ಹರ್ಷಗುಪ್ತಾ ತಾಯಿಯವರ ಬ್ಯಾಂಕ್ ಖಾತೆಯಿಂದ 40 ಸಾವಿರ ರೂ. ಮಂಗಮಾಯ

ಕಲಬುರಗಿ,ನ.10-ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರ ತಾಯಿ ಮಿತಿಲೇಶ್ ಗುಪ್ತಾ ಅವರ ಬ್ಯಾಂಕ್ ಖಾತೆಯಿಂದ 40 ಸಾವಿರ ರೂಪಾಯಿ ಮಂಗಮಾಯವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಿತಿಲೇಶ್ ಗುಪ್ತಾ ಅವರ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸನ ಎಟಿಎಂಕಾರ್ಡ ಬಳಸಿ ಬೆಂಗಳೂರಿನ ವಸಂತ ನಗರದ ಸಿಟಿ ಬ್ಯಾಂಕ್ ಎಟಿಎಂನಿಂದ 40 ಸಾವಿರ ರೂಪಾಯಿ ಡ್ರಾ ಮಾಡಲಾಗಿದೆ.
ಈ ಸಂಬಂಧ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರ ಪಿ.ಎ.ಪುರಮ್ ಶಾಂತನು ಇಲ್ಲಿನ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹರ್ಷಗುಪ್ತಾ ಅವರು ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತಮ ಎಂಬಾತ 15 ದಿನಗಳ ಹಿಂದೆ ಇಲ್ಲಿಗೆ ಬಂದಿದ್ದ. ನ.5 ರಂದು ಮರಳಿ ಬೆಂಗಳೂರಿಗೆ ಹೋಗಿದ್ದು, ಮನೆಗೆ ಬಂದಿದ್ದ ವೇಳೆ ಉತ್ತಮ ಎಟಿಎಂ ಕಾರ್ಡ ಕಳವು ಮಾಡಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Comment