ಹಲ್ಲೆ ನಡೆಸಿದ ವ್ಯಕ್ತಿ ವಕೀಲನಲ್ಲ-ಸ್ಪಷ್ಟನೆ

ದಾವಣಗೆರೆ, ಅ. 11- ನಗರದ ಹದಡಿ ರಸ್ತೆಯಲ್ಲಿ ಸಂಚಾರಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗೂ ದಾವಣಗೆರೆ ಜಿಲ್ಲಾ ವಕೀಲರ ಸಂಘ ಹಾಗೂ ವಕೀಲರಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎಸ್.ಲಿಂಗರಾಜು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಯಾವುದೇ ವಕೀಲರಾಗಲಿ ಮೊದಲು ಜಿಲ್ಲಾ ವಕೀಲರ ಸಂಘದಲ್ಲಿ ನೊಂದಣಿಯಾಗಿ ಸದಸ್ಯತ್ವ ಪಡೆಯಬೇಕು. ಆದರೆ ನಿನ್ನೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿ ರುದ್ರೇಶ್ ಅವರು ಯಾವುದೇ ಸದಸ್ಯತ್ವ ಪಡೆದಿಲ್ಲ, ಆದ್ದರಿಂದ ಅವರಿಗೂ, ಸಂಘಕ್ಕೂ ಯಾವುದೇ ಸಂಬಂಧವಿಲ್ಲ, ದಾವಣಗೆರೆಯ ವಕೀಲರು ಸೌಹಾರ್ದಯುತವಾಗಿದ್ದಾರೆ. ಹಾಗೂ ಶಾಂತಿಯುತವಾಗಿ ಕರ್ತವ್ಯ ನಿರ್ವಹಿಸಿಕೊಂಡು ಮಾದರಿಯಾಗಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷ ಎನ್.ಟಿ.ಮಂಜುನಾಥ್, ಎಸ್.ಬಸವರಾಜು, ವಿನಯಕುಮಾರ್, ಹೆಚ್.ದಿವಾಕರ್ ಇದ್ದರು.

Leave a Comment