ಹಲ್ಲೆ : ಖಂಡನೆ

ಕುಂದಗೋಳ ಎ21-  ನವಲಗುಂದ ತಾಲೂಕಿನ ಮಣಕವಾಡ ಗ್ರಾಮದಲ್ಲಿ ಕಳೆದ ರವಿವಾರ ದಿ16 ರಂದು ಗ್ರಾಮದ ಅಂಬೇಡ್ಕರ ಓಣಿಯಲ್ಲಿ ಜಯಂತಿಗೆ ಹಾಗೂ ಜಯಂತಿ ಮೆರವಣಿಗೆಗೆ ಅಡ್ಡಿಪಡಿಸಿ ಸ್ಥಳಿಯ ದಲಿತರ ಮೇಲೆ ಅವಮಾನಗೊಳಿಸಿರುವದು ಖಂಡನೀಯ ಎಂದು ಪಟ್ಟಣದ ಬಿ.ಆರ್.ಅಂಬೇಡ್ಕರ ದಲಿತ ಸಂಘರ್ಷ ಸಮಿತಿಯು ಇಂದು ಬೆಳಿಗ್ಗೆ ತಹಶಿಲ್ದಾರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ತನ್ನ ಮನವಿ ಅರ್ಪಿಸಿತು.
ಅಂಬೇಡ್ಕರ ಜಯಂತಿಯಂದು ದಲಿತರನ್ನು ಹೊಡೆದು-ಬಡಿದು ಮಾಡಿ ಥಳಿಸಿದ್ದಲ್ಲದೆ ಜಾತಿನಿಂದನೆ ಎಸಗಲಾಗಿದ್ದು, ಓಣಿಯನ್ನು ಭಐದ ವಾತಾವರಣದಂತೆ ಮಾಡಲಾಗಿದೆ. ಈ ಕುರಿತು ಮುದ್ರಿತ ಮಾದ್ಯಮದಲ್ಲಿ ಶಾಂತಿ ಸಂಭೆ ಜರುಗಿದೆ ಎಂದು ಸುಳ್ಳು ವರದಿ ನೀಡಿದವರನ್ನು ಕೂಡಲೇ ಬಂಧಿಸಿ, ಹಲ್ಯೆ ಮಾಡಿದವರನ್ನೂ ಬಂಧಿಸಿ ಕೂಡಲೇ ಕಠಿಣ ಶಿಕ್ಷೆ ನೀಡಬೇಕು ಎಂದು ಸಮಿತಿಯು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶರೀಫ ಜೋಗಮ್ಮನವರ, ಹಾಲೇಶ ಬ್ಯಾಲ್ಯಾಳ, ಕಿರಣ ಜೋಗಮ್ಮನವರ, ಅಕ್ಷಯ ಚಲವಾದಿ, ಮಾರುತಿ ಕಾಗಿ, ಕೋಟೇಶ ಮೂಲಿಮನಿ, ಮಾಂತೇಶ ಮಂಗೂಣೀ, ಅವಿನಾಶ ಚಲವಾದಿ ಹಾಗೂ ಮೈಲಾರಪ್ಪ ಕಾಲವಾಡ ಸೇರಿದಂತೆ ಇತರರಿದ್ದರು.

Leave a Comment