ಹಳೆ ನೋಟು ಮಟಾಶ್

ನೋಟು ಅಮಾನ್ಯಕರಣ ಸಂದರ್ಭದಲ್ಲಿ ನಡೆದ ಅವಘಡಗಳು ಸ್ವಾರಸ್ಯಕರ ಘಟನೆಗಳಲ್ಲಿನ ವಿಶೇಷಗಳನ್ನಿಟ್ಟುಕೊಂಡು ಮಟಾಶ್ ಚಿತ್ರವನ್ನು ನಿರೂಪಿಸಲಾಗಿದೆ.ಐನೂರು ಸಾವಿರ ಮುಖಬೆಲೆಯ ನೋಟುಗಳ ರದ್ದತಿಯಿಂದ ಆಗಿರುವ ಸ್ವ್ವಾರಸ್ಯವನ್ನು ಚಿತ್ರದಲ್ಲಿ ಹೇಳಲಾಗಿದ್ದು ಅದರ ಲಾಭ ನಷ್ಟಗಳಿಗೆ ಹೋಗಿಲ್ಲ ಅದಕ್ಕಾಗಿ ಯಾರನ್ನೂ ದೂರಿಲ್ಲ ಎಂದು  ಚಿತ್ರಕ್ಕೆ ಕತೆ, ಏಳು ಹಾಡುಗಳಿಗೆ ಸಂಗೀತ , ನಿರ್ದೇಶನ ಮತ್ತು ನಿರ್ಮಾಣದಲ್ಲಿ  ಪಾಲುದಾರರಾಗಿರುವ ಎಸ್.ಡಿ. ಅರವಿಂದ್ ಸ್ಪಷ್ಟನೆ ನೀಡಿದರು.

film-mataash_144

ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಯಾವ ರೀತಿಯ ಅನುಭವವನ್ನು ಜನತೆ ಪಡೆದುಕೊಂಡರು ಏನೆಲ್ಲಾ ಘಟನೆಗಳು ಜರುಗಿದವು ಪರಿಸ್ಥಿತಿ ಹೇಗಾಗಿತ್ತು ಎನ್ನುವುದನ್ನು  ಹಾಸ್ಯದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ಸರ್ಕಾರದ ವಿರುದ್ದ ದೃಶ್ಯಗಳು ಬರುವುದಿಲ್ಲ. ದುಡ್ಡು ಸಿಕ್ಕಾಗ ಒಬ್ಬೊಬ್ಬರ  ದೃಷ್ಟಿಕೋನಗಳು ಯಾವ ರೀತಿ ಇರುತ್ತದೆ ಎಂಬುದನ್ನು ಹೇಳಲಾಗಿದೆ ಎನ್ನುತ್ತಾರೆ ಅರವಿಂದ್.

ಮಟಾಶ್ ಜೊತೆಗೆ ಉಪಕತೆಯಲ್ಲಿ ಮೈಸೂರು, ಬಿಜಾಪುರ ಕಡೆಯಿಂದ ಯುವಕರ ತಂಡ, ಬೆಂಗಳೂರಿನಿಂದ ಗ್ಯಾಂಗ್‌ಸ್ಟಾರ್ ತಂಡ ಇರುತ್ತದೆ. ಮೈಸೂರಿನ ಯುವಕರು ಸಕಲೇಶಪುರದ ರೆಸಾರ್ಟ್‌ಗೆ ಮಸ್ತಿ ಮಾಡಲು ಹೋಗುತ್ತಾರೆ. ಅಲ್ಲಿ ಬಿಜಾಪುರ ಯುವಕರು ಸೇರಿಕೊಂಡು ಪಾರ್ಟಿ ಮಾಡುವಾಗ ಬೆಂಗಳೂರಿನ ಇಬ್ಬರು ಹುಡುಗಿಯರು ನಿರ್ಧಿಷ್ಟ ಕಾರಣಕ್ಕೆ ಬರುತ್ತಾರೆ.

film-matashimg_2741

ಎಲ್ಲವೂ ಚೆನ್ನಾಗಿರುವಾಗ ಒಂದು ಘಟನೆಯಿಂದ ಎಲ್ಲವು ಉಲ್ಟಾಪಲ್ಟಾ ಆಗಿ, ಬೆಳಿಗ್ಗೆ  ಗೆಳಯರು ಕಾಣದಿರುವುದನ್ನು ಕಂಡು ಗಾಬರಿಯಾಗುತ್ತಾರೆ. ಒಬ್ಬರು ಮತ್ತೋಬ್ಬರ ಮೇಲೆ ಕೋಪಗೊಂಡು ಹುಡುಕಲು ಹೋಗುತ್ತಾರೆ. ಮುಂದಿನದನ್ನು ಚಿತ್ರಮಂದಿರದಲ್ಲ ತಿಳಿದುಕೊಳ್ಳಬಹುದು.ಶೇಕಡ ೬೫ರಷ್ಟು ಸಕಲೇಶಪುರ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸೋದರ ಅವಿನಾಶ್‌ನರಸಿಂಹರಾಜು  ಕಲಾನಿರ್ದೇಶನ, ವಿನೋದ್‌ಬಸವರಾಜು ಸಂಕಲನ, ರೋನಿ ಚೆರಿಯನ್ ಅಬ್ರಾಹಂ ಛಾಯಾಗ್ರಹಣವಿದೆ.

film-mataash_124ತಾರಾಗಣದಲ್ಲಿ ಸಮರ್ಥ್‌ನರಸಿಂಹರಾಜು, ಐಶ್ವರ್ಯ ಸಿಂಧೋಗಿ, ರಜನಿಭಾರದ್ವಾಜ್, ರಾಘುರಾಮನಕೊಪ್ಪ, ನಂದಗೋಪಾಲ, ಕಾಮಿಡಿ ಕಿಲಾಡಿಗಳು  ಖ್ಯಾತಿಯ  ಸದಾನಂದಕಾಳಿ, ರವಿಕಿರಣ್‌ರಾಜೇಂದ್ರನ್, ಸಿದ್ದಾಂತ್ ಸುಂದರ್, ರಂಗುಸ್ವಾಮಿ ಇವರೊಂದಿಗೆ  ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್‌ಗೆ ಜೋಡಿಯಾಗಿ ಮಾಜಿ ನ್ಯಾಸ ವಿಜ್ಘಾನಿ ನಂದ ನಟಿಸಿದ್ದಾರೆ.

ಸತೀಶ್‌ಪಾಠಕ, ಗಿರೀಶ್‌ಪಟೇಲ್, ಚಂದ್ರಶೇಖರಮಣೂರ ನಿರ್ಮಾಪಕರು, ಆನಂದಚಿತವಾಡಗಿ, ರೂಪಾಂಜಲಿಬಡಿಗೇರ, ಉಮೇಶ್ ಸುರೇಬಾನ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಪುನೀತ್‌ರಾಜ್‌ಕುಮಾರ್ ಧ್ವನಿಯಾಗಿರುವ ‘ಸಜ್ಜಿ ರೊಟ್ಟಿ’ ವೈರಲ್ ಆಗಿರುವುದು ಪ್ಲಸ್ ಪಾಯಿಂಟ್ ಅಗಿದೆ. ಪ್ರಚಾರದ ಕೊನೆ ಹಂತವಾಗಿ ಸಂಗೀತ ಸಾಯಂಕಾಲವೆಂದು ತಂಡವು ಹಾಡಿನ ತುಣುಕುಗಳನ್ನು  ಮಾದ್ಯಮದವರಿಗೆ ತೋರಿಸಿದರು.  ಸುಮಾರು ೧೦೦ ಕೇಂದ್ರಗಳಲ್ಲಿ ಚಿತ್ರವು ಇದೇ ಶುಕ್ರವಾರದಂದು ಬಿಡುಗಡೆಯಾಗಲಿದೆ.

Leave a Comment