ಹರಪನಹಳ್ಳಿ; ವಿವಿಧೆಡೆ ಶಿವನಾಮ ಸ್ಮರಣೆ

ಹರಪನಹಳ್ಳಿ.ಮಾ.5- ಶಿವರಾತ್ರಿ ಹಬ್ಬದ ಅಂಗವಾಗಿ ತಾಲೂಕಿನ ನೀಲಗುಂದ ಗ್ರಾಮದ ಐತಿಹಾಸಿಕ ಭೀಮೇಶ್ವರ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ ಹವನಗಳನ್ನು ನೆರವೇರಿಸಿ ವಿಶೇಷ ಅಭಿಷೇಕಗಳನ್ನು ನೆರವೇರಿಸಲಾಯಿತು. ಬಾಗಳಿ ಗ್ರಾಮದ ಐತಿಹಾಸಿ ಕಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ, ತಾಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಪಂಚಗಣಾಧೀಶ್ವರ ಮದ್ದಾನೇಶ್ವರ ಪುತ್ರನಾದ ಗೋಣಿಬಸವೇಶ್ವರ ದೇವಸ್ಥಾನ ಹಾಗೂ ದೊಡ್ಡ ಮೈಲಾರ ಶ್ರೀಮೈಲಾರಲಿಂಗೇಶ್ವರ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪಟ್ಟಣದ ಕೆಂಪೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದ ಈಶ್ವರ ದೇವಾಲಯದಲ್ಲಿ ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಇದಲ್ಲದೇ ತಾಲೂಕಿನ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮದೇವಿ, ತಿಮ್ಮಲಾಪುರ ವೆಂಕಟೇಶ್ವರಸ್ವಾಮಿ, ಚಿಗಟೇರಿ ನಾರದಮುನಿ, ಅರಸೀಕೆರೆ ದಂಡಿನ ದುರುಗಮ್ಮ, ಗುಳೇದ ಲಕ್ಕಮ್ಮದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

Leave a Comment