ಹಳೆ ಪದ್ಧತಿಯಿಂದ ವಿದ್ಯಾಥಿಗಳಲ್ಲಿ ಮೌಲ್ಯ ಕುಸಿತ

ರಾಯಚೂರು.ಸೆ.09- ಹಳೆಯಕಾಲದ ಪಠ್ಯಕ್ರಮ, ಬೋಧನಾ ಪದ್ಧತಿ, ಕಲಿಕಾ ವಿಧಾನ ಮತ್ತು ಸಂಪ್ರದಾಯಗಳಿಂದ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಕುಸಿಯಲು ಕಾರಣವಾಗಿವೆಂದು ಕಲ್ಬುರ್ಗಿ ಪ್ರಾದೇಶಿಕ ಜೆಡಿಸಿಇ ಪ್ರೊ.ಸಿ.ಟಿ.ಬಾಮನಪಾದ್ ಹೇಳಿದರು.
ಅವರಿಂದು ಕನ್ನಡ ಭಾವನದಲ್ಲಿ ಏರ್ಪಡಿಸಿದ್ದ ಸೆಂಟ್ ಥಾಮಸ್ ಡಿಗ್ರಿ ಕಾಲೇಜು ವತಿಯಿಂದ ಸಿಬಿಸಿಎಸ್ ಆಸ್ ನ್ಯೂ ಚಾಲೆಂಜ್ ಒಂದು ದಿನದ ಕಾರ್ಯಗಾರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಯುಜಿಸಿ ಕಾಲ ಕಾಲಕ್ಕೆ ಉನ್ನತ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಅನೇಕ ನಿಯಮಗಳನ್ನು ರೂಪಿಸಲಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡಲು ಪ್ರತಿಯೊಬ್ಬರು ಕಾಳಜಿ ವಹಿಸಬೇಕೆಂದು ತಿಳಿಸಿದರು.
ರಾಜ್ಯದ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ರಾಜ್ಯದಲ್ಲಿ 421 ಕ್ಕೂ ಹೆಚ್ಚು ಸರಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರೇಡ್ ಆಧಾರಿತ ಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಜಯಭಾಸ್ಕರ್, ಗುಲ್ಬರ್ಗಾ ವಿ.ವಿ. ಕಾನೂನು ವಿಭಾಗದ ಡೀನ್ ಡಾ.ದೇವಿದಾಸ್ ಜಿ.ಮಾಲೆ, ನಗರಸಭೆ ಸದಸ್ಯ ಜಯಣ್ಣ, ಕಾಲೇಜಿನ ಪ್ರಾಂಶುಪಾಲ ಡಾ.ತಿಪ್ಪಣ್ಣ ಕಾಲಿಮನಿ, ಕಾರ್ಯದರ್ಶಿ ಥಾಮಸ್ ಬೆಂಜಮಿನ್ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment