ಹನುಮಾನ್ ಸೇತು ದೇವಾಲಯದಲ್ಲಿ ಯೋಗಿ ಆದಿತ್ಯನಾಥ್ ವಿಶೇಷ ಪೂಜೆ

ಲಖನೌ, ಏ 16 -ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ರಾಜಧಾನಿ ಲಖನೌದ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ದೇವಾಲಯದಲ್ಲಿ ಸ್ವಲ್ಪ ಹೊತ್ತು ಕುಳಿತು ಹನುಮಾನ್ ಚಾಲೀಸ ಪಠಿಸಿದರು.  ಲಖನೌದಿಂದ ಗೋರಕ್ ಪುರಕ್ಕೆ ತೆರಳಲಿರುವ ಅವರು, ಎರಡು ದಿನ ಅಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿ, ನೀತಿಸಂಹಿತೆ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರ ಪ್ರಚಾರಕಾರ್ಯಕ್ಕೆ ಚುನಾವಣಾ ಆಯೋಗ 72 ಗಂಟೆಗಳ ನಿಷೇಧ ಹೇರಿದೆ.

ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ- 48 ಗಂಟೆ, ಸಮಾಜವಾದಿ ಮುಖಂಡ ಮೊಹಮದ್ ಅಜಂಖಾನ್ -72, ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು 48 ಗಂಟೆ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ.

 

Leave a Comment