ಹರದೊಳ್ಳಿಯನ್ನು ನರೇಗಾ ಯೋಜನೆಗೆ ಸೇರಿಸಲು ಮನವಿ

ಗುಳೇದಗುಡ್ಡ ಮೇ.24-ಇಲ್ಲಿನ ಗುಳೇದಗುಡ್ಡಕ್ಕೆ ಸಂಬಂಧಿಸಿದ ಹರದೊಳ್ಳಿ, ಹಾಗೂ ಗ್ರಾಮದ ಸರ್ವೆ ನಂಬರಗಳನ್ನು ಉದ್ಯೋಗ ಖಾತ್ರಿ ಯೋಜನೆಗೆ ಅಥವಾ ಪಂಚಾಯತಿ ವ್ಯಾಪ್ತಿಯಡಿ ಸೇರಿಸಬೇಕು ಎಂದು ಅಲ್ಲಿನ ರೈತರು ತಹಶೀಲ್ದಾರ ಹಾಗೂ ತಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹರದೊಳ್ಳಿ ಗ್ರಾಮದ ಸುಮಾರು 500ರಿಂದ 600ಕ್ಕೂ ಹೆಚ್ಚು ಕುಟುಂಬಗಳು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸುತ್ತಿವೆ. ಈ ಭಾಗದಲ್ಲಿಯೇ ಮಾಲ್ಕಿ ಜಮೀನು ಹೊಂದಿದ್ದು, ಕೃಷಿಗೆ ಸಂಬಂಧಿಸಿದಂತೆ ಯಾವುದೇ ಸೌಲಭ್ಯಗಳು ಇಲ್ಲಿನ ಜನರಿಗೆ ದೊರೆಯುತ್ತಿಲ್ಲ ಎಂದು ದೂರಿದರು.
ಪಂಚಾಯತಿ ವ್ಯಾಪ್ತಿಯಲ್ಲಿ ಮಾಲ್ಕಿ ಜಮೀನು ಹೊಂದಿದ ರೈತರಿಗೆ ದನದ ಕೊಟ್ಟಿಗೆ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬದು ನಿರ್ಮಾಣ ಹಾಗೂ ಕೃಷಿ ಹೊಂಡಗಳಿಗೆ ಸಹಾಯ ಧನ ಸೇರಿದಂತೆ ಈ ಯೋಜನೆಗಳಿಂದ ನಾವು ವಂಚಿತರಾಗಿದ್ದೇವೆ. ಆದ್ದರಿಂದ ಹರದೊಳ್ಳಿ ಸೀಮೆಯ ರೈತರಿಗೆ, ಹೊಲಗನ್ನು ಸಮೀಪವಿರುವ ಪಂಚಾಯತಿಗಳಿಗೆ ಸೇರಿಸಿ ಸರ್ಕಾರದ ಯೋಜನೆಗಳನ್ನು ದೊರಕಿಸಿಕೊಡಬೇಕು ಎಂದು ಈ ಭಾಗದ ರೈತರು ಮನವಿ ಮಾಡಿದರು.
ಅಲ್ಲದೇ ಈ ಸೀಮೆಯ ಯುವಕರು, ರೈತರು ಕೊರೊನಾ ವೈರಸ್‍ದಿಂದ ಯಾವುದೇ ಕೆಲಸ ಕಾರ್ಯವಿಲ್ಲದೇ ಅಲೆದಾಡುವಂತಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಹರದೊಳ್ಳಿ ಗ್ರಾಮದ ರೈತರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ, ರೈತ ನಾಗಪ್ಪ ಗೌಡರ, ಪುರಸಭೆ ಸದಸ್ಯ ಹನಮಂತ ಗೌಡರ, ಲಕ್ಷ್ಮಣ ಹಾಲನ್ನವರ, ಕಮಲಪ್ಪ ಹೂನೂರು, ನಾಗಪ್ಪ ಹಾದಿಮನಿ ಅವರು ತಹಶೀಲ್ದಾರ ಜಿ.ಎಂ.ಕುಲಕರ್ಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪುನೀತ ಅವರಿಗೆ ಮನವಿ ಸಲ್ಲಿಸಿ ಮತ್ತಿತರರು ಒತ್ತಾಯಿಸಿದರು

Share

Leave a Comment