ಹರಜಾತ್ರಾ ಮಹೋತ್ಸವ ನಾಳೆ ಅಕ್ಕಮಹಾದೇವಿಯ ವಚನ ಕಟ್ಟುಗಳ ಮೆರವಣಿಗೆ

ಹರಿಹರ;ಜ.14; ಪ್ರಪ್ರಥಮ ಹರಜಾತ್ರಾ ಮಹೋತ್ಸವ ಮತ್ತು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಬೆಳ್ಳಿಬೆಡಗು ಮಹೋತ್ಸವ ಹಾಗೂ ಜಗದ್ಗುರು ಪೀಠದ ದ್ವಾದಶಮಾನೋತ್ಸವ ಸಮಾರಂಭದಲ್ಲಿ ನಾಳೆ ಬೆಳಗ್ಗೆ 7 ಕ್ಕೆ ಸದ್ಬಕ್ತರಿಗೆ ರುದ್ರಾಕ್ಷಿ ಧಾರಣೆ ನಡೆಯಲಿದೆ. ಹಗರಿಬೊಮ್ಮನಹಳ್ಳಿಯ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ,ಸಿದ್ದಾರೂಢಮಠದ ಮಾತಾ ಯೋಗೇಶ್ವರಿತಾಯಿ ಉಪಸ್ಥಿತರಿರುವರು. ನಂತರ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಇಷ್ಟಲಿಂಗ ಮಹಾ ಪೂಜೆ ಜರುಗಲಿದೆ.ಬೆಳಗ್ಗೆ 8.30 ರಿಂದ ಅಕ್ಕಮಹಾದೇವಿ ವಚನ ವಿಜಯೋತ್ಸವ ಸಂಕ್ರಾಂತಿ ಸಂಭ್ರಮ,ಕುಂಭಮೇಳ ಹಾಗೂ ಜಾನಪದ ಕಲಾಮೇಳ ನಡೆಯಲಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟನೆ ನೆರವೇರಿಸಲಿದ್ದಾರೆ.ಹರಿಹರದ ಹರಿಹರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗುವ ಮೆರವಣಿಗೆಯಲ್ಲಿ ಅಕ್ಕಮಹಾದೇವಿಯ ವಚನ ಕಟ್ಟುಗಳನ್ನು ಆನೆ ಅಂಬಾರಿಯಲ್ಲಿರಿಸಿ ಕುಂಭ ಹೊತ್ತ ಭಕ್ತರು ವಚನ ಪಠಣದೊಂದಿಗೆ ಧಾರ್ಮಿಕ,ಐತಿಹಾಸಿಕ ಸಾಮಾಜಿಕ ಸ್ತಬ್ದ ದೃಶ್ಯಗಳು ಹಾಗೂ ವಿವಿಧ ಜನಪದ ಕಲಾತಂಡಗಳೊಂದಿಗೆ ಸಾಗಲಿದೆ.ನಂತರ ಬೆಳಗ್ಗೆ 11 ಕ್ಕೆ ಬೆಳವಡಿ ಮಲ್ಲಮ್ಮ ವೇದಿಕೆಯಲ್ಲಿ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಲಾಗುವುದು. ತರಳಬಾಳು ಜಗದ್ಗುರು ಪೀಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಜಿ,ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ,ಎರೆಹೊಸಳ್ಳಿಯ ಶ್ರೀ ವೇಮನಾನಂದಪುರಿ ಸ್ವಾಮೀಜಿ, ಬೀದರ್ ನ ಅಕ್ಕ ಅನ್ನಪೂರ್ಣ ಅವರು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬೆಳವಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಮಹಿಳಾಘಟಕದ ನಾಗರತ್ನಮ್ಮ ಭಾವಿಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ, ವಸಂತ ಹುಲ್ಲತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ರಮೇಶ್ ಜಾರಕಿಹೊಳಿ,ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರುಗಳಾದ ಮಹೇಶ್ ಕುಟಳ್ಳಿ,ಗಣೇಶ್ ಹುಕ್ಕೇರಿ, ಈ ತುಕಾರಾಮ್, ಪರಿಷತ್ ಸದಸ್ಯ ಕೆ.ಗೋವಿಂದರಾಜು, ಎಂ.ಆರ್.ಎನ್ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮುರುಗೇಶ್ ನಿರಾಣಿ, ಕಾರ್ಯನಿರ್ವಾಕ ನಿರ್ದೇಶಕ ಸಂಗಮೇಶ್ ಆರ್ ನಿರಾಣಿ ಮತ್ತಿತರರು ಆಗಮಿಸಲಿದ್ದಾರೆ. ನಾಳೆ ಮಧ್ಯಾಹ್ನ 2 ಕ್ಕೆ ಸಮಾಜಕ್ಕಾಗಿ ದುಡಿದ ಕೈಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಮಂಗಳೂರು ರಾಮಕೃಷ್ಣಮಠದ ಏಕಗಮ್ಯಾನಂದ ಶ್ರೀ, ಹುಲ್ಯಾಳದ ಶ್ರೀ ಹರ್ಷಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಮಧ್ಯಾಹ್ನ 3ಕ್ಕೆ ಕೆಳದಿ ಚೆನ್ನಮ್ಮ ವೇದಿಕೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ದ್ವಾದಶಮಾನೋತ್ಸವ ಹಾಗೂ ಯೋಗಸಿಂಹಾಸನಾಧೀಶ್ವರ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಯವ ದ್ವಿತೀಯ ಪೀಠಾರೋಹಣ ನಡೆಯಲಿದೆ.ಶಾಸಕ ಡಿ.ಕೆ ಶಿವಕುಮಾರ್ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ ಅಧ್ಯಕ್ಷತೆ ವಹಿಸಲಿದ್ದಾರೆ.ಬೆವಿ ಬೆಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿಲಿದ್ದಾರೆ. ಮುಖ್ಯತಿಥಿಗಳಾಗಿ  ಶಾಸಕ ಶಿವಾನಂದ ಪಾಟೀಲ್, ಎನ್ ಜಿ ನಾಗನಗೌಡರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ.

Leave a Comment