ಹಲ್ಲೆಗೊಳಗಾಗಿದ್ದ ಯುವಕ ಸಾವು, ಕೊಲೆ ಪ್ರಕರಣ ದಾಖಲು

ಅನೈತಿಕ ಸಂಬಂಧ

@h18 =

ಕಲಬುರಗಿ,ಜೂ.20-ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹಲ್ಲೆಗೊಳಗಾಗಿ ಸೊಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ನಗರದ ಮಿಜುಗುರಿ ಬಡಾವಣೆ ನಿವಾಸಿ ಶಂಸುದ್ದೀನ್ ತಂದೆ ನಿಜಾಮುದ್ದೀನ್ ಲಂಗಡೆ (32) ಮೃತಪಟ್ಟ ಯುವಕ.

ಶಂಸುದ್ದೀನ್ ಲಂಗಡೆ ತನ್ನ ಸ್ನೇಹಿತ ಮಹ್ಮದ್ ರಫಿಕ್  ತಾಯಿ ಮತ್ತು ತಂಗಿಯ ಜೊತೆಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಎನ್ನಲಾಗಿದ್ದು, ಈ ಸಂಬಂಧ ಶಂಸುದ್ದೀನ್ ಗೆ ಮಹ್ಮದ್ ರಫಿಕ್ ಹಲವಾರು ಬಾರಿ ಬುದ್ಧಿವಾದ ಹೇಳಿದ್ದರೂ ಕೇಳದೆ ಸಂಬಂಧ ಮುಂದುವರಿಸಿದ್ಧ ಎನ್ನಲಾಗಿದೆ. ಇದರಿಂದಾಗಿ ಮಹ್ಮದ್ ರಫಿಕ್ ತನ್ನ ಗೆಳೆಯರಾದ ಸಂತ್ರಾಸವಾಡಿಯ ಶೇರು, ಜಾವೇದ್, ಸೋಯೆಬ್ ಅವರೊಂದಿಗೆ ಸೇರಿ ಶಂಸುದ್ದೀನ್ ನನ್ನು ಜೂ.8 ರಂದು ಸಂತ್ರಾಸವಾಡಿಯ ಪೆಟ್ರೋಲ್ ಬಂಕ್ ಹಿಂದುಗಡೆ ಕರೆದುಕೊಂಡು ಹೋಗಿ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಶಂಸುದ್ದೀನ್ ನನ್ನು ಆತನ ಮನೆಯವರು ಸೊಲ್ಲಾಪುರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಂಸುದ್ದೀನ್ ಮೃತಪಟ್ಟಿದ್ದು, ಆತನ ಕುಟುಂಬದವರೀಗ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಮಹ್ಮದ್ ರಫಿಕ್, ಶೇರು, ಜಾವೇದ್ ಮತ್ತು ಸೋಯೆಬ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮಹ್ಮದ್ ರಫಿಕ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Leave a Comment