ.ಎಂದರು

ಜೆಡಿಎಸ್ ಮುಖಂಡ ವಿಧಾನಪರಿಷತ್ ಸದಸ್ಯ  ಕೆ ಟಿ ಶ್ರೀಕಂಠೇಗೌಡ ಮಾತನಾಡಿ ಜನತಾದಳ ಪರಿವಾರ ಆಡಳಿತದಲ್ಲಿದ್ದಾಗ  ಶಿಕ್ಷಕರ, ನಿರುದ್ಯೋಗಿ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿದ್ದು,ಕೌನ್ಸ್ಲಿಂಗ್ ಮೂಲಕ ಶಿಕ್ಷಕರ ನೇಮಕಾತಿ ಮಾಡಿದ್ದು ನಮ್ಮ ಐತಿಹಾಸಿಕ ಸಾಧನೆ. ಮುಂದಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಾರಾ ಪ್ರತಾಪರೆಡ್ಡಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಲು ಕೋರಿದರು

ಸುದ್ದಿಗೋಷ್ಠಿಯಲ್ಲಿ ಬಸವರಾಜ ತಡಕಲ್, ಬಸವರಾಜ ದಿಗ್ಗಾವಿ, ದೇವೇಗೌಡ ತೆಲ್ಲೂರ, ಕೃಷ್ಣಾರೆಡ್ಡಿ, ಮನೋಹರ ಪೋದ್ದಾರ ಸೇರಿದಂತೆ ಹಲವರಿದ್ದರು

Leave a Comment