ಹನುಮ ವಿಹಾರಿಗೆ ವಿಶ್ವಾಸ ತುಂಬಿದ ದ್ರಾವಿಡ್

ಲಂಡನ್, ಸೆ. ೧೦- ಭಾರತ ಕ್ರಿಕೆಟ್ ತಂಡದ ಅತಿರಥ ಮಹಾರಥರೆಲ್ಲರೂ ಇಂಗ್ಲೆಂಡ್‌ನ ಬೌಲಿಂಗ್ ದಾಳಿ ಎದುರಿಸಲಾಗದೆ ಕುಸಿದಾಗಲೂ ಕೆಚ್ಚೆದೆಯಿಂದ ನಿಂತು ಅರ್ಧಶತಕ ಗಳಿಸಿದ ಹನುಮ ವಿಹಾರಿಗಿದು ಮೊದಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯ!
ಇದು ಸಾಧ್ಯವಾದದ್ದು ಕರ್ನಾಟಕದ ರಾಹುಲ್ ದ್ರಾವಿಡ್ ಅವರೊಂದಿಗೆ ಕೆಲವು ನಿಮಿಷಗಳ ಕಾಲ ಫೋನ್ ಸಂಭಾಷಣೆ ನಡೆಸಿ ಸಲಹೆಗಳನ್ನು ಪಡೆದ ನಂತರ!
80 ರನ್ ಗಳಿಸಿ ಅಜೇಯರಾಗುಳಿದ ರವೀಂದ್ರ ಜಡೇಜಾ ಜತೆಗೂಡಿ 77 ರನ್‌ಗಳ ಪಾಲುದಾರಿಕೆ ಸಾಧಿಸಿದ ಹನುಮ ವಿಹಾರಿ 56 ರನ್ ಗಳಿಸಿದರು.
`ನಾನು ಮೈದಾನಕ್ಕಿಳಿಯುವ ಒಂದು ದಿನ ಹಿಂದೆ ದ್ರಾವಿಡ್ ಅವರಿಗೆ ಫೋನ್ ಮಾಡಿದ್ದೆ. ನಮ್ಮಿಬ್ಬರ ನಡುವಿನ ಒಂದೆರೆಡು ನಿಮಿಷದ ಸಂಭಾಷಣೆಯಲ್ಲಿ ಅವರು `ನಿನ್ನಲ್ಲಿ ಕೌಶಲ್ಯವಿದೆ. ನಿಂತು ಆಡಬಲ್ಲ ಮನೋಧೋರಣೆಯಿದೆ. ವಿಶ್ವಾಸದಿಂದ ಮೈದಾನಕ್ಕಿಳಿದು ಖುಷಿಯಿಂದ ಆಡು’ ಎಂದಿದ್ದರು. ಅವರ ಈ ಮಾತುಗಳು ನನ್ನಲ್ಲಿ ವಿಶ್ವಾಸ ತುಂಬಿ ಉತ್ತಮವಾಗಿ ಆಡಲು ಸಾಧ್ಯವಾಯಿತು’ ಎಂದೂ ಹನುಮ ವಿಹಾರಿ ಹೇಳಿದ್ದಾರೆ.

Leave a Comment