ಹರಪನಹಳ್ಳಿ-ಹಡಗಲಿ ನನ್ನ ಎರಡು ಕಣ್ಣುಗಳು

ಹರಪನಹಳ್ಳಿ.ಮೇ.16; ಹರಪನಹಳ್ಳಿ ಮತ್ತು ಹೂವಿನ ಹಡಗಲಿ ನನ್ನ ಎರಡು ಕಣ್ಣುಗಳು ಇದ್ದಹಾಗೆ ನನಗೆ ರಾಜಕೀಯ ಭವಿಷ್ಯ ನೀಡಿದ ನನ್ನ ಹರಪನಹಳ್ಳಿ ಜನತೆಯನ್ನು ನಾನು ಎಂದೂ ಮರೆಯಲ್ಲ ಹರಪನಹಳ್ಳಿ ಮತದಾರರ ಋಣತೀರಿಸುತ್ತೇನೆ ಎಂದು ಕರ್ನಾಟಕ ಸರ್ಕಾರದ ಮುಜರಾಯಿ ಹಾಗೂ ಕೌಶಲ್ಯಭಿವೃದ್ದಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಟ್ಟಣದ ವಾಲ್ಮೀಕಿ ಭವನದ ಹೊರವಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಹಾಗೂ ಅವರ ಜೊತೆ 50 ಕ್ಕೂ ಹೆಚ್ಚು ಜನ ಅವರ ಬೆಂಬಲಿಗರು ಬಿಜೆಪಿ ಪಕ್ಷ ತೊರೆದು ಬಳ್ಳಾರಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಶಿವಯೋಗಿ ಹಾಗೂ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಅವರನ್ನು ಪಕ್ಷಕ್ಕೆ ಸ್ವಾಗತಿಸಿ ನಂತರ ಮಾತನಾಡಿದ ಅವರು ಈ ಹಿಂದೆ ಬಿಜೆಪಿಯಲ್ಲಿದ್ದ ಹೆಚ್.ಕೆ.ಹಾಲೇಶ್ ಕಾರಣಂತರಗಳಿಂದ ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜಕೀಯದಲ್ಲಿ ಇದೆಲ್ಲಾ ಸಹಜ ಎಂದರು
ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ್ ಮಾತನಾಡಿ, ನಾನು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿ ಪಕ್ಷ ಸಂಘಟಿಸುವಲ್ಲಿ ಶ್ರಮಿಸಿದ್ದೆನೆ. ಪ್ರಾಮಾಣಿಕವಾಗಿ ಜಾತ್ಯಾತೀತವಾಗಿ ರಾಜಕೀಯಕ್ಕೆ ಬಂದವನು ನಾನು ನನ್ನ ಮನಸಾರೇ ಬಿಜೆಪಿ ಪಕ್ಷವನ್ನು ತೊರೆದು ಮರಳಿ ನನ್ನ ಮಾತೃ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆನೆ. ಸಾಮಾನ್ಯ ಜನರ ನೋವನ್ನು ಆಲಿಸದೇ ಇರುವಂತಹ ನಾಯಕರು ಬಿಜೆಪಿಯಲ್ಲಿದ್ದಾರೆ ಆದಕ್ಕೆ ಮನನೋಂದು ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬಂದು ಗೂಡಿಗೆ ಸೇರಿದ್ದೆನೆ, ಮುಂದಿನ ದಿನಮಾನಗಳಲ್ಲಿ ನಡೆಯಲಿರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಹರಪನಹಳ್ಳಿ ತಾಲೂಕನ್ನು ಮತ್ತೆ ಕಾಂಗ್ರೆಸ್ ಭದ್ರ ಕೋಟೆಯನ್ನಾಗಿ ನಾವು ನೀವುಗಳೆಲ್ಲಾರೂ ಸೇರಿ ಪಕ್ಷ ಸಂಘಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಶಿವಯೋಗಿ, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಭಟ್, ಮಾತನಾಡಿದರು, ತಾಲೂಕಿನ ಮೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಕೆ.ಪ್ರಕಾಶ್, ಎಸ್. ಮಂಜುನಾಥ್, ಬೇಲೂರು ಅಂಜಿನಪ್ಪ ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಲ್.ಪೋಮ್ಯಾನಾಯ್ಕ, ಶಶಿಧರ್ ಪೂಜಾರ್, ಜಿ.ಪಂ.ಸದಸ್ಯ ಹೆಚ್.ಬಿ. ಪರಶುರಾಮಪ್ಪ, ಆಲದಹಳ್ಳಿ ಷಣ್ಮುಖಪ್ಪ, ಮರಿಯಪ್ಪ, ಪಿ.ಟಿ.ಭರತ್, ಎಂ.ಪಿ.ವೀಣಾ ಚರಂತೀಮಠ್, ವೆಂಕಟೇಶ್, ಜಾವೀದ್, ಅಬ್ದುಲ್ ರಹಿಮಾನ್ ಸಾಬ್, ನೀಲಗುಂದ ವಾಗೇಶ್, ಬಾಣದ ಅಂಜಿನಪ್ಪ, ಎಂ.ಕೆ.ರಾಯಲ್ ಸಿದ್ದಿಕ್ , ಹನುಮಂತಪ್ಪ ರಾಯದುರ್ಗ ವಾಗಿಶ್, ಅಡಿಗ ಅಂಜಿನಪ್ಪ ಇತರರು ಇದ್ದರು

 

Leave a Comment