ಹಲಸು ಗಾತ್ರದಷ್ಟೇ ಆರೋಗ್ಯ ರಕ್ಷಕ

‘ಹಸಿದಾಗ ಹಲಸು ಉಂಡಾಗ ಮಾವು’ ಎಂಬ ಗಾದೆಮಾತಿನಂತೆ, ‘ಹಲಸಿನಹಣ್ಣು ಎಲ್ಲರೂ ಇಷ್ಟಪಡುವಂತಹ ಹಣ್ಣಾಗಿದೆ. ಚಳಿಗಾಲದ ಅಂತ್ಯದಲ್ಲಿ ಹಾಗೂ ಬೇಸಿಗೆಯ ಆರಂಭದಲ್ಲಿ ಹಣ್ಣಾಗಲು ಪ್ರಾರಂಭವಾಗುತ್ತದೆ. ಗಾತ್ರದಲ್ಲಿ ಹೇಗೆ ದೊಡ್ಡದಾಗಿರುತ್ತದೋ ಅದೇ ರೀತಿಯಲ್ಲಿ ಆರೋಗ್ಯ ರಕ್ಷಣೆಯಲ್ಲೂ ಮಹತ್ವದ ಪಾತ್ರ ವಹಿಸಲಿದೆ.
ವಿಶೇಷವೆಂದರೆ, ಹಲಸಿನಕಾಯಿ, ಹಲಸಿನಹಣ್ಣು, ಹಲಸಿನ ಬೀಜ ಎಲ್ಲವನ್ನೂ ಆಹಾರ ಪದಾರ್ಥಗಳ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ. ಈ ಹಣ್ಣಿನಲ್ಲಿ ಸಮೃದ್ಧವಾದ ಸಪೋಲಿನ್ ಲಿಗ್ನನ್ಸ್, ಫೈಟೋನ್ಯೂಟ್ರಿಯೆಂಟ್ ಮತ್ತು ಐಸೋಫ್ಲೋವೊನ್‌ಗಳೆಂಬ ಅಂಶಗಳನ್ನು ಹೊಂದಿದೆ.
ನಿಯಮಿತವಾಗಿ ಈ ಹಣ್ಣನ್ನು ಸೇವನೆ ಮಾಡಿದರೆ, ಹೊಟ್ಟೆಹುಣ್ಣು, ಎಂಡೋಮೆಟ್ರಿಯತ್ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆಗಳು, ಕೊಲಾನ್ ಕ್ಯಾನ್ಸರ್ ಸೇರಿದಂತೆ, ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಸಹಕಾರಿಯಾಗಿದೆ.
ಫೈಬರ್ ಅಂಶ ಸಮೃದ್ಧವಾಗಿ ಹೊಂದಿರುವ ಹಲಸಿನಹಣ್ಣಿನ ಸೇವನೆಯಿಂದ ಮಲಬದ್ಧತೆಯಂತಹ ಸಮಸ್ಯೆಯೂ ನಿವಾರಣೆಯಾಗಲಿದೆ.
ಈ ಹಣ್ಣನ್ನು ತಿಂದರೆ ಹೊಟ್ಟೆ ಉಬ್ಬರ ಉಂಟಾಗುವುದು ಎಂಬುದು ಕೆಲವರ ಅಭಿಪ್ರಾಯ. ಆದರೆ ಇತಿಮಿತಿಯಲ್ಲಿ ತಿಂದರೆ, ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬುದನ್ನು ಮರೆಯಬಾರದು.
ಹಲಸಿನಹಣ್ಣು ಉಷ್ಣವಲಯದಲ್ಲಿ ಬೆಳೆಯುವುದರಿಂದ ಅತ್ಯುತ್ತಮ ಪ್ರೋಟೀನ್ ಅಂಶಗಳನ್ನು ಒಳಗೊಂಡಿದೆ. ಹಸಿವಾದಾಗ ತಿನ್ನಲು ಅತ್ಯುತ್ತಮ ಆಹಾರವಾಗಿದೆ. ನೀವು ಸೇವಿಸುವ ಫ್ರೂಟ್ ಸಲಾಡ್, ದೈನಂದಿನ ಊಟ ಮತ್ತು ಉಪಾಹಾರ ಸಂದರ್ಭದಲ್ಲಿ ಹಲಸಿನಹಣ್ಣು ಇದ್ದರೆ, ಆರೋಗ್ಯ ಸುಧಾರಣೆಗೆ ನೆರವಾಗಲಿದೆ.
ರಕ್ತ ಪರಿಚಲನೆ ಕೆಲಸವನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಹಲಸಿನ ಬೀಜ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಿದೆ. ಹಲಸಿನಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಮಾಡಲಿದೆ.
ಸಾಮಾನ್ಯವಾಗಿ ನಮ್ಮನ್ನು ಕಾಡುವ ಶೀತ, ನೆಗಡಿ, ಜ್ವರ, ಕೆಮ್ಮುಗಳಂತಹ ರೋಗಗಳನ್ನು ನಿಗ್ರಹಿಸುವ ಸಾಮರ್ಥ್ಯ ಈ ಹಣ್ಣಿನಲ್ಲಿದೆ. ದೇಹದ ಸುತ್ತ ವೈರಸ್ ಸುಳಿಯದಂತೆ ರಕ್ಷಣೆ ನೀಡಲಿದೆ.
ಹಲಸಿನಹಣ್ಣಿನಲ್ಲಿ ಹೇರಳವಾಗಿ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಇರುವುದರಿಂದ ಯಾವುದೇ ಬಗೆಯ ಕೊಲೆಸ್ಟ್ರಾಲ್‌ಗಳನ್ನು ಹೆಚ್ಚಿಸುವುದಿಲ್ಲ.
ಇದೊಂದು ಅತ್ಯುತ್ತಮ ನೈಸರ್ಗಿಕ ಆಹಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಲ್ಲಿರುವ ಫ್ರಕ್ಟೋಸ್ ಹಾಗೂ ಸುಕ್ರೋಸ್ ಅಂಶಗಳು ದಿನನಿತ್ಯದ ಚಟುವಟಿಕೆಗೆ ಬೇಕಾಗುವ ಶಕ್ತಿಯನ್ನು ಒದಗಿಸುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಹಲಸಿನಹಣ್ಣು ನೆರವಾಗಲಿದೆ. ಅಲ್ಲದೆ, ಹೃದಯಕ್ಕೆ ಸಂಬಂಧಿಸಿದಂತೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಜೀರ್ಣಕ್ರಿಯೆಗೆ ಸಹಕರಿಸಲು ಹಲಸಿನಹಣ್ಣಿನಲ್ಲಿ ಉತ್ತಮ ನಾರಿನಾಂಶ ಇದೆ.
ಸರಿಯಾದ ಚಯಾಪಚಯ ಕ್ರಿಯೆಗಳಿಗೆ ಉತ್ತೇಜನ ನೀಡಿ, ಕರುಳಿಗೆ ಸಂಬಂಧಿಸಿದ ಅಪಾಯ ತಡೆಯಲು ನೆರವಾಗಲಿದೆ.

Leave a Comment