ಹದಡಿ ಪೋಲಿಸ್ ಠಾಣೆಯಲ್ಲಿ ಔಷಧೀಯ ಸಸ್ಯಗಳ ಅನಾವರಣ

ದಾವಣಗೆರೆ.ಮಾ.15; ತಾಲ್ಲೂಕಿನ ಹದಡಿ ಪೊಲೀಸ್ ಠಾಣೆಯ ಆವರಣದಲ್ಲಿ ರಕ್ತದಾನ ಶಿಬಿರ ಹಾಗೂ ಔಷಧೀಯ ಸಸ್ಯಗಳ ತೋಟದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್, ಡಿ ವೈ ಎಸ್ ಪಿ ದೇವರಾಜ್ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹದಡಿ ಪೊಲೀಸ್ ಠಾಣಾ ಆವರಣದಲ್ಲಿ ಎಪ್ಪತ್ತಕ್ಕೂ ಹೆಚ್ಚು ಔಷಧಿಯ ಸಸ್ಯಗಳನ್ನು ಠಾಣಾ ಆವರಣದಲ್ಲಿ ನೆಡಲಾಯಿತು..ಅಷ್ಟೇ ಅಲ್ಲದೇ ಹದಡಿ ಪೊಲೀಸ್ ಠಾಣಾ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಇದೇ ವೇಳೆ ಮಾತನಾಡಿದ ಎಸ್ಪಿ ಆರ್.ಚೇತನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ, ಟ್ರಾಫಿಕ್ ಹಾಗೂ ಕಳ್ಳತನ ಪ್ರಕರಣ ನಡೆದಂತೆ ನೋಡಿಕೊಳ್ಳುವುದು ಅವರ ಕೆಲಸ. ಆದರೆ ದೇವರಾಜ್ ನೇತೃತ್ವದ ತಂಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಔಷಧೀಯ ಸಸ್ಯಗಳ ಬೆಳೆಸಿರುವುದು ಶ್ಲಾಘನೀಯ.ರಕ್ತದಾನದ ಬಗ್ಗೆ ಜನರಿಗೆ ಸಾಕಷ್ಟು ಅನುಮಾನಗಳಿವೆ…ಈ ರೀತಿಯ ಕಾರ್ಯಕ್ರಮ ಮಾಡುವುದರಿಂದ ಅದನ್ನು ಅಳಿಸಿ ಹಾಕಲು ಅನುಕೂಲವಾಗಲಿದೆ. ನಾನು ಸಹ ಇಪ್ಪತ್ತನೇ ವಯಸ್ಸಿನಲ್ಲಿ ಮೊದಲ ಬಾರಿಗೆ ರಕ್ತದಾನ ಮಾಡಿದ್ದೆ. ಇಂದಿಗೂ ಮುಂದುವರೆಸಿಕೊಂಡು ಬಂದಿದ್ದೇನೆ. ಹದಡಿ ಪೊಲೀಸ್ ಠಾಣೆ ಜಿಲ್ಲೆಯ ಇತರ ಪೊಲೀಸ್ ಠಾಣೆಗೆ ಮಾದರಿಯಾಗಿದ್ದು, ಎಲ್ಲಾ ಠಾಣೆಗಳಲ್ಲಿ ಈ ರೀತಿಯ ಕೆಲಸ ಮಾಡಲು ಸೂಚನೆ ನೀಡುತ್ತೇನೆ ಎಂದರು

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಿವೈಎಸ್‍ಪಿ ದೇವರಾಜ್ ನಾನು ಪ್ರಬಾರಿಯಾಗಿದ್ದಾಗ ಇಲ್ಲಿ ಶ್ರಮದಾನ ಮಾಡಿದ್ದೇವು.ಅದೇ ರೀತಿ ಇಲ್ಲಿ ಔಷದಿಯ ಸಸ್ಯಗಳನ್ನು ಬೆಳೆಸಲು ಚಿಂತನೆ ನಡೆಸಲಾಗಿತ್ತು. ಇಂದು ಎಪ್ಪತ್ತಕ್ಕೂ ಹೆಚ್ಚು ಸಸ್ಯಗಳನ್ನು ಇಲ್ಲಿ ನೆಟ್ಟಿದ್ದೇವೆ. ಔಷಧಿಯ ಸಸ್ಯಗಳನ್ನು ಬೆಳೆಸುವುದರಿಂದ ಸಿಬ್ಬಂದಿಗಳಿಗೆ ಅದರ ಮಹತ್ವದ ಜೊತೆಗೆ ಠಾಣೆಗೆ ಬರುವವರಿಗೆ ಮಾಹಿತಿ ತಿಳಿಸಲು ಅನುಕೂಲವಾಗಲಿದೆ.ರಕ್ತದಾನ ಮಾಡುವುದರಿಂದ ಹಾರ್ಟ್ ಅಟ್ಯಾಕ್ ಆಗುವುದಿಲ್ಲಾ, ಈ ರೀತಿ ರಕ್ತದಾನ ಮಾಡುವುದರಿಂದ ಒಳ್ಳೆಯ ಕೆಲಸ ಮಾಡಿದ್ದೇವೆ ಎಂಬ ಆತ್ಮತೃಪ್ತಿ ನಮಗೆ ಇರುತ್ತದೆ ಎಂದರು.
ಈ ವೇಳೆ ಶ್ರೀನಿವಾಸಲು, ಚಿಕ್ಕಸ್ವಾಮಿ, ಕಾಂಚನ್ ಸಿಂಗ್, ಡಾ. ಧನಂಜಯ್, ಶಕೀರ್ ಅಲಿ, ರೇಣುಕಾ, ಹದಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮಹಿಳಾ ಪೇದೆ ಕುಮಾರಿ ಲಕ್ಷ್ಮೀ ದೇವಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಪೊಲೀಸ್ ಪೇದೆ ಪರಶುರಾಮ ವಂದನಾರ್ಪಣೆ ಮಾಡಿದರು.

Leave a Comment