ಹರಿಪ್ರಿಯಾ ಲುಕ್‌ಗೆ ಅಭಿಮಾನಿಗಳು ಫಿಧಾ

ನಟಿ ಹರಿಪ್ರಿಯಾ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ’ಸೂಜಿದಾರ’ದಲ್ಲಿ ಮದ್ಯಮ ವರ್ಗದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡರೆ ’ಬೆಲ್‌ಬಾಟಮ್’ನಲ್ಲಿ ರೆಟ್ರೋ ಲುಕ್, ’ಕಥಾ ಸಂಗಮ’ದಲ್ಲಿ ಪಿಎಚ್‌ಡಿ ವಿದ್ಯಾರ್ಥಿ, ’ಕನ್ನಡ್ ಗೊತ್ತಿಲ್ಲ’ ಚಿತ್ರದಲ್ಲಿ ಕನ್ನಡದ ಭಾಷಾಭಿಮಾನ, ಇನ್ನೂ ’ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಕೆಗೆ ಕಾರಣರಾಗಿದ್ದಾರೆ.

ಚಿತ್ರದ ಮೊದಲ ಲುಕ್‌ಗೆ ಅಭಿಮಾನಿಗಳು ಫಿಧಾ ಆಗಿದ್ದ ಬೆನ್ನಲ್ಲೇ ಇಂದು ಹುಟ್ಟುಹಬ್ಬಕ್ಕಾಗಿ ಮತ್ತೊಂದು ಲುಕ್ ಬಿಡುಗಡೆಯಾಗಿದೆ.ಅದರಲ್ಲಿ ಬೈಕ್ ಏರಿ ಬರುತ್ತಿರುವ ಖದರ್ ತನಿಖಾಧಿಕಾರಿಯ ಪಾತ್ರದ ಗಮ್ಮತ್ತು ಎತ್ತಿ ತೋರಿಸುವಂತಿದೆ.
’ಕನ್ನಡ್ ಗೊತ್ತಿಲ್ಲ’ ಚಿತ್ರದ ಮೋಷನ್ ಪೋಸ್ಟರ್,’ಸೂಜಿದಾರದ’ಟೀಸರ್‌ಕೂಡ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿಬಿಡುಗಡೆಯಾಗಿವೆ.ಇದರ ನಡುವೆ ಐತಿಹಾಸಿಕ ಚಿತ್ರ ಕುರುಕ್ಷೇತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
’ಡಾಟರ್ ಆಫ್ ಪಾರ್ವತಮ್ಮ’ ಚಿತ್ರ ಜೀವನಲ್ಲಿ ಕನ್ನಡದ ೨೫ ನೇ ಚಿತ್ರ.ಹೀಗಾಗಿ ಒಂದಷ್ಟು ನಿರೀಕ್ಷೆ ಇದೆ. ಲುಕ್ ನೋಡಿ ಚಿತ್ರರಂಗದ ಸ್ನೇಹಿತರು ಮತ್ತು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಇದು ಖುಷಿಯ ಸಂಗತಿ. ನಟಿಯಾಗಿ ಇದಕ್ಕಿಂತ ಸಂತಸ ಇನ್ನೇನು ಬೇಕು ಅನ್ನುತ್ತಾರೆ ಹರಿಪ್ರಿಯಾ.
ಚಿತ್ರರಂಗಕ್ಕೆ ಬಂದು ಹನ್ನೊಂದು ವರ್ಷ ಕಳೆದಿರುವ ಹರಿಪ್ರಿಯಾ ಕನ್ನಡದಲ್ಲಿ ತಾವೊಬ್ಬ ಪ್ರತಿಭಾವಂತ ನಟಿ ಎನ್ನುವುದನ್ನು ನಿರೂಪಿಸುವ ಪರಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.
ಯಾವುದೇ ವಿವಾದಕ್ಕೆ ಆಸ್ಪದ ಮಾಡಿಕೊಡದೆ ತಾವಾಯಿತು ತಮ್ಮ ಕೆಲಸವಾಯಿತು ಎನ್ನವಷ್ಟರ ಮಟ್ಟಿಗೆ ಕಾಯಕದಲ್ಲಿ ನಂಬಿಕೆ ಇಟ್ಟವರು. ಇದೇ ಕಾರಣಕ್ಕಾಗಿಯೇ ಹೊಸ ಮತ್ತು ವಿಭಿನ್ನ ಪಾತ್ರಗಳು ಹರಿಪ್ರಿಯಾ ಅವರನ್ನು ಹುಡುಕಿಕೊಂಡು ಬರುತ್ತಿವೆ. ಇನ್ನಷ್ಟು ಕತೆಗಳ ಹುಡುಕಾಟದಲ್ಲಿದ್ದಾರೆ.
ಹುಟ್ಟುಹಬ್ಬಕ್ಕಾಗಿ ತಮ್ಮ ಚಿತ್ರಗಳ ಟೀಸರ್,ಮೋಷನ್ ಪೋಸ್ಟರ್ ಬಿಡುಗಡೆಯಾಗಿರುವುದು ಸಂತಸ ಅವರಲ್ಲಿ ಮನೆ ಮಾಡಿದೆ. ವಿಭಿನ್ನ ಪಾತ್ರ ಮಾಡಿದರಷ್ಟೇ ಜನರು ಗುರುತಿಸುತ್ತಾರೆ ಎನ್ನುವುದು ’ನೀರ್‌ದೋಸೆ” ಚಿತ್ರದಿಂದ ಅರ್ಥವಾಗಿದೆ.ಹೀಗಾಗಿ ಬೇರೆ ಬೇರೆಯ ಪಾತ್ರಗಳನ್ನು ಮಾಡುತ್ತಿದ್ದೇನೆ.
ಚಿಕ್ಕವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದವಳು ನಾನು, ಇಂದು ೨೬ ವರ್ಷ ಪೂರೈಸಿ ೨೭ನೇ ವರ್ಷಕ್ಕೆ ಕಾಲಿಸಿರಿಸಿದ್ದೇನೆ. ಈ ದಿನ ಅಭಿಮಾನಿಗಳಿಗಾಗಿ ಮೀಸಲು. ಬಳಿಕ ಒಂದಷ್ಟು ಬಿಡುವು ಪಡೆದಿದ್ದೇನೆ. ಮತ್ತೆ ಚಿತ್ರೀಕರದಲ್ಲಿ ಭಾಗಿಯಾಗುತ್ತೇನೆ ಎನ್ನುತ್ತಾರೆ ಹರಿಪ್ರಿಯಾ.
ಒಂದಷ್ಟು ಕಥೆಗಳನ್ನು ಕೇಳುತ್ತಿದ್ದೇವೆ. ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಚಿತ್ರರಂಗ ಸ್ನೇಹಿತರ ಪ್ರೀತಿ ವಿಶ್ವಾಸ ಸಿಕ್ಕಿರುವುದು ಖುಷಿಯಾಗಿದೆ ಎಂದು ಹೇಳಿಕೊಂಡರು.

ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ನಟಿಯರ ಸಾಲಿನಲ್ಲಿ ಮುಂಚೂಣಿ ಸಾಲಿನಲ್ಲಿರುವ ನಟಿ ಹರಿಪ್ರಿಯಾ ಅವರಿಗೆ ಇಂದು ೨೭ನೇ ಹುಟ್ಟುಹಬ್ಬದ ಸಂಭ್ರಮ. ಇದೇ ಖುಷಿಯಲ್ಲಿ ಅವರ ಮುಂಬರುವ ಹಾಗು ಬಹು ನಿರೀಕ್ಷಿತ ಚಿತ್ರ “ಡಾಟರ್ ಆಫ್ ಪಾರ್ವತಮ್ಮ”ದ ಎರಡನೇ ಲುಕ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಫಿಧಾ ಆಗಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

Leave a Comment