ಹರಿದಾಸ ಸಾಹಿತ್ಯದಿಂದ ಮಹಿಳೆಯರಿಗೆ ಸಾಮಾಜಿಕ ನ್ಯಾಯ

ಜಿಲ್ಲಾ ಸಾಹಿತ್ಯ ಸಮ್ಮೇಳನ : ಮಹಿಳೆಯರನ್ನು ಗೌರವಿಸಿ
(ಚಿದಾನಂದ ದೊರೆ)
ಸಿಂಧನೂರು.ಅ.23- ಹೆಣ್ಣು ಸಮಾಜದ ಕಣ್ಣಾಗಿದ್ದು, ಹಾಗಾಗಿ ಪ್ರತಿಯೊಬ್ಬರು ಮಹಿಳೆಯರನ್ನು ಗೌರವಿಸಬೇಕಾಗಿದೆಂದು ಡಾ. ಲಕ್ಷ್ಮೀಕಾಂತ ಮೊಹರೀರ ಅವರು ಕರೆ ನೀಡಿದರು.
ಅವರಿಂದು ಹತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ರೌಡಕುಂದಾ ಪ್ರಭಾನಂದ ಪಂಡಿತ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಹರಿದಾಸ ಸಾಹಿತ್ಯ ಕುರಿತು ಮಾತನಾಡಿದ ಅವರು, ವಿಜಯ ದಾಸರು, ಗೋಪಾಲದಾಸರು, ರಂಗನಾಥ ದಾಸರು ಓಡಾಡಿದ ಈ ನಾಡು ಪವಿತ್ರವಾಗಿದೆಂದರು. ಹರಿದಾಸ ಸಾಹಿತ್ಯದಲ್ಲಿ ಒಬ್ಬಳೇ ಮಹಿಳೆ ಇದ್ದು, ಅವರೆ ತುರಕಿ ತಿಮ್ಮಮ್ಮರಾಗಿದ್ದರು.
ತ್ಯಾಗ, ಭಕ್ತಿ ಪ್ರತೀಕವೇ ಹರಿದಾಸರಾಗಿದ್ದಾರೆ. ಮಹಿಳೆಯರಿಗೆ ಶಿಕ್ಷಣ ಕೊಡದೇ ಎರಡನೇ ದರ್ಜೆಯ ಪ್ರಜೆಯನ್ನಾಗಿ ನೋಡಲಾಗಿದೆ. ಹೆಣ್ಣಿನ ಮನಸ್ಸಿನ ಭಾವನೆಗಳಿಗೆ ಯಾವುದೇ ಅವಕಾಶಗಳಿಲ್ಲ. ದಾಸ ಸಾಹಿತ್ಯದಿಂದ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಸಿಗುತ್ತದೆ. ಹನ್ನೆರಡು ವರ್ಷದ ಬಾಲಕಿಗೆ, ಎಂಬತ್ತು ವರ್ಷದ ವರನಿಗೆ ಕೊಟ್ಟು ಮದುವೆ ಮಾಡುವುದು ಯಾವ ನ್ಯಾಯ ಎಂದ ಅವರು, ಮದುವೆ ನಂತರ ವರ ಮರಣ ಹೊಂದಿದಾಗ ಬಾಲಕಿಯ ತುಡಿತ ಹಂಬಲಗಳಿಗೆ ಅವಕಾಶ ಇರುವುದಿಲ್ಲ.
ಅಲ್ಲದೆ, ಮರು ಮದುವೆಯಾಗದೆ ಜೀವನ ಪೂರ್ತಿ ಮಹಿಳೆ ಕಷ್ಟ – ಕಾರ್ಪಣ್ಯ ಅನುಭವಿಸಬೇಕಾಗುತ್ತದೆ. ವಿಧವೆಯ ಮಹಿಳೆಗೆ ಮರು ಮದುವೆ ಮಾಡಿ, ಸಮಾಜದಲ್ಲಿ ಇತರೆ ಮಹಿಳೆಯರಂತೆ ಸಾಮಾಜಿಕ ಸ್ಥಾನ ಮಾನಗಳನ್ನು ನೀಡುವುದು ಅವಶ್ಯಕತೆ ಇದೆಂದರು.
ಗೋಷ್ಠಿಯ ಅಧ್ಯಕ್ಷತೆ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅವರು ವಹಿಸಿದ್ದರು. ವಿರುಭದ್ರಪ್ಪ ಕುರುಕುಂದಿ, ದಾನಪ್ಪ ಮಸ್ಕಿ , ಅಮರೇಶ ಬಲ್ಲಿದವ, ಅಡವಿರಾವ್, ಅಶೋಕ ಗೌಡ ಗದ್ರಟಗಿ, ಡಾ.ಹುಸೇನಪ್ಪ ಅಮರಾಪುರ, ತಾಯರಾಜ್, ಸಮ್ಮೇಳನ ಅಧ್ಯಕ್ಷ ಪೊ.ಶಾಶ್ವತಯ್ಯ ಸ್ವಾಮಿ ಮುಕ್ಕುಂದಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment