ಹಬ್ಬದಲ್ಲಿ ಅಬ್ಬರದ ಜೂಜಾಟ-43 ಜನರ ಬಂಧನ

ಹುಬ್ಬಳ್ಳಿ,ನ 9 ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 43 ಜನರನ್ನು ಪೊಲೀಸರು ಬಂಧಿಸಿದ್ದು, ಬಂದಿತರಿಂದ 22,960 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ  ಅಬ್ದುಲ್ ಅಜೀಜ್ ಮೀರಸಾಬ್ ಕಡಕೋಳ ಸೇರಿದಂತೆ 4 ಜನರನ್ನು ಬಂಧಿಸಿದ ಪೊಲೀಸರು ಇವರಿಂದ 1,560 ರೂ.ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೋಹನ ಗಜಾನನ ಸನ್ ಬ್ರೇಕರ್ ಸೇರಿದಂತೆ ಇತರ 6 ಜನರನ್ನು ಬಂಧಿಸಿದ್ದು, ಇವರಿಂದ 1550 ರೂ.ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಮ್ತಿಯಾಜ್ ಶಕೀಲ್ ಅಹ್ಮದ ಬಳ್ಳಾರಿ ಸೇರಿದಂತೆ 11 ಜನರನ್ನು ಬಂಧಿಸಿದ್ದು, ಬಂಧಿತರಿಂದ 4800 ರೂ.ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಮೇಶ ಸಿದ್ದಪ್ಪ ಮರಿಯಪ್ಪನವರ ಸೇರಿದಂತೆ 12 ಜನರನ್ನು ಬಂಧಿಸಿದ್ದು, ಇವರಿಂದ 9230 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗರಾಜ ಮಂಜುನಾಥ ಕುರಡಿಕೇರಿ ಸೇರಿದಂತೆ 5 ಜನರನ್ನು ಬಂಧಿಸಿದ್ದು, ಇವರಿಂದ 5820 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Comment